ಮುಕ್ಕೂರು: ಅಂಚೆ ಕಚೇರಿ ದಿಢೀರ್‌ ಸ್ಥಳಾಂತರ

ಗ್ರಾಹಕರಿಗೆ ತೊಂದರೆ; ಸ್ಥಳಾಂತರಕ್ಕೆ ಜನರ ಆಕ್ಷೇಪ

Team Udayavani, May 30, 2019, 6:00 AM IST

x-16

ಸವಣೂರು: ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಅಂಚೆ ಕಚೇರಿಯಲ್ಲಿ ವ್ಯವಹಾರ ಹೊಂದಿದ್ದ ನೂರಾರು ಜನರಿಗೆ ತೊಂದರೆ ಉಂಟಾಗಿದೆ.

ಮೇ 22ರ ಅನಂತರ ಅಂಚೆ ಕಚೇರಿ ವ್ಯವಹಾರಕ್ಕೆಂದು ಬಂದವರಿಗೆ ಕಚೇರಿ ಬಾಗಿಲಿಗೆ ಅಂಟಿಸಲಾದ ಸ್ಥಳಾಂತರದ ನೋಟಿಸ್‌ ಕಂಡು ವಿಷಯ ಗೊತ್ತಾಗಿದೆ. ಸ್ಥಳಾಂತರಿಸುವ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜನರಿಗೆ ಅನುಕೂಲಕರವಾಗಿದ್ದ ಅಂಚೆ ಕಚೇರಿ ದಿಢೀರ್‌ ವರ್ಗಾವಣೆ ಖಂಡಿಸಿ ಹೋರಾಟಕ್ಕಿಳಿಯಲು ನಿರ್ಧರಿಸಲಾಗಿದೆ.

ಅರ್ಧ ಶತಮಾನ ಕಾರ್ಯ
ಬೆಳ್ಳಾರೆ ಅಂಚೆ ವಿಭಾಗಕ್ಕೆ ಒಳಪಟ್ಟ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಸರಿ ಸುಮಾರು 55 ವರ್ಷಗಳ ಹಿಂದೆ ಅಂಚೆ ಕಚೇರಿ ತೆರೆಯಲಾಗಿತ್ತು. ಖಾಸಗಿ ಕಟ್ಟಡವೊಂದರಲ್ಲಿ ಕಚೇರಿ ಕಾರ್ಯನಿರ್ವಹಿಸುತಿತ್ತು. ಈ ಅಂಚೆ ಕಚೇರಿ ಪೆರುವಾಜೆ ಗ್ರಾಮದಲ್ಲೆ ಅತಿ ಹೆಚ್ಚು ಗ್ರಾಹಕರನ್ನು ಮುಕ್ಕೂರಿನಲ್ಲಿ ಹೊಂದಿತ್ತು. ಮೇ 22ರಿಂದ ಹಿಂದೆ ಅಂಚೆ ಕಚೇರಿಗೆ ಬೀಗ ಜಡಿದು, ಇಲ್ಲಿನ ಎರಡು ಕಿ.ಮೀ. ದೂರದ ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಗ್ರಾಹಕರ ಆಕ್ಷೇಪ
ಮುಕ್ಕೂರು ಪರಿಸರದಲ್ಲಿ 250ಕ್ಕೂ ಅಧಿಕ ಮಂದಿ ಆರ್‌ಡಿ ಸೌಲಭ್ಯ ಹೊಂದಿದ್ದರು. ಎಫ್‌ಡಿ, ಇನ್ಸೂರೆನ್ಸ್‌ ಅಕೌಂಟ್ದಾರರು ಇದ್ದಾರೆ. ನೂರಾರು ಮಂದಿಗೆ ಪತ್ರ ವ್ಯವಹಾರಕ್ಕೂ ಅನುಕೂಲವಾಗಿತ್ತು. ಆದರೆ ದಿಢೀರ್‌ ಸ್ಥಳಾಂತರದ ಪರಿಣಾಮ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಹಣ ಕಟ್ಟಲು ಬಂದವರು ಮರಳಿ ಮನೆ ತೆರಳುವ ಸ್ಥಿತಿ ಉಂಟಾಗಿದೆ. ತಾವು ಹೊಂದಿರುವ ಸೌಲಭ್ಯಗಳು ಏನಾಗಬಹುದು ಎನ್ನುವ ಆತಂಕವೂ ಇದೆ. ಅಂಚೆ ಕಚೇರಿ ಮುಚ್ಚಿದೆಯೇ ಅಥವಾ ಸ್ಥಳಾಂತರವಾಗಿದೆಯೇ ಎನ್ನುವ ಗೊಂದಲ ಜನರಿಗೆ ಉಂಟಾಗಿದೆ ಎನ್ನುತ್ತಾರೆ ಗ್ರಾಹಕರು.

