ಅಡಿಕೆ ನಿಷೇಧದ ಬಗ್ಗೆ ಬೆಳೆಗಾರರು ಯಾವುದೇ ಗೊಂದಲ ಪಡಬೇಕಾಗಿಲ್ಲ : ನಳಿನ್
ವಿಟ್ಲ : ಬಿಜೆಪಿ ಕಾರ್ಯಕರ್ತರಿಗೆ, ಪೇಜ್ ಪ್ರಮುಖರಿಗೆ, ಮತದಾರ ಬಾಂಧವರಿಗೆ ಅಭಿನಂದನೆ
Team Udayavani, Jul 14, 2019, 4:57 PM IST
ವಿಟ್ಲ: ಸಮ್ಮಾನ ಅಭಿನಂದನೆಗಳು ಕಾರ್ಯಕರ್ತರಿಗೆ ಸಲ್ಲಬೇಕಾಗಿದ್ದು, ಅವರ ಪರಿಶ್ರಮದ ಫಲವಾಗಿ ನಮ್ಮ ವಿಜಯವಾಗಿದೆ. ಭ್ರಷ್ಟಾಚಾರದಿಂದ ಬೇಸತ್ತಿದ್ದ ಮತದಾರರು ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ವಿಸ್ತಾರವಾದ ಆಡಳಿತ ವ್ಯವಸ್ಥೆಯಲ್ಲಿ ಲೋಕಸಭಾ ಸದಸ್ಯನ ಇತಿ ಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಅಡಿಕೆ ನಿಷೇಧದ ಬಗ್ಗೆ ಬೆಳೆಗಾರರು ಯಾವುದೇ ಗೊಂದಲ ಪಡಬೇಕಾಗಿಲ್ಲ. ಅಡಿಕೆ ಆಹಾರ ವಸ್ತು ಎಂದು ಘೋಷಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ರವಿವಾರ ಭಾರತೀಯ ಜನತಾ ಪಾರ್ಟಿ ವಿಟ್ಲ ನಗರ ಸಮಿತಿ ವತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ, ಕಾರ್ಯಕರ್ತರಿಗೆ, ಪೇಜ್ ಪ್ರಮುಖರಿಗೆ ಹಾಗೂ ಮತದಾರ ಬಾಂಧವರಿಗೆ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಒಂದು ವರ್ಷದ ಆಡಳಿತ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಕೇವಲ ಅಧಿಕಾರ ರಾಜಕಾರಣ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣವೂ ಇಲ್ಲದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಶಾಸಕರಿಗೆ ಅವರ ನಾಯಕರ ಮೇಲೆಯೇ ವಿಶ್ವಾಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದು ನಿಶ್ಚಿತ ಎಂದು ಅವರು ಹೇಳಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ವ್ಯಕ್ತಿಗತ ಪ್ರತಿಷ್ಠೆಗಿಂತ ದೇಶದ ಹಿತ ಮುಖ್ಯ ಎಂಬುದನ್ನು ತಿಳಿಯಬೇಕು. 2019ನೇ ವರ್ಷ ಬಿಜೆಪಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಗಳು. ದೇಶದ ಏಕತೆ, ಸಮಗ್ರತೆಗಾಗಿ ಕಾರ್ಯಕರ್ತರು ದುಡಿದು ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಿದ್ದಾರೆ. ಎಲ್ಲರ ವಿಕಾಸವನ್ನು ಬಯಸಿದ ಪ್ರಧಾನಿ, ಕಟ್ಟ ಕಡೆಯ ವ್ಯಕ್ತಿಗೂ ಅಗತ್ಯವಾದ ಯೋಜನೆಯನ್ನು ನೀಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ತಂತ್ರ ಕುತಂತ್ರ ಮಾಡಿ ಅಧಿಕಾರ ಮಾಡುವ ಅಗತ್ಯವಿಲ್ಲ. ಸ್ವ ಇಚ್ಛೆಯಿಂದ ಬರುವವರವನ್ನು ಸ್ವಾಗತಿಸದೆ, ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ನಾವು ಸನ್ಯಾಸಿಗಳಲ್ಲ. ಜನರ ಪ್ರೀತಿ ವಿಶ್ವಾಸವನ್ನು ಉಳಿಸಿ ಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ ಕುಮಾರಸ್ವಾಮಿ ಮತ್ತು ತಂಡಕ್ಕೆ ದುಡ್ಡು ಮಾಡಲೆಂದೇ ಅಧಿಕಾರದ ಬೇಕಾಗಿದೆ. ಬಿಜೆಪಿಗೆ ಅಂತಹ ಅಧಿಕಾರ ವ್ಯಾಮೋಹವಿಲ್ಲ. ಹಾಗೆಂದು ಪಕ್ಷಕ್ಕೆ ಬರುವವರನ್ನು ಸ್ವಾಗತಿಸದೆ ಸುಮ್ಮನೆ ಕೂರುವುದೂ ಇಲ್ಲ. ಕಾರ್ಯಕರ್ತರು ಬಿಜೆಪಿಯ ಆಧಾರ ಸ್ತಂಭಗಳಾಗಿದ್ದು, ಅವರ ಕಾರ್ಯ ಅಭಿನಂದನೀಯವಾದದ್ದು ಎಂದು ತಿಳಿಸಿದರು.
ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೀವ ಭಂಡಾರಿ, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ ನಾಯ್ಕ ವಿಟ್ಲ, ಮಂಡಲ ಪ್ರಧಾನ ಕಾರ್ಯದರ್ಶಿ ಶಂಭು ಭಟ್, ಜಗನ್ನಾಥ ಸಾಲ್ಯಾನ್, ನಗರ ಸಮಿತಿ ಕಾರ್ಯದರ್ಶಿ ಉದಯಕುಮಾರ್ ಆಲಂಗಾರು, ವಿಟ್ಲ ಕಡಂಬು ಸಾಯಿಗಣೇಶ್ ಇಂಡೇನ್ ಗ್ಯಾಸ್ ಮಾಲಕ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಉಪಸ್ಥಿತರಿದ್ದರು.
ಪಕ್ಷದ ಹಿರಿಯ ಕಾರ್ಯಕರ್ತರಾದ ಸಂಕಪ್ಪ ಗೌಡ, ಜತ್ತಪ್ಪ ಗೌಡ ನಾಯ್ತೊಟ್ಟು, ವಿ.ರಮಾನಾಥ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಪ್ರಧಾನ ಮಂತ್ರಿಗಳ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.18ನೇ ವಾರ್ಡಿನ ಪೇಜು ಪ್ರಮುಖರನ್ನು ಗೌರವಿಸಲಾಯಿತು. ದೇಶ ಪ್ರೇಮಿ ಇಬ್ರಾಹಿಂ ಮಾಮೇಶ್ವರ ಅವರ ಮೊಬೈಲ್ ಟೀ ಕ್ಯಾಂಟೀನ್‌ಗೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.
ನಗರ ಸಮಿತಿ ಅಧ್ಯಕ್ಷ ಮೋಹನದಾಸ ಉಕ್ಕುಡ ಸ್ವಾಗತಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ವಂದಿಸಿದರು. ಹರೀಶ್ ಕೆ. ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.