ನವ ಜೀವನ ಬಂದಾಗ ಬೆಳಕು: ಪ್ರಕಾಶ್
ಬಂಟ್ವಾಳ ನವಜೀವನ ಸಮಿತಿ ತರಬೇತಿ
Team Udayavani, Apr 14, 2019, 6:00 AM IST
ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ ಕಾರ್ಯಕ್ರಮ ಉದ್ಘಾಟಿಸಿದರು.
ಬಂಟ್ವಾಳ: ಮದ್ಯಪಾನದ ದುಶ್ಚಟದಿಂದ ಬಳಲಿದವರಿಗೆ ನವಜೀವನ ಬಂದಾಗ ಬೆಳಕು ಹರಿದ ಅನುಭವ ಆಗುವುದು. ಒಮ್ಮೆ ನಾವು ಹಳ್ಳದ ಕೆಸರಿಂದ ಮೇಲೆ ಬಂದ ಬಳಿಕ ಪುನಃ ಕೆಸರಿಗೆ ಬೀಳಬಾರದು. ಅದಕ್ಕಾಗಿ ನವಜೀವನ ಸಮಿತಿ ಪೋಷಕ ತರಬೇತಿ ಹಮ್ಮಿಕೊಂಡಿದೆ. ತರಬೇತಿ ಹೊಂದಿದವರು ಸಮರ್ಪಕವಾಗಿ ಕೆಲಸ ಮಾಡಿದಾಗ ಸುಸಂಸ್ಕೃತ ಸಮಾಜ ಸಂಪನ್ನಗೊಳ್ಳುವುದು ಎಂದು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ ಹೇಳಿದರು.
ಅವರು ಎ. 12ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಬಂಟ್ವಾಳ ಸಹಯೋಗದಲ್ಲಿ ನವಜೀವನ ಸಮಿತಿಯ ಪೋಷಕರ ತರಬೇತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ, ಮದ್ಯ ತ್ಯಜಿಸಿ ನವಜೀವನ ಕಂಡುಕೊಂಡ ಸದಸ್ಯರು ಶಿಬಿರ ನಡೆಸಲು ಸಾಧ್ಯವಾದಲ್ಲಿ ಮಾತ್ರ ಅವರ ಜೀವನ ಪಾವನವಾಗುವುದು ಎಂದರು.
ದುಶ್ಚಟ ಮುಕ್ತ ಸಮಾಜ ನಿರ್ಮಾಣ ಉದ್ದೇಶ
ಅಧ್ಯಕ್ಷತೆ ವಹಿಸಿದ್ದ ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಮಾತನಾಡಿ, ಸದೃಢ ಸಮಾಜ ಕಟ್ಟಬೇಕಾದರೆ ಕ್ರಿಯಾಶೀಲ ಕಾರ್ಯಕರ್ತರು ನಿರಂತರ ಕರ್ತವ್ಯ ನಿರ್ವಹಿಸಬೇಕು. ನಮ್ಮಲ್ಲಿ ಸದುದ್ದೇಶ ಇದ್ದಾಗ ಯಾವುದೇ ಸಮಸ್ಯೆಗಳು ಎದರಾದರೂ ನಿವಾರಣೆ ಸಾಧ್ಯ. ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮ ಉದ್ದೇಶ ಆಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.