ಪುತ್ತೂರು ಆಸ್ಪತ್ರೆಯಲ್ಲಿ “ಇಲ್ಲ’ಗಳ ಸರಮಾಲೆ

ಜನರೇಟರ್‌, ಸ್ಕ್ಯಾನಿಂಗ್‌ ಮೆಷಿನ್‌, ಕಾರ್ಡ್‌ ಟೆಸ್ಟ್‌ ವ್ಯವಸ್ಥೆಯ ಕೊರತೆ

Team Udayavani, Jul 24, 2019, 5:00 AM IST

x-18

ಪುತ್ತೂರು: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಪ್ರಮುಖ ಮತ್ತು ಸಾವಿರಾರು ಮಂದಿಗೆ ಪ್ರಯೋಜನವಾಗುವ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ “ಇಲ್ಲ’ಗಳ ಸರಮಾಲೆಯಿಂದ ಬಳಲುತ್ತಿದೆ.

ಒಂದೆಡೆ ವೈದ್ಯರ ಕೊರತೆಯಾದರೆ ಮತ್ತೂಂದೆಡೆ ಸರತಿ ಸಾಲಿನಲ್ಲಿ ನಿಂತು ವೈದ್ಯರಿಗಾಗಿ ಕಾಯುತ್ತಿರುವ ರೋಗಿಗಳು. ಇರುವ ವೈದ್ಯರ ಮೇಲೆ ಬೀಳುತ್ತಿರುವ ಒತ್ತಡ. ಇವೆಲ್ಲದರ ನಡುವೆ ಸರಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಅಗತ್ಯವಾಗಿರುವ ಜನರೇಟರ್‌, ಸ್ಕ್ಯಾನಿಂಗ್‌ ಮೆಷಿನ್‌, ಕಾರ್ಡ್‌ ಟೆಸ್ಟ್‌ ವ್ಯವಸ್ಥೆಯ ಕೊರತೆ ಎದುರಿಸುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ 20 ವರ್ಷಗಳ ಹಿಂದೆ ಸ್ಕ್ಯಾನಿಂಗ್‌ ಮೆಷಿನ್‌ ಇತ್ತಂತೆ. ಅದು ಹಾಳಾದ ಬಳಿಕ ಮರು ವ್ಯವಸ್ಥೆ ಕಲ್ಪಿಸಿಲ್ಲ.

ಹಳೆಯ ಮೆಷಿನ್‌ ಈಗ ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ತಿಂಗಳಿಗೆ ಸರಾಸರಿ 80ರಷ್ಟು ಹೆರಿಗೆಗಳು ನಡೆಯುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸದ್ಯಕ್ಕೆ ಸ್ಕ್ಯಾನಿಂಗ್‌ ಮೆಷಿನ್‌ ಇಲ್ಲ. ಸ್ಕ್ಯಾನಿಂಗ್‌ ಒಂದಕ್ಕೆ ಕನಿಷ್ಠ 400ರಿಂದ ಅಧಿಕ ದರ ವಿಧಿಸುವ ಈ ಖಾಸಗಿ ಸ್ಕ್ಯಾನಿಂಗ್‌ ಮೆಷಿನ್‌ ಕೇಂದ್ರಗಳು ಸರಕಾರಿ ಆಸ್ಪತ್ರೆಯ ರೋಗಿಗಳಿಂದಲೇ ಬದುಕುತ್ತಿವೆ.

ಗರ್ಭಿಣಿ ಕನಿಷ್ಠ 2 ಬಾರಿ ಸ್ಕ್ಯಾನಿಂಗ್‌ ಮಾಡಿಸಲೇಬೇ ಕಾಗುತ್ತದೆ. ಇತರ ರೋಗಗಳಿಗೂ ಸ್ಕ್ಯಾನಿಂಗ್‌ನ ಆವಶ್ಯಕತೆ ಇದೆ. ದಿನವೊಂದಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸರಾಸರಿ 400ಕ್ಕೂ ಮಿಕ್ಕಿ ಮಂದಿ ಬರುತ್ತಾರೆ. ಇವರಲ್ಲಿ ಸ್ಕ್ಯಾನಿಂಗ್‌ ಆವಶ್ಯಕತೆ ಬಿದ್ದರೆ ಖಾಸಗಿ ವ್ಯವಸ್ಥೆಯನ್ನೇ ಅವಲಂಭಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವ್ಯವಸ್ಥೆಯಿದ್ದರೆ ಗರ್ಭಿಣಿಗೆ ಒಂದು ಸ್ಕ್ಯಾನಿಂಗ್‌ ಉಚಿತ ಹಾಗೂ ಮತ್ತೂಮ್ಮೆ ಸ್ಕ್ಯಾನಿಂಗ್‌ ಅಲ್ಪ ದರದಲ್ಲಿ ಲಭ್ಯವಾಗುತ್ತದೆ. ಇದಕ್ಕೆ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್‌ ವೈದ್ಯರ ಆವಶ್ಯಕತೆ ಇದೆ. ಆದರೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇವೆರಡೂ ಇಲ್ಲ.

