ನಂದಾವರ-ಪಾಣೆಮಂಗಳೂರು ದೇಗುಲ ಸಂಪರ್ಕ ರಸ್ತೆ ಪ್ರಸ್ತಾವ

ನೇತ್ರಾವತಿ ನದಿ ಪಾತ್ರದ ಮೂರು ಕ್ಷೇತ್ರಗಳ ಜೋಡಣೆ; 7 ಕೋಟಿ ರೂ. ವೆಚ್ಚದ ಯೋಜನೆ

Team Udayavani, Dec 14, 2019, 4:42 AM IST

xd-2

ಕಲ್ಲಡ್ಕ : ನೇತ್ರಾವತಿ ನದಿ ದಂಡೆ ಯಲ್ಲಿ ಶ್ರೀಕ್ಷೇತ್ರ ನಂದಾವರಕ್ಕೆ ಸಂಪರ್ಕಿಸುವ ದೇಗುಲ ಕೂಡು ರಸ್ತೆಗೆ ಯೋಜನೆಯ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು ಒಂದು ದಶಕದ ಹಿಂದೆ ಪಾಣೆಮಂಗಳೂರು – ಶ್ರೀಕ್ಷೇತ್ರ ನಂದಾವರ ಸಂಪರ್ಕ ಸೇತು ನಿರ್ಮಾಣ ಪ್ರಸ್ತಾವ ಆಗಿದ್ದರೂ ಯಾವುದೇ ಪ್ರಗತಿ ಕಾಣದೆ ಉಳಿಕೆಯಾಗಿತ್ತು.

ಮೂರು ಧಾರ್ಮಿಕ ಕ್ಷೇತ್ರಗಳಾದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ದೇವಸ್ಥಾನ, ನಂದಾವರ ಶ್ರೀ ವೀರಮಾರುತಿ ದೇವಸ್ಥಾನ, ಪಾಣೆಮಂಗಳೂರು ಶ್ರೀ ವೀರವಿಠuಲ ದೇವಸ್ಥಾನಗಳನ್ನು ಒಂದೇ ನೇರದಲ್ಲಿ ಬೆಸೆಯುವಂತೆ ಈ ಸೇತು ನಿರ್ಮಾಣದ ಬಗ್ಗೆ ಪ್ರಸಾವದಲ್ಲಿ ತಿಳಿಸಿದ್ದು, ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಸುಮಾರು 7 ಕೋ. ರೂ. ವೆಚ್ಚ ಅಂದಾಜಿಸಲಾಗಿದೆ.

ಈ ಯೋಜನೆ ಅನುಷ್ಠಾನಕ್ಕೆ ಬಂದಾಗ ಐತಿಹಾಸಿಕ ಮಹತ್ವದ ನಂದಾವರ ಕ್ಷೇತ್ರ ತಾಲೂಕು ಕೇಂದ್ರ ಬಿ.ಸಿ. ರೋಡ್‌ನಿಂದ ಸಂದರ್ಶಿಸಲು ಈಗಿರುವ 6 ಕಿ.ಮೀ. ಬದಲು 3 ಕಿ.ಮೀ.ಗೆ ಇಳಿಯಲಿದೆ. ಮಳೆಗಾಲದಲ್ಲಿ ನೆರೆ ಬಂದಾಗ ನಂದಾವರ ಲಘು ಸೇತುವೆ ನೀರಿನ‌ಲ್ಲಿ ಮುಳುಗಿ ಸಂಚಾರ ಅಡಚಣೆ ನಿವಾರಣೆ ಆಗುವುದು.

ಪ್ರಸ್ತಾವದಲ್ಲಿ  ಏನಿದೆ ?
·  ನಬಾರ್ಡ್‌ ಯೋಜನೆಯಡಿ ಪ್ರವಾಸೋದ್ಯಮದಲ್ಲಿ ಪ್ರಸ್ತಾವನೆ
·  ನಂದಾವರದಿಂದ ಪಾಣೆಮಂಗಳೂರಿಗೆ 1.50 ಕಿ.ಮೀ. ದೂರದ ರಸ್ತೆ
·  60 ಮೀ. ಉದ್ದ, 3.75 ಮೀ. ಅಗಲದ ದ್ವಿಪಥ ಸೇತುವೆ
·  ರಸ್ತೆ ಇಕ್ಕೆಲಗಳಲ್ಲಿ ಸುರಕ್ಷಾ ಗರ್ಡರ್‌
·  ರಸ್ತೆಯ ಉದ್ದಕ್ಕೆ ಆಲಂಕಾರಿಕ ದೀಪಗಳು
·  ನೆರಳು ನೀಡುವ ಆಲಂಕಾರಿಕ ಗಿಡಗಳು, ನೆಡುತೋಪು ಇತ್ಯಾದಿಗಳು.

