ಬ್ರಹ್ಮಕಲಶದೊಂದಿಗೆ ನಮ್ಮ ಜೀವನವೂ ಪರಿಶುದ್ಧಗೊಳ್ಳಲಿ
Team Udayavani, Mar 16, 2019, 9:40 AM IST
ಬಡಗನ್ನೂರು : ದೇವರ ಅನುಗ್ರಹಕ್ಕಾಗಿ ನಿರ್ದಿಷ್ಟ ದಿನ ವ್ರತ ಆಚರಣೆ ಮಾಡಿ ಸಂಕಲ್ಪ ಮಾಡುವುದು ವಾಡಿಕೆ. ದೇವಸ್ಥಾನದ ಬ್ರಹ್ಮಕಲಶವು ನಮ್ಮ ಜೀವನವನ್ನೂ ಪರಿಶುದ್ಧಗೊಳಿಸಿ, ಜೀವನದ ಬದಲಾವಣೆಗೆ ಪೂರಕವಾಗಿರಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಹಾಗೂ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಈ ಭಾಗದವರು ಮನಃಪೂರ್ವಕವಾಗಿ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದರ ಫಲವಾಗಿ ಭವ್ಯ ದೇಗುಲ ನಿರ್ಮಾಣವಾಗಿದೆ. ದೇವಸ್ಥಾನಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಟ್ಟು ಸೇರಿಸುವ ಮೂಲಕ ಒಗ್ಗಟ್ಟಿನ ಕೇಂದ್ರವಾಗಿ ಬೆಳೆಯಬೇಕು ಎಂದರು.
ಬೆಳಿಯೂರುಕಟ್ಟೆ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ, ನ್ಯಾಯವಾದಿ ಕೃಪಾಶಂಕರ್, ಉದ್ಯಮಿ ದಿವ್ಯಾ ಕೆ. ಶೆಟ್ಟಿ, ಅಳಿಯೂರು ಆದಿನಾಥ ಬಸದಿ ಆಡಳಿತ ಮೊಕ್ತೇಸರ ಪ್ರಕಾಶ್ ಶೆಟ್ಟಿ ಮಜಲೋಡಿಗುತ್ತು, ಮುಂಡೂರು ಪ್ರಾ. ಕೃ.ಪ.ಸ. ಸಂಘದ ಸಿಇಒ ಜಯಪ್ರಕಾಶ್ ರೈ ಚೆಲ್ಯಡ್ಕ, ಉದ್ಯಮಿ ಗೋಪಾಲಕೃಷ್ಣ ಬೋರ್ಕರ್ ಕರೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಪ್ರಗತಿಪರ ಕೃಷಿಕೆ ತಿಲೋತ್ತಮೆ ಎಸ್. ರೈ, ಬಾಳಪ್ಪ ರೈ ಬಾಲ್ಯೊಟ್ಟುಗುತ್ತು, ದೇರಣ್ಣ ರೈ ಪಾಪನಡ್ಕ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ಆರಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಪಡುಮಲೆ ಕೋಟಿ-ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ದಾನಿ ಶೀನಪ್ಪ ರೈ ಕೊಡಂಕಿರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.
ಸಮ್ಮಾನ
ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಿದ ಕೃಷ್ಣ ಶೆಟ್ಟಿ ಅವರ ಪತ್ನಿ ದಿವ್ಯಾ ಕೆ. ಶೆಟ್ಟಿ, ದಾರಮ್ಮ ರೈ ಆನಾಜೆ, ದಾಮೋದರ ರೈ ಪಡ್ಡಂಬೈಲು, ಕೊರಗಪ್ಪ ರೈ, ರಶ್ಮೀ ಭಾರದ್ವಾಜ್, ದೇವಕಿ ರೈ ಆನಾಜೆ, ಪುರಂದರ ರೈ ಪೆಲತ್ತಡಿ, ವಸಂತ ಗೌಡ ಚೆಲ್ಯರಮೂಲೆ, ಅವಿನಾಶ್ ರೈ ಕುಡ್ಚಿಲ, ನಾರಾಯಣ ಭಟ್ ಕುಕ್ಕುಪುಣಿ, ನಾರಾಯಣ ರೈ ಕುದ್ಕಾಡಿ, ಬಾಳಪ್ಪ ರೈ ಬಾಲ್ಯೊಟ್ಟುಗುತ್ತು ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾಗೇಶ್ ಗೌಡ ಪುಳಿತ್ತಡಿ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಸಂಜೀವ ಪೂಜಾರಿ ಕಾನಾ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ದ್ವಾರದ ಕೊಡುಗೆ
ದಿ| ಕೃಷ್ಣ ಶೆಟ್ಟಿ ಅವರ ಪುತ್ರಿ ಕಾವ್ಯಾ ಶೆಟ್ಟಿ ಮಾತನಾಡಿ, ತಂದೆಯವರು ನಿಡ³ಳ್ಳಿ ದೇವಸ್ಥಾನಕ್ಕೆ 24 ಲಕ್ಷ ರೂ. ವ್ಯಯಿಸಿದ್ದರು. ಅವರ ಸ್ಮರಣಾರ್ಥ ದೇವಸ್ಥಾನಕ್ಕೆ ದ್ವಾರವನ್ನು ನಿರ್ಮಿಸಿಕೊಡುವುದಾಗಿ ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.