‘ಕೃಷ್ಣೋತ್ಸವ ಶಕ್ತಿ ನೀಡುವ ಕಾರ್ಯ’
Team Udayavani, Oct 1, 2018, 12:40 PM IST
ಬೆಳ್ತಂಗಡಿ : ಧರ್ಮ ರಕ್ಷಣೆ ಕಾರ್ಯದ ಜತೆಗೆ ಹಿಂದೂ ಬಾಂಧವರಿಗೆ ಶಕ್ತಿ ನೀಡುವ ಉದ್ದೇಶವಾಗಿ ಆರಂಭಗೊಂಡ ಕೃಷ್ಣೋತ್ಸವವು ಪ್ರಸ್ತುತ ಜಿಲ್ಲೆಯ ಪ್ರಮುಖ ಉತ್ಸವವಾಗಿ ಆಕರ್ಷಣೆ ಪಡೆದಿದೆ. ಗೋಸಂರಕ್ಷಣೆ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರನ್ನು ಜಾಗೃತಗೊಳಿಸುವ ಉದ್ದೇಶವೂ ಕೃಷ್ಣೋತ್ಸವದ ಹಿಂದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ರವಿವಾರ ಬೆಳ್ತಂಗಡಿ ಶ್ರೀಕೃಷ್ಣೋತ್ಸವ ಸೇವಾ ಸಮಿತಿ ಆಯೋಜಿಸಿದ್ದ ಕೃಷ್ಣೋತ್ಸವ-2018 ಅನ್ನು ಉದ್ಘಾಟಿಸಿ, ನಾವೆಲ್ಲರೂ ಒಂದೇ ಮನಸ್ಸಿನಿಂದ ಕೃಷ್ಣೋತ್ಸವದಲ್ಲಿ ಪಾಲ್ಗೊಂಡು ಈ ಕಾರ್ಯವನ್ನು ಯಶಸ್ಸುಗೊಳಿಸಲು ಯುವಕರ ತಂಡದ ಜತೆ ಕೈಜೋಡಿಸಬೇಕಿದೆ ಎಂದರು.
ಉಜಿರೆಯ ಉದ್ಯಮಿ ರಾಜೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸುನೀಲ್ ಶೆಣೈ, ಉದ್ಯಮಿಗಳಾದ ಮೋಹನ್, ಸುಧೀರ್ ಭಟ್, ನ್ಯಾಯವಾದಿ ಮುರಳಿ, ಪ.ಪಂ. ಸದಸ್ಯ ಸಂತೋಷ್, ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ರಮೇಶ್ ರೆಂಕೆದಗುತ್ತು, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್‌ಕುಮಾರ್ ಕಾಪಿನಡ್ಕ, ಸಮಿತಿ ಅಧ್ಯಕ್ಷ ಶರತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತಿತರರಿದ್ದರು. ಸಮಿತಿಯ ಪ್ರಧಾನ ಸಂಚಾಲಕ ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಸ್ಮಿತೇಶ್ ಬಾರ್ಯ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.