ನಿಟ್ಟೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮುಂಡೂರು ಗ್ರಾ.ಪಂ. ತಂಡ ಭೇಟಿ
Team Udayavani, Jul 3, 2019, 5:00 AM IST
ನರಿಮೊಗರು: ತ್ಯಾಜ್ಯ ವಿಲೇ ಘಟಕದಲ್ಲಿ ಅಗತ್ಯವಿರುವ ಮೂಲಸೌಕರ್ಯಗಳು, ಹಾಗು ತ್ಯಾಜ್ಯ ವಿಲೇವಾರಿಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ಪಡೆಯಲು ಮುಂಡೂರು ಗ್ರಾಮ ಪಂಚಾಯತ್‌ನ ತಂಡವು ನಿಟ್ಟೆ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಮುಂಡೂರು ಗ್ರಾ.ಪಂ. ವತಿಯಿಂದ ಸರ್ವೆ ಗ್ರಾಮದ ಎಲಿಯದಲ್ಲಿ ತ್ಯಾಜ್ಯ ವಿಲೇ ಘಟಕ ನಿರ್ಮಾಣಗೊಳ್ಳಲಿದ್ದು, ಜಮೀನಿನ ಸಮತಟ್ಟು ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಗ್ರಾ.ಪಂ. ಅಧ್ಯಕ್ಷ ವಸಂತ್ ಎಸ್.ಡಿ., ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ತಾ.ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ನವೀನ್ ಭಂಡಾರಿ, ಮುಂಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಿಂಗಪ್ಪಯ್ಯ ಅವರನ್ನೊಳಗೊಂಡ ತಂಡ ನಿಟ್ಟೆ ಗ್ರಾ.ಪಂ.ನ ತ್ಯಾಜ್ಯ ನಿರ್ವಹಣ ಘಟಕಕ್ಕೆ ಭೇಟಿ ನೀಡಿತು.
ರಾಜ್ಯದ ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ನೀಡಿ ಮಾಹಿತಿ ಪಡೆದುಕೊಂಡು ಮುಂಡೂರು ಗ್ರಾ.ಪಂ.ನಿಂದ ಯಾವುದೇ ಲೋಪಗಳಾಗದಂತೆ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕಾಗಿ ನಿಟ್ಟೆ ಗ್ರಾ.ಪಂ.ಗೆ ತೆರಳಿ ಮಾಹಿತಿ ಪಡೆಯಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ವಸಂತ್ ಎಸ್.ಡಿ. ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.