ಮುಕ್ಕೂರು: ಅಂಚೆ ಕಚೇರಿ ಪುನಾರಂಭ


Team Udayavani, Jun 15, 2019, 5:00 AM IST

q-23

ಸುಳ್ಯ: ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಏಕಾಏಕಿ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಿದ್ದಕ್ಕೆ ಗ್ರಾಮ ಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ಆರಂಭಿಸಿದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಶುಕ್ರವಾರ ಅಂಚೆ ಕಚೇರಿಯನ್ನು ಮರಳಿ ಮುಕ್ಕೂರಿಗೆ ಸ್ಥಳಾಂತರಿಸಿದೆ.

ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಮೂಲಕ ಮುಕ್ಕೂರಿನಲ್ಲೇ ಅಂಚೆ ಕಚೇರಿ ಮರು ಸ್ಥಾಪಿಸುವಂತೆ ಅಂಚೆ ಇಲಾಖೆಯನ್ನು ಆಗ್ರಹಿಸಲಾಗಿತ್ತು. ಇದರ ಪರಿಣಾಮ ಸ್ಥಳಾಂತರಗೊಂಡು ಮೂರು ವಾರದೊಳಗೆ ಅಂಚೆ ಕಚೇರಿ ಪುನಃ ಮುಕ್ಕೂರಿನಲ್ಲಿ ಕಾರ್ಯಾರಂಭಿಸಿದೆ.

ಅಧಿಕಾರಿಗಳ ಭೇಟಿ
ಜೂ. 14ರಂದು ಪುತ್ತೂರು ಮುಖ್ಯ ಅಂಚೆ ಕಚೇರಿಯ ಹಿರಿಯ ಅಂಚೆ ಅಧೀಕ್ಷಕ ಜಗದೀಶ ಪೈ, ಸಹಾಯಕ ಅಧೀಕ್ಷಕ ಲೋಕನಾಥ, ಸುಳ್ಯ ಅಂಚೆ ಇನ್‌ಸ್ಪೆಕ್ಟರ್‌ ಮೆಲ್ವಿನ್‌ ಲೋಬೋ ಅವರು ಮುಕ್ಕೂರಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು. ಅಂಚೆ ಕಚೇರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಗಣೇಶ್‌ ಶೆಟ್ಟಿ ಕುಂಜಾಡಿ, ಉಮೇಶ್‌ ಕೆಎಂಬಿ, ಕುಶಾಲಪ್ಪ ಮೊದಲಾದವರು ಗ್ರಾಹಕರ ಗಮನಕ್ಕೆ ತಾರದೆ ಏಕಾಏಕಿ ಅಂಚೆ ಕಚೇರಿ ಸ್ಥಳಾಂತರಿಸಿರುವ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನೆಟ್ವರ್ಕ್‌ ಸಮಸ್ಯೆಯಿಂದ ಸ್ಥಳಾಂತರ ನಡೆಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಲು ಮುಂದಾದರೂ, ಇದನ್ನು ಗ್ರಾಹಕರ ಗಮನಕ್ಕೆ ತರಬೇಕಿತ್ತು. ಸಮಸ್ಯೆಗೆ ಊರವರು ಸ್ಪಂದಿಸುತ್ತಿದ್ದರು. ಅದು ಬಿಟ್ಟು ಉದ್ದೇಶಪೂರ್ವಕವಾಗಿ ಸ್ಥಳಾಂತರಿಸಿದ್ದು, ತತ್‌ಕ್ಷಣ ಪುನಾರಂಭಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು. ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕುಸುಮಾಧರ ಮುಕ್ಕೂರು, ಕೇಶವ ಕಂಡಿಪ್ಪಾಡಿ, ಯೂಸುಫ್‌ ಮುಕ್ಕೂರು, ಪುರುಷೋತ್ತಮ ಅಡ್ಯತಕಂಡ, ಲಿಂಗಪ್ಪ ಕುಂಡಡ್ಕ, ದಿವಾಕರ ಬೀರುಸಾಗು, ದೂಮಣ್ಣ ಗೌಡ ಬೀರುಸಾಗು, ಕುಸುಮಾಧರ, ಬೃಂದಾ ಮುಕ್ಕೂರು, ಗಂಗಯ್ಯ, ರೂಪಾನಂದ ಉಪಸ್ಥಿತರಿದ್ದರು.

