ನರಿಕೊಂಬು ಅಭಿವೃದಿಗೆ ಸಿಗಲಿ ಇಂಬು: ಮೂಲ ಸೌಕರ್ಯ, ಬಸ್‌ ಸೌಲಭ್ಯಕ್ಕೆ ಜನರ ಆಗ್ರಹ


Team Udayavani, Jul 22, 2022, 10:49 AM IST

3

ಬಂಟ್ವಾಳ: ಬಂಟ್ವಾಳ ನಗರಕ್ಕೆ ಹೊಂದಿಕೊಂಡು ನೇತ್ರಾವತಿ ನದಿಯ ಕಿನಾರೆಯಲ್ಲಿರುವ ಕೃಷಿ ಪ್ರಧಾನ ಗ್ರಾಮವೇ ನರಿಕೊಂಬು. ಧಾರ್ಮಿಕವಾಗಿ ಹತ್ತಾರು ಕ್ಷೇತ್ರಗಳನ್ನು ಹೊಂದಿರುವ ಗ್ರಾಮವಾಗಿರುವ ಇಲ್ಲಿ ಒಂದಷ್ಟು ಸಮಸ್ಯೆ-ಸವಾಲುಗಳು ಕೂಡ ಇದ್ದು, ಅಭಿವೃದ್ಧಿಯ ವಿಚಾರದಲ್ಲಿ ಕೊಂಚಮಟ್ಟಿನ ಯಶಸ್ಸನ್ನೂ ಗಳಿಸಿದೆ. ಇನ್ನಷ್ಟು ಬಾಕಿ ಇದೆ. ಗ್ರಾಮಕ್ಕೊಂದು ಬಸ್‌ ಸೌಲಭ್ಯ, ತ್ಯಾಜ್ಯ ನಿರ್ವಹಣೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಜನರ ಪ್ರಮುಖ ಬೇಡಿಕೆಗಳಾಗಿವೆ. ಇವುಗಳತ್ತ ತುರ್ತಾಗಿ ಗಮನ ನೀಡಿದರೆ ಬೇಗನೆ ಅಭಿವೃದ್ಧಿ ಹೊಂದಲು ಸಾಧ್ಯ.

ನರಿಕೊಂಬು ಗ್ರಾಮವು ನಗರದ ಸನಿಹ ದಲ್ಲೇ ಇದ್ದರೂ ಸದ್ಯದ ಪರಿಸ್ಥಿತಿ ಯಲ್ಲಿ ಯಾವುದೇ ಬಸ್ಸುಗಳು ಗ್ರಾಮವನ್ನು ಪ್ರವೇಶಿಸುತ್ತಿಲ್ಲ. ಹೀಗಾಗಿ ಸಾಕಷ್ಟು ಮಂದಿಗೆ ಕೆಲಸಕ್ಕೆ ಹೋಗು ವು ದಕ್ಕೆ ತೊಂದರೆ ಯಾಗುತ್ತದೆ. ಗ್ರಾಮದ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವು ದಕ್ಕೂ ತೊಂದರೆ ಇದೆ. ಕೊರೊನಾ ಪೂರ್ವ ದಲ್ಲಿ ಖಾಸಗಿ ಬಸ್ಸು ಗಳಿದ್ದರೂ ಅದರ ಬಳಿಕ ನಿಂತು ಹೋಗಿದೆ. ಹೀಗಾಗಿ ದಿನದ ಮೂರು ಹೊತ್ತಾ ದರೂ ನಮ್ಮೂರಿಗೆ ಸರಕಾರಿ ಬಸ್ಸು ಬರ ಬೇಕು ಎಂಬ ಬೇಡಿಕೆ ಸ್ಥಳೀಯ ನಾಗರಿಕರದ್ದಾಗಿದೆ.

ಮೂಲಸೌಕರ್ಯ ಏನಾಗಿದೆ?

