ನಿಡ್ಪಳ್ಳಿ ದೇವಸ್ಥಾನದ ರಸ್ತೆ: ಮೋರಿ ಅಗತ್ಯ
Team Udayavani, Jun 13, 2019, 5:00 AM IST
ಈಶ್ವರಮಂಗಲ: ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಮತ್ತು ನಿಡ³ಳ್ಳಿ- ಕುಕ್ಕುಪುಣಿ- ನಾಕುಡೇಲು ಲೋಕೋಪಯೋಗಿ ಇಲಾಖೆಯ ಡಾಮರು ರಸ್ತೆ ಸೇರುವ ಸ್ಥಳದಲ್ಲಿ ಶೀಘ್ರದಲ್ಲಿ ಮೋರಿಯನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೊಂಡ ಬೀಳುವ ಸಾಧ್ಯತೆ
ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದ ಸಂದರ್ಭ ಜೆಸಿಬಿ ಮೂಲಕ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿತ್ತು. ದೇವಸ್ಥಾನ ಎದುರಿನ ಅಶ್ವತ್ಥ ಕಟ್ಟೆಯ ಬಳಿ ತಿರುವಿನಿಂದ ಪ್ರಾಥಮಿಕ ಶಾಲೆ ಮತ್ತು ಗುತ್ತು ಚಾವಡಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಮೇಲಿಂದ ಬರುವ ನೀರಿಗಾಗಿ ಈಗ ತಾತ್ಕಾಲಿಕವಾಗಿ ಚರಂಡಿ ಮಾಡಿ ನೀರು ರಸ್ತೆ ಮೇಲೆ ಹರಿಯದಂತೆ ಮಾಡಲಾಗಿದೆ. ಆದರೆ ಜೋರು ಮಳೆ ಬಂದರೆ ರಸ್ತೆ ಮೇಲೆ ವಿಪರೀತ ನೀರು ಹರಿದು ಲೋಕೋಪಯೋಗಿ ರಸ್ತೆಯಲ್ಲಿ ಹೊಂಡ ಬೀಳುವ ಸಾಧ್ಯತೆ ಇದೆ. ಈಗ ದೇವಸ್ಥಾನ ಮತ್ತು ಗ್ರಾಮ ದೈವಗಳ ಚಾವಡಿಗೆ ಹೆಚ್ಚಾಗಿ ಭಕ್ತರು ಬರುವುದರಿಂದ ಜನಸಂದಣಿ ಇರುವ ಪ್ರದೇಶವಾಗಿದೆ.
ಸಮಸ್ಯೆಗಳಿಗೆ ಸ್ಪಂದಿಸಿ
ನಿಡ³ಳ್ಳಿ ಗ್ರಾಮದ ಹೃದಯ ಭಾಗವಾದ ಕೊಪ್ಪಳ, ನಾಕುಡೇಲು, ದೇವಸ್ಯ, ಮುಂಡೂರು, ಗೋಳಿತ್ತಡಿ ಹಾಗೂ ಶಾಲೆಯ ಪ್ರದೇಶ ಹಿಂದಿನಿಂದಲೂ ಅಭಿವೃದ್ಧಿಯಲ್ಲಿ ವಂಚಿತವಾದ ಪ್ರದೇಶವಾಗಿದೆ. ಹಲವು ವರ್ಷಗಳಿಂದ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಹಲವು ಸಲ ಮನವಿ ಮಾಡಿದರೂ ಜನರ ಬೇಡಿಕೆ ಈಡೇರಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಸ್ಪಂದಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.
ತತ್‌ಕ್ಷಣ ವ್ಯವಸ್ಥೆಯಾಗಲಿ
ದೇವಸ್ಥಾನದ ಸಂಪರ್ಕ ಕೂಡುರಸ್ತೆಯಲ್ಲಿ ನೀರು ಹೆಚ್ಚು ಬರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಹೊಂಡ ಬೀಳುವ ಸಾಧ್ಯತೆ ಹೆಚ್ಚು. ಆದುದರಿಂದ ಇಲ್ಲಿಗೆ ಮೋರಿಯ ವ್ಯವಸ್ಥೆ ತತ್‌ಕ್ಷಣ ಆಗಬೇಕು. ಸಾರ್ವಜನಿಕರು ಈ ಬಗ್ಗೆ ಪಂಚಾಯತ್‌ಗೂ ಮನವಿ ಸಲ್ಲಿಸಿದ್ದಾರೆ.
ಸ್ಪಂದಿಸಲಿ
ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯ ಪ್ರಧಾನ ಭಾಗದಲ್ಲಿ ಮೋರಿ ಆವಶ್ಯಕವಾಗಿ ಆಗಬೇಕಾಗಿದೆ. ಮೋರಿ ರಚನೆ ಆದರೆ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲವಾಗಿದೆ. ತತ್‌ಕ್ಷಣವೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು.
– ನಾಗೇಶ್ ಗೌಡ, ಆಡಳಿತ ಮುಖ್ಯಸ್ಥರು, ಶಾಂತಾದುರ್ಗಾ ದೇವಸ್ಥಾನ, ನಿಡ್ಪಳ್ಳಿ
ಸಭೆಯಲ್ಲಿ ನಿರ್ಣಯ
ಮೋರಿಯ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಕಳೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಆವಶ್ಯಕತೆ ಇದೆ ಎಂದು ಮನಗಂಡು ಕ್ರಿಯಾ ಯೋಜನೆಯಲ್ಲಿ ಸೇರಿಸುವುದೆಂದು ನಿರ್ಣಯಿಸಲಾಗಿದೆ. ತತ್‌ಕ್ಷಣ ಪ್ರಯತ್ನಿಸಲಾಗುವುದು.
-ಸಂಧ್ಯಾಲಕ್ಷ್ಮೀ, ಪಿಡಿಒ, ನಿಡ್ಪಳ್ಳಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.