ಅಕೌಂಟ್ ಸ್ಥಗಿತಕ್ಕೆ ನಿರ್ಧಾರ?
ವಯಸ್ಕರು ಸಹಿತ ಹೆಚ್ಚಿನವರು ಇಲ್ಲಿ ಆರ್‌ಡಿ, ಎಫ್‌ಡಿ, ಇನ್ಸೂರೆನ್ಸ್‌ ಖಾತೆ ಹೊಂದಿದ್ದು, ದಿಢೀರ್‌ ಸ್ಥಳಾಂತರದ ಪರಿಣಾಮ ತಾವು ಹೂಡಿದ ಹಣವನ್ನು ಹಿಂಪಡೆದು ಅಕೌಂಟ್ ಸ್ಥಗಿತಗೊಳಿಸಲು ಈ ಭಾಗದ ಗ್ರಾಹಕರು ನಿರ್ಧರಿಸಿದ್ದಾರೆ. ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಪೆರು ವಾಜೆ ಸೀಮಿತ ಬಸ್‌ ಓಡಾಟವಿದೆ. ವಾರಕ್ಕೊಮ್ಮೆ 50, 100 ರೂ. ಪಾವತಿಸುವವರು ಪೆರುವಾಜೆ ತನಕ ತೆರಳಬೇಕಾದರೆ ಅರ್ಧ ದಿನ ವ್ಯಯಿಸಬೇಕು. ಹೀಗಾಗಿ ಎಲ್ಲಾ ಸೌಲಭ್ಯ ಮೊಟಕುಗೊಳಿಸಿ ಅಂಚೆ ವ್ಯವಹಾರದಿಂದ ದೂರ ಸರಿಯಲು ಗ್ರಾಹಕರು ನಿರ್ಧರಿಸಿರುವುದಾಗಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಶಿಥಿಲ ಕಟ್ಟಡ, ನೆಟ್ವರ್ಕ್‌ ಸಮಸ್ಯೆ
ಹಾಲಿ ಕಟ್ಟಡ ಶಿಥಿಲ ಗೊಂಡಿರುವುದು, ನೆಟ್ವರ್ಕ್‌ ಸಮಸ್ಯೆ, ಗ್ರಾ.ಪಂ. ಕಟ್ಟಡದಲ್ಲೇ ಕಾರ್ಯ ನಿರ್ವಹಿಸಬೇಕು ಎನ್ನುವ ಕೇಂದ್ರ ಸರಕಾರದ ಆದೇಶದಿಂದ ಮುಕ್ಕೂರು ಅಂಚೆ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ. ಹಾಲಿ ಕಟ್ಟಡದ ಛಾವಣಿ ಶಿಥಿಲಾವಸ್ಥೆಗೆ ತಲುಪಿರುವುದು ತುರ್ತು ಸ್ಥಳಾಂತರಕ್ಕಿರುವ ಪ್ರಮುಖ ಕಾರಣ. ಮುಖ್ಯವಾಗಿ ಕೇಂದ್ರ ಸರಕಾರ ಇಂಡಿಯಾ ಪೋಸ್ಟ್‌ ಪೇಮಂಟ್ ಬ್ಯಾಂಕ್‌ ಜಾರಿ ಮಾಡಿದ್ದು, ಈ ಮೂಲಕ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡಬೇಕಿದೆ. ಮಕ್ಕಳ ಅಕೌಂಟ್ ಮೊಬೈಲ್ ಮೂಲಕವೇ ಆಗಬೇಕಿದೆ. ಇದಕ್ಕೆ ಚಾಲನೆ ನೀಡಬೇಕಾದರೆ ನೆಟ್ವರ್ಕ್‌ ಅಗತ್ಯವಿದೆ. ಇಲ್ಲಿ ನೆಟ್ವರ್ಕ್‌ ಸಮಸ್ಯೆ ಇದೆ. ಈ ಮೂರು ಕಾರಣಗಳಿಂದ ಸ್ಥಳಾಂತರಗೊಳಿಸಲಾಗಿದೆ ಎನ್ನುವುದು ಅಂಚೆ ಇಲಾಖೆಯ ಮಾತು.