ಗ್ರಾಮದ ಕುಡಿಯುವ ನೀರಿನ ವಿಚಾರಕ್ಕೆ ಬಂದರೆ ನರಿಕೊಂಬು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು, ನೇತ್ರಾವತಿಯ ನೀರನ್ನು ಶುದ್ಧೀಕರಿಸಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಗ್ರಾಮಕ್ಕೆ ಈಗಾಗಲೇ ಶ್ಮಶಾನ ನಿರ್ಮಾಣಗೊಂಡು ಸುಸಜ್ಜಿತವಾಗಿದೆ. ಘನ ತ್ಯಾಜ್ಯ ಘಟಕದ ಸ್ವತ್ಛ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡು ಕಾಮಗಾರಿ ಆದೇಶ ಪತ್ರ ನೀಡಲಷ್ಟೇ ಬಾಕಿ ಇದೆ. ಸ್ಥಳೀಯ ಜನರ ಅಭಿಪ್ರಾಯದ ಪ್ರಕಾರ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ಕೆಲವೊಂದು ರಸ್ತೆಗಳ ಬೇಡಿಕೆಯೂ ಇದೆ.

ನಿವೇಶನ ವಿತರಣೆ ಸಮಸ್ಯೆ

ಕೃಷಿಯೇ ಗ್ರಾಮದ ಜನತೆಯ ಪ್ರಧಾನ ಆದಾಯದ ಮೂಲ ವಾಗಿದ್ದು, ಒಂದಷ್ಟು ಮಂದಿ ಹೊರಗಡೆ ಯಲ್ಲಿ ಉದ್ಯಮವನ್ನೂ ನಡೆಸುವವರಿದ್ದಾರೆ. ಗ್ರಾಮವು ನಗರಕ್ಕೆ ಹೊಂದಿ ಕೊಂಡಿ ರುವು ದರಿಂದ 94ಸಿ ನಿವೇಶನ ವಿತರಣೆಗೆ ಇಲ್ಲಿ ಅವಕಾಶವಿಲ್ಲ. ಇದೇ ಕಾರಣಕ್ಕೆ ಇನ್ನೂ ಒಂದಷ್ಟು ತಾಂತ್ರಿಕ ತೊಂದರೆಗಳು ಗ್ರಾಮ ಸ್ಥರನ್ನು ಕಾಡುತ್ತಿರುವುದು ಕೂಡ ಸುಳ್ಳಲ್ಲ.

ಧಾರ್ಮಿಕ ತಾಣಗಳ ಗ್ರಾಮ

ಗ್ರಾಮದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದಾದರೆ ಗ್ರಾಮದಲ್ಲಿ ಶ್ರೀ ನಾರಿಕೊಂಬೇಶ್ವರ ದೇವಸ್ಥಾನವಿದ್ದು, ಹೀಗಾಗಿ ನರಿಕೊಂಬು ಆಗಿದೆ ಎಂದು ಪ್ರತೀತಿ ಇದೆ. ಇನ್ನು ಕೆಲವು ಪ್ರತೀತಿ ಗಳಿದ್ದರೂ ಅದಕ್ಕೆ ಪೂರಕವಾದ ಅಂಶ ಗಳು ಕಾಣಿಸುತ್ತಿಲ್ಲ. ಗ್ರಾಮದ ಮತ್ತೂಂದು ವಿಶೇಷವೆಂದರೆ ಗ್ರಾಮ ದಲ್ಲಿ 28ಕ್ಕೂ ಅಧಿಕ ದೇವಸ್ಥಾನ, ಧಾರ್ಮಿಕ ಕೇಂದ್ರಗಳಿವೆ. ಬಹುತೇಕ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಸುಸಜ್ಜಿತವಾಗಿರುವುದು ಗ್ರಾಮದ ಜನತೆಯ ಧಾರ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಗ್ರಾಮದಲ್ಲಿ 2 ಮಸೀದಿಗಳಿವೆ.

ಪ್ರಧಾನ ಸಮಸ್ಯೆಗಳೇನು?