ಯೋಜನೆಯಿಂದ ಪ್ರಯೋಜನ
·  ರಾಜ್ಯ ಮತ್ತು ಅನ್ಯರಾಜ್ಯಗಳ ಪ್ರವಾಸಿಗರಿಗೆ ರಾ.ಹೆ.ಯಿಂದ ನೇತ್ರಾವತಿ ನದಿಯ ಬದಿಯಲ್ಲಿ ನೇರವಾಗಿ ಕ್ಷೇತ್ರ ಸಂದರ್ಶನಕ್ಕೆ ಅನುಕೂಲ.
·  ನದಿ ಪಾತ್ರದಲ್ಲಿ ಯೋಜನೆ ಸಿದ್ಧ ಆಗುವುದರಿಂದ ಬೇಸಗೆಯಲ್ಲಿ ತುಂಬೆ ಡ್ಯಾಂನಲ್ಲಿ ತುಂಬುವ ತಿಳಿನೀರು, ಮಳೆಗಾಲದಲ್ಲಿ ಬೀಸು ಗಾಳಿ, ರಮಣೀಯ ನೀರಿನ ಹರಿವು ದ್ರಶ್ಯಗಳು ನೋಡಲು ಸಾಧ್ಯವಾಗುವುದು.
·  ರಸ್ತೆ ನಿರ್ಮಾಣದಿಂದ ಮೂರು ದೇಗುಲಗಳಿಗೆ ಪ್ರವಾಸಿಗರು ಬರುವುದರಿಂದ ವ್ಯಾಪಾರಕ್ಕೆ ಪೂರಕ ವಾತಾವರಣ ಸೃಷ್ಟಿ ಆಗುವುದು.

  ಸಚಿವರಲ್ಲಿ ಚರ್ಚಿಸಲಾಗಿದೆ
ನದಿ ಪಾತ್ರದಲ್ಲಿ ಪಾಣೆಮಂಗಳೂರಿನಿಂದ ನೇರವಾಗಿ ಶ್ರೀಕ್ಷೇತ್ರ ನಂದಾವರ ಸಂಪರ್ಕದ ಕೂಡು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 2018ರ ಡಿ. 26ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನ ಒದಗಿಸಲು ಯೋಜನೆ ರೂಪಿಸಲಾಗಿದೆ. ಲೊಕೋಪಯೋಗಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸರಕಾರಕ್ಕೆ ಸಲ್ಲಿಸಲಾಗಿದೆ. ಅದಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸ‌ಲಾಗಿದೆ.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ

 ಭಕ್ತರಿಗೆ ಅನುಕೂಲ
ಸುದೀರ್ಘ‌ ಅವಧಿಯಿಂದ ನೇತ್ರಾವತಿ ನದಿಯ ಬದಿಯಲ್ಲಿ ಪಾಣೆಮಂಗಳೂರು ತನಕದ ರಸ್ತೆ ಸೇತುವೆ ನಿರ್ಮಾಣದ ಅಪೇಕ್ಷೆ ನಮ್ಮಲ್ಲಿತ್ತು. ಯೋಜನೆ ಅನುಷ್ಠಾನ ಬಳಿಕ ಸಂಪರ್ಕ ಸುಲಭ ಹಾಗೂ ಹತ್ತಿರ ಆಗಲಿದೆ. ದೂರದ ಪ್ರದೇಶಗಳ ಭಕ್ತರಿಗೆ ಬರಲು ಅನುಕೂಲ ಆಗಲಿದೆ. ಮೂರು ಕ್ಷೇತ್ರಗಳನ್ನು ಏಕಮುಖವಾಗಿ ಸಂದರ್ಶಿಸುವುದಕ್ಕೆ ಅವಕಾಶ ಆಗುವುದು.
– ಎ. ಸಿ. ಭಂಡಾರಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ,
ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ

- ರಾಜಾ ಬಂಟ್ವಾಳ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

1

Bantwal: ಶಂಭೂರಿನ ಎಂಆರ್‌ಎಫ್‌ ತಿಂಗಳಲ್ಲಿ ಸಿದ್ಧ

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

3-sulya

Aranthodu: ನೇಣು ಬಿಗಿದು ಯವಕ ಆತ್ಮಹತ್ಯೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.