“ನೆಕ್ಕಿಲಾಡಿ ಗ್ರಾ.ಪಂ. ಜನರೇಟರ್ ನಾಪತ್ತೆಯಾಗಿಲ್ಲ’
Team Udayavani, Jun 14, 2019, 4:00 AM IST
ಉಪ್ಪಿನಂಗಡಿ: ಪಂಚಾಯತ್‌ಗೆ ಸೇರಿದ ಸೊತ್ತು ಕೆಟ್ಟು ರಿಪೇರಿಯಾಗಿ ಎರಡು ವರ್ಷ ಕಳೆದರೂ ಕಚೇರಿ ಸೇರದೇ ಇರುವುದು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಯಾಯಿತು. ಮುಂದಿನ ಸಾಮಾನ್ಯ ಸಭೆಗೆ ಮುನ್ನ ಸರಕಾರಿ ಸೊತ್ತನ್ನು ಪಂಚಾಯತ್‌ಗೆ ತರುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸಾಮಾನ್ಯ ಸಭೆಯು ಅಧ್ಯಕ್ಷೆ ರತಿ ಎಸ್. ನಾಯ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸದಸ್ಯರಾದ ಶೇಕಬ್ಬ ಮಾತನಾಡಿ, ಜನರೇಟರ್ ನಾಪತ್ತೆ ಪ್ರಕರಣ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಗ್ರಾಮಸ್ಥರಲ್ಲೂ ಸಂಶಯ ಮೂಡಿಸಿದೆ. ಜನರೇಟರ್ ಯಾವ ಹಂತದಲ್ಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದರು.
ಅಭಿವೃದ್ಧಿ ಅಧಿಕಾರಿ ಮಾತನಾಡಿ, ಜನರೇಟರ್ ಎಲ್ಲೂ ಹೋಗಿಲ್ಲ. ಅದನ್ನು ಪುತ್ತೂರಿನಲ್ಲಿ ರಿಪೇರಿ ಕೆಲಸಕ್ಕೆ ಕೊಡಲಾಗಿತ್ತು. ರಿಪೇರಿ ಆಗಿದ್ದು, ದುರಸ್ತಿಯ ವೆಚ್ಚ ನೀಡಿ ಜನರೇಟರ್ ಕೊಂಡೊಯ್ಯಿರಿ ಎಂದು ಅಂಗಡಿ ಮಾಲಕರು ಹೇಳಿದ್ದಾರೆ. ಪಂಚಾಯತ್ ನಿಯಮ ಪ್ರಕಾರ ತತ್‌ಕ್ಷಣ ಹಣ ನೀಡಲು ಸಾಧ್ಯವಿಲ್ಲ. ಮಂಜೂರಾತಿ ಪ್ರಕ್ರಿಯೆಗಳು ನಡೆದ ಬಳಿಕ ಹಣ ನೀಡುವುದು ನಿಯಮ. ಹಾಗಾಗಿ ಕೊಂಚ ಅಡೆತಡೆಯಾಗಿದೆ. ಮುಂದಿನ ದಿನಗಳಲ್ಲಿ ರಿಪೇರಿ ಬಿಲ್ಲು ನೀಡಿ ಜನರೇಟರ್ ಅನ್ನು ಪಂಚಾಯತ್‌ಗೆ ತರಿಸಿಕೊಳ್ಳಲಾಗುವುದು ಎಂದು ಭರವಸೆ ಇತ್ತು, ಪ್ರಕರಣಕ್ಕೆ ತೆರೆ ಎಳೆದರು.