ಯಾವ ಗ್ರಾಮದಲ್ಲಿಯೂ ಇರದ ಸಮಸ್ಯೆ ಯೊಂದು ನರಿಕೊಂಬಿನ ಜನರನ್ನು ಕಾಡುತ್ತಿದೆ. ನರಿಕೊಂಬು ಗ್ರಾಮದಲ್ಲಿ ಹಾದುಹೋಗಿರುವ ಪಾಣೆಮಂಗಳೂರು-ದಾಸಕೋಡಿ ಜಿಲ್ಲಾ ಮುಖ್ಯರಸ್ತೆಯ ಎರಡೂ ಬದಿ 25 ಮೀ.ನಷ್ಟು ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ, ವಸತಿಗಾಗಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ರಸ್ತೆ ಬದಿ ಜಾಗವಿದ್ದರೂ ಖಾಲಿ ಬಿಡುವ ಪರಿಸ್ಥಿತಿ ಇದೆ. ಇದು ಇಲ್ಲಿನ ಸ್ಥಳೀಯಾಡಳಿತಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಎಂಬುದು ಪಂಚಾಯತ್‌ನ ಅಭಿಪ್ರಾಯವಾಗಿದೆ.

ಗ್ರಾಮದ ನೆಹರೂನಗರ ಪ್ರದೇಶ ಪುರ ಸಭೆಯ ವ್ಯಾಪ್ತಿಗೆ ಹೊಂದಿಕೊಂಡಿದ್ದು, ಇಲ್ಲಿನ ಕಸದ ಸಮಸ್ಯೆ ಗ್ರಾ.ಪಂ.ಗೆ ಬಹು ದೊಡ್ಡ ಸವಾಲಾಗಿದೆ. ಇಲ್ಲಿ ಲೋಡು ಗಟ್ಟಲೆ ಕಸ ರಾಶಿ ಬೀಳುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಲಾರಿಯ ಮೂಲಕ ಸಾಗಿಸಿದರೂ ಮತ್ತೆ ಮತ್ತೆ ಅದೇ ಸ್ಥಿತಿ ಉಂಟಾಗುತ್ತಿದೆ. ಜತೆಗೆ ಗ್ರಾಮದ ಒಂದಷ್ಟು ಪ್ರದೇಶ ಹೆದ್ದಾರಿಗೆ ಹೊಂದಿಕೊಂಡಿದ್ದು, ಅಲ್ಲೂ ಅನಧಿಕೃತ ತ್ಯಾಜ್ಯದ ರಾಶಿಯ ಸವಾಲನ್ನು ಗ್ರಾಮ ಎದುರಿಸುತ್ತಿದೆ.

ಘನ ತ್ಯಾಜ್ಯ ಘಟಕ ನಿರ್ಮಾಣ: ಗ್ರಾಮದಲ್ಲಿ ಪ್ರಮುಖವಾಗಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ 25 ಮೀ. ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲದೇ ಇರುವುದು ಬಹಳ ತೊಂದರೆಯಾಗಿದೆ. ಉಳಿದಂತೆ ಬಹುತೇಕ ಮೂಲ ಸೌಕರ್ಯಗಳು ಉತ್ತಮವಾಗಿದ್ದು, ಘನ ತ್ಯಾಜ್ಯ ಘಟಕ ಕೂಡ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದೆ. -ವಿನುತಾ ಪುರುಷೋತ್ತಮ ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.

ಬಸ್‌ ಸೌಕರ್ಯ ಬೇಕು: ಗ್ರಾಮವು ಅಭಿವೃದ್ಧಿಯ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ನಮ್ಮ ಗ್ರಾಮಕ್ಕೆ ಬಸ್‌ ಸೌಕರ್ಯ ಇಲ್ಲ ಎಂಬ ಕೊರಗು ಇದೆ. ಇದರಿಂದ ಗ್ರಾಮದ ಜನತೆಗೆ ಕೆಲಸಕ್ಕೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ಹಿಂದೆ ಇದ್ದ ಖಾಸಗಿ ಬಸ್‌ ನಿಂತು ಹೋಗಿದೆ. ಹೀಗಾಗಿ ಸರಕಾರಿ ಬಸ್‌ ಬರಲಿ ಎಂಬುದು ನಮ್ಮ ಬೇಡಿಕೆಯಾಗಿದೆ. -ಪುರುಷೋತ್ತಮ ಬಂಗೇರ ನಾಟಿ ಗ್ರಾಮಸ್ಥರು

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.