ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ
Team Udayavani, Jul 29, 2021, 2:00 AM IST
ಕಡಬ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬದ ಹೊಸಮಠದಲ್ಲಿ ಹೊಸ ಸೇತುವೆ ನಿರ್ಮಾಣ ವಾಗಿ ಮುಳುಗು ಸೇತುವೆ ತೆರವು ಗೊಂಡು ಇತಿಹಾಸದ ಪುಟ ಸೇರಿದರೂ ಎಡೆಬಿಡದೆ ಸುರಿವ ಮಳೆಯ ನಡುವೆ ನೆರೆ ನೀರಿನಲ್ಲಿ ಮುಳುಗೇಳುತ್ತಿದ್ದ ಹಳೆಯ ಸೇತುವೆ ನೆನಪಾಗಿ ಕಾಡುತ್ತಿರುವುದಂತೂ ಸುಳ್ಳಲ್ಲ.
ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೊಂಡು, ದುರಂತಗಳಿಗೆ ಸಾಕ್ಷಿಯಾಗಿದ್ದ ಈ ಸೇತುವೆ ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ ಹೆಚ್ಚು ರಜೆಗೆ ಕಾರಣವಾದ “ಹೆಗ್ಗಳಿಕೆ’ಯನ್ನೂ ಹೊಂದಿತ್ತು.
ಹೊಸಮಠ ಸೇತುವೆಗೆ ಬರೋಬ್ಬರಿ 6 ದಶಕಗಳ ಇತಿಹಾಸ ಇದೆ. ಅಂದು ಮೈಸೂರು ರಾಜ್ಯ ಆಡಳಿತ ಅವಧಿಯಲ್ಲಿ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಉಪ್ಪಿನಂಗಡಿ-ಕಡಬ- ಸುಬ್ರಹ್ಮಣ್ಯ ರಸ್ತೆ ನಿರ್ಮಾಣ ನಡೆದಿತ್ತು. ಆದರೆ ಗುಂಡ್ಯ ಹೊಳೆಗೆ ಹೊಸಮಠದಲ್ಲಿ ಸೇತುವೆ ಇರಲಿಲ್ಲ. ಅಲ್ಲಿ ಸೇತುವೆ ನಿರ್ಮಾ ಣವಾಗಬೇಕು ಎನ್ನುವ ಸ್ಥಳೀಯರ ಅಹ ವಾಲಿಗೆ ಸ್ಪಂದಿಸಿದ ಅಂದಿನ ಸರಕಾರ ಹೊಸ ಮಠದಲ್ಲಿ ಮುಳುಗು ಸೇತುವೆ ನಿರ್ಮಿಸಿತ್ತು.
ಅಂದಿನ ಕಾಲಕ್ಕೆ ಅದೊಂದು ದೊಡ್ಡ ಸೇತುವೆ. ಆದರೆ ನಿರ್ಮಾಣವಾದ ವರ್ಷ ದಲ್ಲೇ ಮಳೆಗಾಲದಲ್ಲಿ ಸೇತುವೆ ಮುಳುಗಡೆ ಯಾಯಿತು. ಅಂದಿನ ಲೋಕೋ ಪಯೋಗಿ ಸಚಿವ ಭಕ್ತವತ್ಸಲಂ 1955ರಲ್ಲಿ ಈ ಸೇತುವೆಯನ್ನು ನೆರೆ ನೀರಿ ನಲ್ಲಿ ಮುಳು ಗಿದ್ದಾಗಲೇ ಉದ್ಘಾಟಿಸಿ ಹೋಗಿದ್ದರು.
ಹಲವು ದುರಂತಗಳಿಗೆ ಸಾಕ್ಷಿಯಾಗಿದ್ದ ಸೇತುವೆ:
ಹೊಸಮಠ ಸೇತುವೆಯ ಇತಿಹಾಸ ಕೆದಕಿ ದರೆ ಹಲವು ದುರಂತ ಘಟನೆಗಳು ಎದುರಾ ಗುತ್ತವೆ. ಸೇತುವೆಯಲ್ಲಿ ನೆರೆ ನೀರು ನಿಂತಾಗ ದಾಟುವ ದುಸ್ಸಾಹಸಕ್ಕೆ ಇಳಿದವರನ್ನು ನೆರೆನೀರು ತನ್ನ ಒಡಲೊಳಗೆ ಸೇರಿಸಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಸೇತುವೆ ನಿರ್ಮಾಣವಾಗಿ ಐದೇ ವರ್ಷದಲ್ಲಿ ಆ ರಸ್ತೆಯಲ್ಲಿ ಓಡಾಡುತ್ತಿದ್ದ ಖಾಸಗಿ ಬಸ್ ನೆರೆ ಸಂದರ್ಭದಲ್ಲಿ ಸೇತುವೆ ದಾಟಲು ಹೋಗಿ ನೀರು ಪಾಲಾಗಿ ಒಬ್ಬ ಬಲಿಯಾಗಿದ್ದರು. ಅದಾದ ಕೆಲವು ವರ್ಷ ಬಳಿಕ ಸುಬ್ರಹ್ಮಣ್ಯಕ್ಕೆ ಬಂದಿದ್ದ ತಮಿಳುನಾಡಿನ ಯಾತ್ರಾರ್ಥಿಗಳು ಸೇತುವೆ ದಾಟಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿದ್ದರೆ ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿಯೊಂದು ನೀರುಪಾಲಾಗಿ ಕೃಷಿಕರೊಬ್ಬರು ಮೃತಪಟ್ಟಿದ್ದರು. 2006ರಲ್ಲಿ ಕಡಬಕ್ಕೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಸೇತುವೆಯಿಂದ ಕೆಳಕ್ಕೆ ಬಿದ್ದು, ನಾಲ್ವರು ನೀರುಪಾಲಾಗಿ ಪ್ರಾಣ ಕಳೆದುಕೊಂಡಿದ್ದರು. ಅಂತೆಯೇ ಅದೆಷ್ಟೋ ಜನ ವಾಹನಗಳು ಆಯ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವುದು ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ. ಅನೇಕರು ಇಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದರು. ಅನೇಕರು ಆತ್ಮಹತ್ಯೆಗೆ ಯತ್ನಿಸಿ ಸಾರ್ವಜನಿಕರ ಸಕಾಲಿಕ ಕ್ರಮದಿಂದ ಪಾರಾದ ಘಟನೆಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.