ಸಿಡಿಲಿಗೆ ದಾರಿದೀಪ ಹಾನಿ
ಉಪಾಧ್ಯಕ್ಷ ಅಸ್ಕರ್ ಅಲಿ ಮಾತನಾಡಿ, ದಾರಿ ದೀಪಗಳು ಕೆಲವು ದಿನಗಳ ಹಿಂದೆ ಸಿಡಿಲಿನಿಂದ ಕೆಟ್ಟು ಹೋಗಿವೆ. ಇನ್ನೂ ಕೆಲವೆಡೆ ಸಿಂಗಲ್ ಫೇಸ್ ಇದ್ದು, ಮೆಸ್ಕಾಂನವರು ಕಡಿತಗೊಳಿಸಿದ್ದಾರೆ. ಒಟ್ಟಿನಲ್ಲಿ ಹೊಸ ದಾರಿ ದೀಪಕ್ಕೆ ಕ್ರಿಯಾಯೋಜನೆ ರಚಿಸಿ ಗುತ್ತಿಗೆ ಹರಾಜು ಕರೆಯುವ ಪ್ರಕ್ರಿಯೆ ನಡೆಸಬೇಕಾಗುವುದು ಎಂದರು. ಸಭೆ ಒಪ್ಪಿಗೆ ಸೂಚಿಸಿತು. ಗ್ರಾಮ ವ್ಯಾಪ್ತಿಯಲ್ಲಿ ಎಲ್ಲ ಟ್ಯಾಂಕ್‌ಗಳ ಮುಚ್ಚಳಕ್ಕೆ ಬೀಗ ಹಾಕಿ ಎಚ್ಚರ ವಹಿಸಬೇಕು. ಅಗತ್ಯವಿದ್ದಲ್ಲಿ ಚೇಂಬರ್ ನಿರ್ಮಾಣ ಮಾಡಿ ಎಂದು ಸದಸ್ಯರಾದ ಮೈಕಲ್ ವೇಗಸ್ ಸಲಹೆ ಕೊಟ್ಟರು.
ನೂತನ ಸದಸ್ಯೆ ಅನಿ ಮಿನೇಜಸ್ ಮಾತನಾಡಿ, ಕರುವೇಲು ವಾರ್ಡ್‌ನಲ್ಲಿ 30 ವರ್ಷದಿಂದ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದ್ದು, ಬದಲಿ ಕ್ರಮ ಜರುಗಿಸಿ ಎಂದರು. ಉಪಾಧ್ಯಕ್ಷ ಅಸ್ಕರ್ ಅಲಿ, ಟ್ಯಾಂಕ್ ಸೋರಿಕೆ ಕುರಿತು ಸ್ಥಳೀಯ ಶಾಸಕರಿಗೆ ಮನವರಿಕೆ ಮಾಡಿದ್ದು, ಹೊಸ ಟ್ಯಾಂಕ್‌ನ ಪ್ರಸ್ತಾವ ನೀಡಿ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಉಪಚುನಾವಣೆಯಲ್ಲಿ ಚುನಾಯಿತ ಸದಸ್ಯರಿಗೆ ಅಭಿನಂದಿಸಲಾಯಿತು. ಸಭೆ ಮುಗಿಯುತ್ತಿದ್ದಂತೆ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಬಾಬು ನಾಯ್ಕ, ಯಮುನಾ, ಜ್ಯೋತಿ, ಪ್ರಶಾಂತ್ ಎನ್., ಶೇಕಬ್ಬ, ಸತ್ಯವತಿ, ಅನಿ ಮಿನೆಜಸ್, ಮೈಕಲ್ ವೇಗಸ್ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.
ಏಲಂನಲ್ಲಿ ತಾರತಮ್ಯ ಬೇಡ
ಸದಸ್ಯರಾದ ಪ್ರಶಾಂತ್ ಮಾತನಾಡಿ, ಪಂಚಾಯತ್ ಅಂಗಡಿ, ಮುಂಗಟ್ಟುಗಳ ಏಲಂನಲ್ಲಿ ತಾರತಮ್ಯ ಏಕೆ ಮಾಡುತ್ತೀರಿ? ಏಲಂನಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾನ ನ್ಯಾಯ ಕೊಟ್ಟು ಸಹಕರಿಸಿ. ಹೊರತು ಒಬ್ಬರಿಗೆ ಮುಂಗಡ ಹಣ ಇರಿಸಿಕೊಳ್ಳುವುದು ಇನ್ನುಳಿದವರಿಗೆ ಬದಲಿ ನ್ಯಾಯ ಮಾಡಬೇಡಿ. ಆ ರೀತಿ ಮರುಕಳುಹಿಸದಂತೆ ಎಚ್ಚರ ವಹಿಸಿ. ಸಬೂಬು ನೀಡುವುದು ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.