ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್ ಎನ್ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ
Team Udayavani, Nov 2, 2020, 10:38 AM IST
ಪುತ್ತೂರು: ಕಡಬ ತಾಲೂಕಿನ ಸವಣೂರು ನಡುಬೈಲು ನಿವಾಸಿ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ, ರೈಲ್ವೇ ಇಲಾಖೆ ಉದ್ಯೋಗಿ ಅಭಿಷೇಕ್ ಎನ್ ಶೆಟ್ಟಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2019 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಡುಬೈಲು ಜಗನ್ನಾಥ ಶೆಟ್ಟಿ ಮತ್ತು ತುಳಸಿನಿ ಶೆಟ್ಟಿ ಅವರ ಪುತ್ರ ಅಭಿಷೇಕ್, ಡೆಕತ್ಲಾನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ನೆಲ್ಯಾಡಿ ಹಿ.ಪ್ರಾ.ಶಾಲೆ, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ, ಮೂಡಬಿದಿರೆ ಆಳ್ವಾಸ್ ಪ.ಪೂ. ಹಾಗೂ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ.
2011 ರಲ್ಲಿ 16 ವರ್ಷದ ಹಳೆಯ ಕಿರಿಯರ ರಾಷ್ಟ್ರೀಯ ದಾಖಲೆ, 56 ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 25 ವರ್ಷದ ಹಳೆಯ ರಾಜ್ಯ ದಾಖಲೆ, 29 ವರ್ಷದ ಕರ್ನಾಟಕ ರಾಜ್ಯ ಹಿರಿಯ ದಾಖಲೆ, 18 ವರ್ಷದ ಹಳೆಯ ಭಾರತೀಯ ರೈಲ್ವೆ ದಾಖಲೆ ಮುರಿದು ನೂತನ ದಾಖಲೆ ಸ್ಥಾಪಿಸಿದ್ದಾರೆ.
ಇದನ್ನೂ ಓದಿ:ರಾಜ್ಯ ಕ್ರೀಡಾ ಪ್ರಶಸ್ತಿ ಪ್ರಕಟ: ರಾಹುಲ್, ಮಯಾಂಕ್, ವೇದಾ ಕೃಷ್ಣಮೂರ್ತಿಗೆ ಏಕಲವ್ಯ ಪ್ರಶಸ್ತಿ
2015 ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕೂಟ, ಮಂಗಳೂರಿನಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, 2017 ರಲ್ಲಿ ಚೆನ್ನೈ ನಲ್ಲಿ ನಡೆದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ಪಟಿಯಾಲದಲ್ಲಿ ಹಿರಿಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
2014 ರಿಂದ 2019 ತನಕದ ಆರು ಮುಕ್ತ ರಾಷ್ಟ್ರೀಯ ಚಾಂಪಿಯನ್‌ನಲ್ಲಿ ಪ್ರಥಮ ಸ್ಥಾನ, 2015 ರಲ್ಲಿ ಮಾರಿಷಸ್‌ನಲ್ಲಿ 6 ನೇ ಸ್ಥಾನ, 2017 ರಲ್ಲಿ ಭುವನೇಶ್ವರದಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5 ನೇ ಸ್ಥಾನ, 2017 ರಲ್ಲಿ ತುರ್ಕಿಮಿನಿಸ್ಟಾನ್‌ನಲ್ಲಿ ಏಷ್ಯಾದ ಒಳಾಂಗಣ ಆಟಗಳಲ್ಲಿ 4 ನೇ ಸ್ಥಾನ ಪಡೆದಿದ್ದಾರೆ.
ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ.ಸಿ ಅವರು ನನ್ನನ್ನು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ್ದರು. ಆಳ್ವಾಸ್‌ನಲ್ಲಿ ತರಬೇತುದಾರ ವಸಂತ ಜೋಗಿ ಅವರ ಸಲಹೆಯಂತೆ ಪದವಿಯ ಕೊನೆಯ ವರ್ಷದಲ್ಲಿ ಡೆಕತ್ಲಾನ್ (10 ಈವೆಂಟ್) ಅಭ್ಯಾಸ ಆರಂಭಿಸಿದೆ. ಅದರಲ್ಲಿ ಯಶಸ್ಸು ಸಿಕ್ಕಿತ್ತು. ತರಬೇತುದಾರರು ಹಾಗೂ ಆಳ್ವಾಸ್‌ನ ಮೋಹನ್ ಆಳ್ವ ಅವರ ಪ್ರೋತ್ಸಾಹ ನನ್ನ ಸಾಧನೆಗೆ ಕಾರಣ ಎಂದು ಅಭಿಷೇಕ್ ಎನ್ ಶೆಟ್ಟಿ ‘ಉದಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.