Ration Card;ಇ-ಕೆವೈಸಿ ಆಗದಿದ್ದರೆ ಪಡಿತರ ಚೀಟಿಯಲ್ಲಿನ ಸದಸ್ಯತ್ವ ಅಮಾನತು
ಅವಿಭಜಿತ ದ.ಕ. ಜಿಲ್ಲೆಯಲ್ಲಿ 66,511 ಮಂದಿ ಇ-ಕೆವೈಸಿಗೆ ಬಾಕಿ
Team Udayavani, Aug 23, 2023, 6:45 AM IST
ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 45,603 ಪಡಿತರ ಚೀಟಿಗಳಲ್ಲಿನ 66,511 ಸದಸ್ಯರ ಇ-ಕೆವೈಸಿ ಮಾಡಲು ಬಾಕಿ ಇದೆ.
ಆಗಸ್ಟ್ ಒಳಗೆ ಇ-ಕೆವೈಸಿ ಮಾಡದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಸೌಲಭ್ಯ ನೀಡದಿರಲು ಆಹಾರ ಇಲಾಖೆ ನಿರ್ಧರಿಸಿದೆ. ನಿರ್ಲಕ್ಷ್ಯ ತೋರುವ ಅನೇಕ ಫಲಾನುಭವಿಗಳು ಸವಲತ್ತಿನಿಂದ ವಂಚಿತರಾಗಲಿದ್ದಾರೆ.
ಹೆಸರು ಅಮಾನತು
ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರ ವರ್ಷಗಳ ಹಿಂದೆಯೇ ಇ-ಕೆವೈಸಿ ಆರಂಭಿಸಿತ್ತು. ಹಲವು ಬಾರಿ ಅವಕಾಶ ನೀಡಿದ್ದರೂ ಶೇ. 100 ಪ್ರಗತಿ ಸಾಧ್ಯವಾಗಿಲ್ಲ. ಹೀಗಾಗಿ ಇ ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ. 31ರ ಕೊನೆಯ ಗಡುವು ನೀಡಲಾಗಿದೆ. ಒಂದು ವೇಳೆ ಮಾಡಿಸದಿದ್ದಲ್ಲಿ ಅಂತಹ ಸದಸ್ಯಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಪಡಿತರ ಚೀಟಿಯಲ್ಲಿ ಹೆಸರಿಲ್ಲದಿದ್ದರೆ ಪಡಿತರ ಸಾಮಗ್ರಿ ಮಾತ್ರವಲ್ಲದೆ ಸರಕಾರದ ಅನೇಕ ಸವಲತ್ತುಗಳನ್ನು ಪಡೆಯಲು ಕೂಡ ತೊಂದರೆ ಉಂಟಾಗಲಿದೆ.
ದ.ಕ., ಉಡುಪಿ ಜಿಲ್ಲೆ ವಿವರ
ದ.ಕ. ಜಿಲ್ಲೆಯಲ್ಲಿ 2,55,605 ಪಡಿತರ ಚೀಟಿಗಳಿದ್ದು, 10,15,841 ಸದಸ್ಯರಿದ್ದಾರೆ. ಇದರಲ್ಲಿ 2,36,273 ಲಕ್ಷ ಕಾರ್ಡ್‌ಗಳಲ್ಲಿನ 9,87,224 ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿಕೊಂಡಿದ್ದಾರೆ. 22,659 ಕಾರ್ಡ್‌ಗಳಲ್ಲಿ 34,276 ಮಂದಿ ಸದಸ್ಯರು ಇ-ಕೆವೈಸಿ ಮಾಡಿಲ್ಲ. ಉಡುಪಿ ಜಿಲ್ಲೆಗೆ ಸಂಬಂಧಿಸಿ 22,944 ಕಾರ್ಡುಗಳಲ್ಲಿನ 32,235 ಸದಸ್ಯರ ಇ-ಕೆವೈಸಿ ಆಗಿಲ್ಲ.
