ಸುಭದ್ರ ಆಡಳಿತಕ್ಕಾಗಿ ಮೋದಿ ಸರಕಾರ ಜನರ ಅಪೇಕ್ಷೆ: ಸುನೀಲ್
Team Udayavani, Apr 9, 2019, 6:00 AM IST
ನಗರ: ಈ ಬಾರಿಯ ಲೋಕಸಭಾ ಚುನಾವಣೆ ನೇತೃತ್ವ ಹಾಗೂ ಪೂರ್ಣ ಬಹುಮತದ ಸರಕಾರಕ್ಕಾಗಿ ನಡೆಯುವುದಾಗಿದೆ. ಮತ್ತೂಮ್ಮೆ ಇಂತಹ ಸುಭದ್ರ ಹಾಗೂ ಉತ್ತಮ ಆಡಳಿತಕ್ಕಾಗಿ ಮೋದಿ ಸರಕಾರವನ್ನು ಜನತೆ ಅಪೇಕ್ಷಿಸಿದ್ದಾರೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಚುನಾವಣ ಪ್ರಭಾರಿ ಶಾಸಕ ಸುನೀಲ್ ಕುಮಾರ್ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಮತ್ತೂಮ್ಮೆ ಸುಭದ್ರ ಸರಕಾರ ಬೇಕಿದೆ. ಇದು ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ ಎನ್ನುವುದು ಜನರ ಅಭಿಪ್ರಾಯ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದಿಂದ ತಾಳಮೇಳವಿಲ್ಲದ ಆಡಳಿತ ನಡೆಯುತ್ತಿದೆ. ಪರಸ್ಪರ ವಿಶ್ವಾಸದ ಕೊರತೆ, ದೂರದೃಷ್ಟಿಯ ಯೋಜನೆ, ಯೋಚನೆಗಳು, ಜನಪರ ಚಿಂತನೆಯೇ ಇವರಲ್ಲಿಲ್ಲ. ಕೇಂದ್ರದಲ್ಲೂ ಇಂತಹ ಸರಕಾರ ಬರಬೇಕೇ? ಎಂದು ಪ್ರಶ್ನಿಸಿದರು.
ಮೂರು ಹಂತದ ಪ್ರಚಾರ
ಬಿಜೆಪಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ವೇಗದ ಪ್ರಚಾರ ನಡೆಯುತ್ತಿದೆ. 1,861 ಬೂತ್‌ಗಳಲ್ಲಿ ಪ್ರಥಮ ಹಂತದ ಮನೆ ಮನೆ ಪ್ರಚಾರ ಮುಕ್ತಾಯಗೊಂಡಿದೆ. ಎ. 10ರಿಂದ 2ನೇ ಹಂತದ ಪ್ರಚಾರ ನಡೆಯಲಿದೆ. ಒಟ್ಟು 3 ಹಂತಗಳಲ್ಲಿ ಕಾರ್ಯಕರ್ತರು, ಮುಖಂಡರು ಮತದಾರರನ್ನು ಸಂಪರ್ಕಿಸಲಿದ್ದಾರೆ ಎಂದು ಹೇಳಿದರು.
ರ್ಯಾಲಿಗೆ ಲಕ್ಷ ಮಂದಿ
ಎ. 13ರಂದು ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲೆಗೆ ಆಗಮಿಸಿ ಅಪರಾಹ್ನ ಕೇಂದ್ರ ಮೈದಾನದಲ್ಲಿ ವಿಜಯ ಸಂಕಲ್ಪ ರ್ಯಾಲಿ ಹಾಗೂ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಸಮಾವೇಶದಲ್ಲಿ 1861 ಬೂತ್‌ಗಳಿಂದಲೂ ಚೌಕೀದಾರ ರೂಪದ 1 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದ.ಕ. ಕ್ಷೇತ್ರದಲ್ಲಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರಧಾನಿ ಅಭ್ಯರ್ಥಿ ಯಾರು?
ಮಹಾಘಟಬಂಧಕ್ಕೆ ಮುಂದಾಗಿರುವ ಮಿತ್ರ ಪಕ್ಷಗಳು ಇದುವರೆಗೆ ಅವರ ಪ್ರಧಾನಿ ಅಭ್ಯರ್ಥಿಯನ್ನೇ ಘೋಷಿಸಿಲ್ಲ. ಈ ಕುರಿತು ಅವರಲ್ಲೇ ಪರಸ್ಪರ ಗೊಂದಲಗಳಿವೆ. ಈ ನಾಯಕರಿಗೆ ತಾಕತ್ತು ಇದ್ದರೆ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಸಾರ್ವಜನಿಕವಾಗಿ ಘೋಷಿಸಲಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.
ಬಿಲ್ಲವರಿಗೆ ಆದ್ಯತೆ ಕೊಡಲಾಗಿದೆ
ಜಾತಿ ಅಥವಾ ಕುಟುಂಬಕ್ಕೆ ಸೀಮಿತವಾಗಿ ಬಿಜೆಪಿ ಪಕ್ಷ ಎಂದಿಗೂ ರಾಜಕೀಯ ಮಾಡಿಲ್ಲ. ಒಂದು ಕ್ಷೇತ್ರದಲ್ಲಿ ಒಂದು ಸಮುದಾಯದ ಒಬ್ಬನಿಗೆ ಟಿಕೆಟ್ ನೀಡಿಲ್ಲ ಎಂದರೆ ಅವರನ್ನು ಪಕ್ಷ ದೂರ ಮಾಡಿದೆ ಎಂದರ್ಥವಲ್ಲ. ಬಿಜೆಪಿ ಪಕ್ಷದಿಂದ ರಾಜ್ಯದಲ್ಲಿ ಅತಿ ಹೆಚ್ಚು ಬಿಲ್ಲವ ಸಮುದಾಯದ 6 ಮಂದಿಗೆ ಶಾಸಕ ಸ್ಥಾನವನ್ನು ನೀಡಿದೆ ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ ಚುನಾವಣಾ ಸಹ ಪ್ರಭಾರಿ ಪ್ರತಾಪಸಿಂಹ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಬಜರಂಗ ದಳ ವಿಸ್ತರಣೆಗೆ ಬದ್ಧ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಗ್ರಾಮಗಳಲ್ಲಿ ಬಜರಂಗ ದಳವನ್ನು ವಿಸ್ತರಿಸುವುದಾಗಿ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ಸುನೀಲ್ ಕುಮಾರ್, ರಾಷ್ಟ್ರೀಯತೆ, ಹಿಂದುತ್ವದ ವಿಚಾರಧಾರೆಯನ್ನು ವಿಸ್ತರಿಸುವುದೇ ನಮ್ಮ ಕೆಲಸ. ಈ ನಿಟ್ಟಿನಲ್ಲಿ ಬಜರಂಗ ದಳವೂ ಕೆಲಸ ಮಾಡುತ್ತದೆ. ಯಾರೋ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದರೆ ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.