ಎಲ್ಲವನ್ನೂ ಕಳೆದುಕೊಂಡ ಅಜ್ಜನಿಗೆ ಬೇಕು ನೆರವು..!
Team Udayavani, Dec 8, 2018, 1:02 PM IST
ನಗರ: ತಮ್ಮವರನ್ನು ಕಳೆದು ಕೊಂಡು, ಕಡೆಗೆ ಸೂರೂ ಇಲ್ಲದೆ ಕಳೆದ 6 ತಿಂಗಳಿನಿಂದ ಪುತ್ತೂರು ನಗರದಲ್ಲಿ ಅಳೆದಾಡುತ್ತಿರುವ ಹುಕ್ರಪ್ಪಜ್ಜನಿಗೆ ಸದೃದಯಿಗಳ ಆಶ್ರಯ, ಸಹಕಾರ ಬೇಕಾಗಿದೆ. ಪತ್ನಿ, ಮಕ್ಕಳನ್ನು ಕಳೆದುಕೊಂಡು ಏಕಾಂಗಿಯಾಗಿರುವ ಅಜ್ಜ ದಿನವಿಡೀ ಪೇಟೆ ಸುತ್ತುತ್ತಾರೆ. ಅವರಿವರು ಆಹಾರ, ಹಣ ನೀಡಿದರೆ ಪಡೆಯುತ್ತಾರೆ. ರಾತ್ರಿ ಹೊತ್ತು ಮಿನಿ ವಿಧಾನಸೌಧದ ಮೆಗಾ ಕಟ್ಟಡದ ಹೊರಗೆ ಗೋಡೆ ಬದಿಯಲ್ಲಿ ಮಲಗುತ್ತಾರೆ. ಇದು ತಾನು ಸುಳ್ಯಪದವು ಗ್ರಾಮದ ಹುಕ್ರಪ್ಪ ಮೂಲ್ಯ ಎಂದು ಹೇಳಿಕೊಳ್ಳುವ ಸುಮಾರು 70 ವರ್ಷ ಪ್ರಾಯದ ಅಜ್ಜನ ಕಥೆ.
ನನಗೆ 12 ಸೆಂಟ್ಸ್ ಜಾಗ ಮತ್ತು ಅದರಲ್ಲಿ ಒಂದು ಮನೆಯೂ ಇತ್ತು. ಮನೆ ಈಗ ಜರಿದು ಬಿದ್ದಿದೆ. ಯಾರೂ ಇಲ್ಲದ ಮೇಲೆ ಮನೆಯಲ್ಲಿದ್ದೇನು ಮಾಡುವುದೆಂದು ಬೀದಿಗೆ ಬಂದಿದ್ದೇನೆ. ಸುತ್ತತೊಡಗಿದೆ. ಆರು ತಿಂಗಳಿನಿಂದ ಇಲ್ಲೇ ಮಲಗುತ್ತಿದ್ದೇನೆ. ಮಧ್ಯಾಹ್ನ ದೇವಸ್ಥಾನದ ಛತ್ರಕ್ಕೆ ಹೋಗಿ ಊಟ ಮಾಡುತ್ತೇನೆ.ಯಾರಾದರೂ ಅಲ್ಪಸ್ವಲ್ಪ ದುಡ್ಡು ಕೊಟ್ಟರೆ ಅದರಿಂದ ಬೆಳಗ್ಗಿನ ತಿಂಡಿ ಹೊಟೇಲ್‌ನಲ್ಲಿ ತಿನ್ನುತ್ತೇನೆ. ರಾತ್ರಿ ನೀರು ಕುಡಿದು ಮಲಗುತ್ತೇನೆ ಎನ್ನುತ್ತಾರೆ ಹುಕ್ರಪ್ಪ ಮೂಲ್ಯ. ಯಾರಾದರೂ ನನ್ನನ್ನು ಆಶ್ರಮಕ್ಕೆ ಸೇರಿಸಿದರೂ ನೆಮ್ಮದಿಯಿಂದ ಬದುಕಬಲ್ಲೆ ಎನ್ನುತ್ತಾ ಕಣ್ಣೀರಾಗುತ್ತಾರೆ ಈ ಅಜ್ಜ.
ಎಲ್ಲರನ್ನೂ ಕಳೆದುಕೊಂಡೆ
ಇವರ ಸ್ಥಿತಿ ಕಂಡು ಹತ್ತಿರ ಹೋಗಿ ವಿಚಾರಿಸಿದರೆ ಮೊದಲಿಗೆ ಮಾತನಾಡಲು ನಿರಾಕರಿಸುವ ಅಜ್ಜ ಆತ್ಮೀಯತೆ ತೋರಿದರೆ ನೆನಪಿನಾಳದಿಂದ ನೋವಿನ ಕಥೆ ಹೇಳುತ್ತಾರೆ. ನಾನು ಯುವಕನಾಗಿದ್ದ ಎಂತಹ ಕಠಿಣ ಕೆಲಸವಾದರೂ ಮಾಡುತ್ತಿದ್ದೆ. ಅಷ್ಟೊಂದು ನೈಪುಣ್ಯತೆ ನನ್ನಲ್ಲಿತ್ತು. ಈಗ ಏನಿಲ್ಲ ನೋಡಿ..! ನನಗೆ ಮೂವರು ಗಂಡು ಮಕ್ಕಳು. ಮೂವರು ಕೂಡ ಅಕಾಲಿಕ ಮೃತ್ಯುಗೀಡಾಗಿದ್ದಾರೆ. ಒಬ್ಬ ಸಣ್ಣದರಲ್ಲೇ ತೀರಿಕೊಂಡರೆ ಮತ್ತೊಬ್ಬ ಕೆಲ ವರ್ಷಗಳ ಬಳಿಕ ತೀರಿ ಹೋದ. ಇನ್ನೊಬ್ಬ ಯುವಕನಾಗಿ ಒಳ್ಳೆ ಕೆಲಸದಲ್ಲಿದ್ದ. ಅವನೂ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದೆ. ಪತ್ನಿ ಮಾತ್ರ ಜತೆಗಿದ್ದಳು. ಅವಳೂ ಕೂಡ ಹೋದ ಮೇಲೆ ನನಗೆ ಯಾರೂ ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.