ಜನರೇಟರ್‌ ಮರೀಚಿಕೆ!
ಸರಕಾರಿ ಆಸ್ಪತ್ರೆಯಲ್ಲಿ ಜನರೇಟರ್‌ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಜನರೇಟರ್‌ ಕೆಟ್ಟು ಒಳರೋಗಿಗಳು, ಸಿಬಂದಿ ಮತ್ತು ವೈದ್ಯರು ಪರದಾಡುವುದು ನಿರಂತರ ಸಮಸ್ಯೆ. ಹಲವು ಬಾರಿ ಬಾಡಿಗೆಗೆ ಜನರೇಟರನ್ನು ತರಲಾಗುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಹೊಸ ಜನರೇಟರ್‌ ಅಳವಡಿಸಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ಯಲ್ಲಿಯೇ ದಿನ ದೂಡುತ್ತಿದ್ದಾರೆ. ಆದರೆ ಇದು ಗಂಭೀರ ಸಮಸ್ಯೆ ಎಂಬುದು ಇನ್ನೂ ಅರಿವಾಗಿಲ್ಲ.

ವ್ಯವಸ್ಥೆ ಕಲ್ಪಿಸಿ
ಸರಕಾರಿ ಆಸ್ಪತ್ರೆಯಲ್ಲಿ ಮೂಲ ವ್ಯವಸ್ಥೆಗಳ ಕೊರತೆ ಇರುವುದರಿಂದ ಇಲ್ಲಿಗೆ ಬರುವ ರೋಗಿಗಳು ಖಾಸಗಿ ವ್ಯವಸ್ಥೆಯನ್ನು ಅಧಿಕ ವೆಚ್ಚದೊಂದಿಗೆ ಅನಿವಾರ್ಯವಾಗಿ ಬಳಸಬೇಕಾಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಸುಹಾಸಿನಿ ಸಂಟ್ಯಾರು, ಸರಕಾರಿ ಆಸ್ಪತ್ರೆಯ ಫಲಾನುಭವಿ

ಕಾರ್ಡ್‌ ಟೆಸ್ಟ್‌ ಇಲ್ಲ: ಮುಖ್ಯವಾಗಿ ಮಳೆಗಾಲದಲ್ಲಿ ಡೆಂಗ್ಯೂ ಸಹಿತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ರಕ್ತ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುವಂತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಡ್‌ಟೆಸ್ಟ್‌ ವ್ಯವಸ್ಥೆಯನ್ನು ಆರಂಭಿಸಬೇಕೆಂಬ ಕೂಗು ಸಾರ್ವಜನಿಕರ ಕಡೆಯಿಂದ ಇದೆ. ಡೆಂಗ್ಯೂ ಜ್ವರದ ಕುರಿತಂತೆ ಆರಂಭಿಕ ರಕ್ತ ಪರೀಕ್ಷೆಯಾದ ಕಾರ್ಡ್‌ಟೆಸ್ಟ್‌ ವ್ಯವಸ್ಥೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇದುವರೆಗೆ ಲಭ್ಯವಿಲ್ಲದಿರುವುದರಿಂದ ಶಂಕಿತ ಡೆಂಗ್ಯೂ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಯನ್ನು ಮಾಡಬೇಕಾಗಿದೆ. ಈ ಪರೀಕ್ಷೆಯ ವೆಚ್ಚವೂ ಬಡವರಿಗೆ ಹೊರೆಯೂ ಹೌದು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಆರೋಗ್ಯ ಇಲಾಖೆಯ ಆಯುಕ್ತರಿಗೆ ಈ ಕುರಿತು ಮನವಿ ಮಾಡಿದ್ದಾರೆ. ಆದರೆ ವ್ಯವಸ್ಥೆ ಯಾವಾಗ ಬರುತ್ತದೆ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

ಜನರೇಟರ್‌ ಮಂಜೂರಾಗಿದೆ
ಜನರೇಟರ್‌ ವ್ಯವಸ್ಥೆಗೆ ಸರಕಾರದ ಮಟ್ಟದಲ್ಲಿ ಸಲ್ಲಿಸಿದ ಬೇಡಿಕೆಗೆ ಮಂಜೂರಾತಿ ಸಿಕ್ಕಿದ್ದು, ಶೀಘ್ರ ಲಭಿಸುವ ನಿರೀಕ್ಷೆ ಇದೆ. ಡಯಾಲಿಸಿಸ್‌ನ ಉದ್ದೇಶದಿಂದ 30 ಕೆ.ವಿ. ಸಾಮರ್ಥ್ಯದ ಜನರೇಟರ್‌ಬೇಡಿಕೆ ಸಲ್ಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವ್ಯವಸ್ಥೆಗೆ ಸಂಬಂಧಪಟ್ಟಂತೆಯೂ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.
– ಡಾ| ಆಶಾ ಪುತ್ತೂರಾಯ, ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ ಪುತ್ತೂರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Bantwal: ಅಪಘಾತ; ಗಾಯಾಳು ಸಾವು

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

3(1

Sullia: ಬಸ್‌ ತಂಗುದಾಣ ನಿರ್ವಹಣೆಗೆ ನಿರಾಸಕ್ತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.