ಗ್ರಾಮಸ್ಥರ ಹೋರಾಟದ ಫ‌ಲ
ಬೆಳ್ಳಾರೆ ಅಂಚೆ ವಿಭಾಗಕ್ಕೆ ಒಳಪಟ್ಟ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ 55 ವರ್ಷಗಳ ಹಿಂದೆ ಅಂಚೆ ಕಚೇರಿ ತೆರೆಯಲಾಗಿತ್ತು. ಮೇ 22ರಿಂದ ಅಂಚೆ ಕಚೇರಿಗೆ ಬೀಗ ಜಡಿದು, ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಮುಕ್ಕೂರು ಪರಿಸರದಲ್ಲಿ 250ಕ್ಕೂ ಅಧಿಕ ಮಂದಿ ಆರ್‌ಡಿ ಸೌಲಭ್ಯ ಹೊಂದಿದ್ದು ಎಫ್‌ಡಿ, ಇನ್ಶೂರೆನ್ಸ್‌ ಖಾತೆದಾರರಿದ್ದರು. ದಿಢೀರ್‌ ಸ್ಥಳಾಂತರದ ಪರಿಣಾಮ ಅವರು ತೊಂದರೆಗೆ ಈಡಾಗಿದ್ದರು. ಬಳಿಕ ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ರಚಿಸಿ ಗ್ರಾಮಸ್ಥರ ಸಭೆ ನಡೆದು, ಅಂಚೆ ಕಚೇರಿ ಸ್ಥಳಾಂತರ ವಿರೋಧಿಸಿ ಜೂ. 7ರಂದು ಪುತ್ತೂರು ಮುಖ್ಯ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಸಂಸದರಿಗೆ ಮನವಿ ಸಲ್ಲಿಸಲಾಗಿತ್ತು. ಜೂ. 13ರಂದು ನಳಿನ್‌ ಕುಮಾರ್‌ ಕಟೀಲು ಅವರ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ಪುತ್ತೂರು ವಿಭಾಗೀಯ ಹಿರಿಯ ಅಂಚೆ ಅಧೀಕ್ಷಕರ ಸಭೆ ನಡೆದು, ತತ್‌ಕ್ಷಣ ಮುಕ್ಕೂರಿನಲ್ಲಿ ಅಂಚೆ ಕಚೇರಿ ಆರಂಭಿಸುವಂತೆ ಸಂಸದರು ಸೂಚನೆ ನೀಡಿದ್ದರು. ಶುಕ್ರವಾರ ಅಧಿಕಾರಿಗಳು ಮುಕ್ಕೂರಿಗೆ ಭೇಟಿ ನೀಡಿ ಗ್ರಾಮಸ್ಥರ, ಗ್ರಾಹಕರ ಬೇಡಿಕಗೆ ಸ್ಪಂದಿಸುವ ಭರವಸೆ ನೀಡಿದರು. ಪುನಾರಂಭಕ್ಕೆ ಹಳೆ ಕಟ್ಟಡ, ಸೊಸೈಟಿ ಕಟ್ಟಡ ಪರಿಶೀಲಿಸಿದರು. ಶುಕ್ರವಾರ ಮಧ್ಯಾಹ್ನವೇ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರವಾಗಿದ್ದ ಅಂಚೆ ಕಚೇರಿಯನ್ನು ಮುಕ್ಕೂರಿಗೆ ಸ್ಥಳಾಂತರಿಸಲಾಯಿತು.

ಹಳೆಯ ಕಟ್ಟಡಕ್ಕೆ ಸ್ಥಳಾಂತರ
ಶುಕ್ರವಾರ ಮುಕ್ಕೂರಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಅಹವಾಲು ಆಲಿಸಿ, ಸ್ಥಳ ಪರಿಶೀಲನೆ ನಡೆಸಲಾಯಿತು. ಬಳಿಕ ಪೆರುವಾಜೆ ಗ್ರಾ.ಪಂ.ಕಟ್ಟಡದಲ್ಲಿದ್ದ ಅಂಚೆ ಕಚೇರಿಯನ್ನು ಮುಕ್ಕೂರಿನ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
– ಪಾಂಡುರಂಗ ಪೈ. ಹಿರಿಯ ಅಂಚೆ ಅಧೀಕ್ಷಕ, ಪುತ್ತೂರು

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.