ಸರಕಾರದ ಆದೇಶದಂತೆ ಕ್ರಮ

ಕೇಂದ್ರ ಸರಕಾರದ ಆದೇಶದ ಪ್ರಕಾರ ಗ್ರಾ.ಪಂ. ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಶಿಥಿಲ ಕಟ್ಟಡ ಹಾಗೂ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಅಕೌಂಟ್ ತೆರೆಯಲು ನೆಟ್ವರ್ಕ್‌ ಅಗತ್ಯ ಮನಗಂಡು ತುರ್ತಾಗಿ ಸ್ಥಳಾಂತರಿಸಲಾಗಿದೆ. ಆರಂಭದಿಂದಲು ಪೆರುವಾಜೆ ಅಂಚೆ ಕಚೇರಿ ಎಂದು ನಮೂದಾಗಿದ್ದು, ಅಲ್ಲಿ ಕಟ್ಟಡ ಇರದ ಕಾರಣ ಮುಕ್ಕೂರಿನಲ್ಲಿ ತೆರೆಯಲಾಗಿತ್ತು. ಗ್ರಾಹಕರಿಗೆ ಸೇವೆಯಲ್ಲಿ ತೊಂದರೆ ಆಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಸ್ಥಳಾಂತರದ ಬಗ್ಗೆ ಅಂಚೆ ಪೇದೆ ಮೂಲಕ ಮನೆ ಮನೆಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
– ಮೆಲ್ವಿನ್‌ ಲೋಬೋ, ಇನ್‌ಸ್ಪೆಕ್ಟರ್‌, ಅಂಚೆ ಇಲಾಖೆ, ಸುಳ್ಯ
10 ದಿನದಲ್ಲಿ ಪುನರಾರಂಭ

ಮುಕ್ಕೂರಿನ ಅಂಚೆ ಕಚೇರಿಯನ್ನು ದಿಢೀರ್‌ ಆಗಿ ಪೆರುವಾಜೆ ಗ್ರಾಮ ಪಂಚಾಯತ್‌ ಕಟ್ಟಡಕ್ಕೆ ಸ್ಥಳಾಂತರಿಸಿರುವ ವಿಚಾರ ತಿಳಿದ ತತ್‌ಕ್ಷಣ ಅಂಚೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅದನ್ನು ಮತ್ತೆ ಮುಕ್ಕೂರಿನಲ್ಲೇ ಉಳಿಸುವಂತೆ ಸೂಚಿಸಿದ್ದೇನೆ. ಹಾಲಿ ಕಟ್ಟಡ ಶಿಥಿಲವಾಗಿರುವ ಕಾರಣ ಮುಕ್ಕೂರಿನಲ್ಲಿ ಲಭ್ಯವಿರುವ ಬೇರೆ ಕಟ್ಟಡದಲ್ಲಿ 10 ದಿನಗಳೊಳಗೆ ಅಂಚೆ ಕಚೇರಿ ಆರಂಭಗೊಳ್ಳಲಿದೆ.
– ನಳಿನ್‌ ಕುಮಾರ್‌ ಕಟೀಲು,ಸಂಸದರು, ದ.ಕ. ಲೋಕಸಭಾ ಕ್ಷೇತ್ರ

ಏಕಾಏಕಿ ನಿರ್ಧಾರ ಸರಿಯಲ್ಲ

ಏಕಾಏಕಿ ಅಂಚೆ ಕಚೇರಿ ಸ್ಥಳಾಂತರಿಸಿರುವುದು ಸರಿಯಲ್ಲ. ಊರವರ ಜತೆ ಚರ್ಚಿಸಬೇಕಿತ್ತು. 50 ವರ್ಷದ ಅಧಿಕ ಕಾಲ ಈ ಊರಿನವರಿಗೂ, ಅಂಚೆ ಕಚೇರಿಗೆ ಒಳ್ಳೆಯ ನಂಟಿತ್ತು. ಆದರೆ ಯಾರ ಗಮನಕ್ಕೆ ತಾರದೆ ಇದನ್ನು ಸ್ಥಳಾಂತರಿಸಲಾಗಿದೆ.
– ಕುಂಬ್ರ ದಯಾಕರ ಆಳ್ವ,ಅಧ್ಯಕ್ಷರು, ಮುಕ್ಕೂರು ಹಾ.ಉ.ಸ.ಸಂಘ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.