ಶುದ್ಧ ನೀರಿನ ಘಟಕ ನಿರ್ಮಾಣ ನಿರ್ಲಕ್ಷ್ಯ
ಪಿಡಿಒಗಳ ವಿರುದ್ಧ ಶಾಸಕ ಸಂಜೀವ ಮಠಂದೂರು ಗರಂ
Team Udayavani, Aug 4, 2019, 5:31 AM IST
ಪುತ್ತೂರು: ತಾಲೂಕಿನಲ್ಲಿ ಸರಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೋಟಿ ರೂ. ಅನು ದಾನ ಬಿಡುಗಡೆಯಾಗಿದ್ದರೂ ಎಲ್ಲಿಯೂ ಕಾಮಗಾರಿ ಪೂರ್ತಿಗೊಂಡು ಪ್ರಯೋ ಜನಕ್ಕೆ ಸಿಗದ ಕುರಿತು ಗರಂ ಆದ ಪುತ್ತೂರು ಶಾಸಕ ಸಂಜೀವ ಮಠಂದೂರು ಗ್ರಾ.ಪಂ.ಗಳ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರು ಶನಿವಾರ ಪುತ್ತೂರು ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.
ಪಿಡಿಒಗಳಿಂದ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗಳ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಬಹುತೇಕ ಅಧಿಕಾರಿಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ, ಹಸ್ತಾಂತರಗೊಂಡಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ 2 ವರ್ಷ ಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಾರ್ವಜನಿಕರಿಗೆ 1 ಲೀ. ನೀರೂ ಲಭ್ಯವಾಗಿಲ್ಲ. ಘಟಕ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂದು ಮಠಂದೂರು ಆಕ್ರೋಶ ವ್ಯಕ್ತಪಡಿಸಿ ದರು.
1.50 ಕೋಟಿ ರೂ.
ಶುದ್ಧ ನೀರು ಘಟಕ ಸ್ಥಾಪನೆಗೆ ಕೆಲವು ಗ್ರಾ.ಪಂ.ಗಳಿಗೆ 5 ಲಕ್ಷ ರೂ. ಮತ್ತು ಇನ್ನು ಕೆಲವು ಗ್ರಾ.ಪಂ.ಗಳಿಗೆ 9 ಲಕ್ಷ ರೂ. ಅನು ದಾನ ಬಿಡುಗಡೆಯಾಗಿದೆ. ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಈ ಅನುದಾನ ನೀಡಿದೆ. ಪುತ್ತೂರು ತಾಲೂಕಿಗೆ 1.50 ಕೋಟಿ ರೂ.ಗೂ ಅಧಿಕ ಅನುದಾನ ನೀಡ ಲಾಗಿದೆ. ತೆರಿಗೆ ಈ ಮೂಲಕ ದುರುಪ ಯೋಗವಾಗಿದೆ ಎಂದು ಶಾಸಕರು ಆರೋಪಿ ಸಿದರು.
ಮಾಹಿತಿ ನೀಡಲು ಸೂಚನೆ
ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗಳ ಮಾಹಿತಿ ತಳ ಮಟ್ಟದ ಜನರಿಗೆ ತಲುಪ ಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂ.ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ನೀಡಬೇಕು. ಇಲಾಖೆಯ ಯೋಜನೆಗಳ ಕುರಿತು ಕರಪತ್ರ ವಿತರಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ರಸ್ತೆ ಬದಿ ಗಿಡ ನೆಡಿ
ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಉದ್ದೇಶದಿಂದ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಗ್ರಾ.ಪಂ. ಸಹಕಾರ ನೀಡಬೇಕು. ಸ್ಥಳೀಯಾಡಳಿತವು ಕಾಳಜಿ ವಹಿಸಿ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ಕಾರ್ಯ ನಡೆಸಬೇಕು. ರಸ್ತೆ ಬದಿಗಳಲ್ಲಿ ಹಣ್ಣಿನ ಗಿಡವನ್ನು ಬೆಳೆಸಲು ಕ್ರಮ ಕೈ ಗೊಳ್ಳಬೇಕು. ಇದನ್ನು ಸಾಮಾಜಿಕ ಕಳಕಳಿಯಾಗಿ ರೂಪಿಸುವಲ್ಲಿ ಪಿಡಿಒಗಳು ಮುಂದಾಗಬೇಕು. ಮರ ಬೆಳೆಸಿ ಮಾದರಿ ರಸ್ತೆಯಾಗಿ ರೂಪಿಸಬೇಕು ಎಂದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ, ಸಾಮಾಜಿಕ ಅರಣ್ಯ ಯೋಜನೆ, ಸ್ವಚ್ಛ ಭಾರತ್, ಶ್ಮಶಾನ, ಆಟದ ಮೈದಾನ ಸಹಿತ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಕಾರ್ಯಯೋಜನೆಗಳ ಕುರಿತು ಶಾಸಕರು ಪಿಡಿಒಗಳಿಗೆ ಮಾಹಿತಿ ಮತ್ತು ಸಲಹೆ ನೀಡಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾ.ಪಂ. ವಿಷಯ ನಿರ್ವಾಹಕ ಶಿವಪ್ರಕಾಶ್ ಅಡ್ಪಂಗಾಯ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.