ದ.ಕ.: ಬೆಳ್ತಂಗಡಿ ಗರಿಷ್ಠ
ದ.ಕ. ಜಿಲ್ಲೆಯಲ್ಲಿ ತಾಲೂಕುವಾರು ಪ್ರಗತಿ ಗಮನಿಸಿದರೆ ಇ-ಕೆವೈಸಿ ಬಾಕಿ ಇರುವವರ ಪಟ್ಟಿಯಲ್ಲಿ ಬೆಳ್ತಂಗಡಿ ಪ್ರಥಮ ಸ್ಥಾನದಲ್ಲಿದೆ. 4,139 ಕಾರ್ಡುದಾರರ ಪೈಕಿ 6,031 ಸದಸ್ಯರು, ಬಂಟ್ವಾಳದಲ್ಲಿ 5,386 ಕಾರ್ಡ್‌ದಾರರ ಪೈಕಿ 7,861, ಮಂಗಳೂರಿನಲ್ಲಿ 2,454 ಕಾರ್ಡ್‌ದಾರರ ಪೈಕಿ 3,592, ಪುತ್ತೂರಿನಲ್ಲಿ 2,803 ಕಾರ್ಡ್‌ದಾರರ ಪೈಕಿ 4,772, ಸುಳ್ಯದಲ್ಲಿ 304 ಕಾರ್ಡ್‌ದಾರರ ಪೈಕಿ 391, ಮೂಡಬಿದಿರೆಯಲ್ಲಿ 2,377 ಕಾರ್ಡ್‌ದಾರರ ಪೈಕಿ 3778, ಕಡಬದಲ್ಲಿ 2198 ಕಾರ್ಡ್‌ದಾರರ ಪೈಕಿ 3,638, ಮೂಲ್ಕಿಯಲ್ಲಿ 1,176 ಕಾರ್ಡ್‌ದಾರರ ಪೈಕಿ 1,645, ಉಳ್ಳಾಲದಲ್ಲಿ 1,822 ಕಾರ್ಡ್‌ದಾರರ ಪೈಕಿ 2,568 ಸದಸ್ಯರ ಇ-ಕೆವೈಸಿಗೆ ಬಾಕಿ ಇದೆ.
ಉಡುಪಿ: ಕುಂದಾಪುರ ಗರಿಷ್ಠ
ಉಡುಪಿ ಜಿಲ್ಲೆಯಲ್ಲಿ ತಾಲೂಕುವಾರು ಪ್ರಗತಿ ಗಮನಿಸಿದರೆ ಇ-ಕೆವೈಸಿ ಬಾಕಿ ಇರುವವರ ಪಟ್ಟಿಯಲ್ಲಿ ಕುಂದಾಪುರ ಪ್ರಥಮ ಸ್ಥಾನದಲ್ಲಿದೆ. ಕುಂದಾಪುರದ 5,348 ಪಡಿತರ ಚೀಟಿಯಲ್ಲಿ 7,401 ಸದಸ್ಯರು, ಕಾರ್ಕಳದ 4,413 ಪಡಿತರ ಚೀಟಿಯಲ್ಲಿ 6,150, ಉಡುಪಿಯ 2,857 ಪಡಿತರ ಚೀಟಿಯಲ್ಲಿ 4,278, ಕಾಪುವಿನ 2,335 ಪಡಿತರ ಚೀಟಿಯಲ್ಲಿ 3,143, ಬ್ರಹ್ಮಾವರದ 2,585 ಪಡಿತರ ಚೀಟಿಯಲ್ಲಿ 3,256, ಬೈಂದೂರಿನ 4,285 ಪಡಿತರ ಚೀಟಿಯಲ್ಲಿ 6503 ಸದಸ್ಯರು, ಹೆಬ್ರಿಯ 1123 ಕಾರ್ಡ್‌ದಾರರ ಪೈಕಿ 1504 ಸದಸ್ಯರ ಇ-ಕೆವೈಸಿಗೆ ಬಾಕಿ ಇದೆ.
ಇ ಕೆವೈಸಿ ಮಾಡಲು ಬಾಕಿ ಇರುವ ಪಡಿತರ ಚೀಟಿದಾರ ಸದಸ್ಯರು ಆ. 31 ರೊಳಗೆ ಮಾಡಿಕೊಳ್ಳಬೇಕು. ಫಲಾನುಭವಿಯು ಪಡಿತರ ಚೀಟಿ ಹೊಂದಿರುವ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲು ಅವಕಾಶ ಇದೆ.
– ಹೇಮಲತಾ,ಉಪ ನಿರ್ದೇಶಕಿ
ಆಹಾರ ಮತ್ತು ನಾಗರಿಕ
ಇಲಾಖೆ, ದ.ಕ.ಜಿಲ್ಲೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.