ಖಾಸಗಿ ವರ್ತಕರಿಂದಲೂ ಅಡಿಕೆ ಖರೀದಿ ಚಿಂತನೆ
ಶಾಸಕರ ಉಪಸ್ಥಿತಿಯಲ್ಲಿ ಸಭೆ
Team Udayavani, Apr 16, 2020, 5:29 AM IST
ಪುತ್ತೂರು: ಲಾಕ್‌ಡೌನ್‌ನಿಂದಾಗಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ರೈತವರ್ಗಕ್ಕೆ ಸ್ಪಂದಿಸಲು ಕ್ಯಾಂಪ್ಕೋ ಮತ್ತು ಎಪಿಎಂಸಿ ಶ್ರಮಿಸುತ್ತಿದೆ. ಈಗಾಗಲೇ ಕ್ಯಾಂಪ್ಕೋ ಮೂಲಕ ರೈತರಿಂದ ತಿಂಗಳಿಗೆ 1 ಕ್ವಿಂಟಾಲ್ ಅಡಕೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈಗ ಮಾರುಕಟ್ಟೆಯ ಧಾರಣೆ ಹೆಚ್ಚಿಸುವ ಉದ್ದೇಶದಿಂದ ಖಾಸಗಿ ವರ್ತಕರಿಗೂ ಪುತ್ತೂರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಡಿಕೆ ಖರೀದಿಗೆ ಅವಕಾಶ ನೀಡುವ ಪ್ರಯತ್ನ ನಡೆಯುತ್ತಿದೆ.
ಶಾಸಕ ಸಂಜೀವ ಮಠಂದೂರು, ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ನೇತೃತ್ವದಲ್ಲಿ ಬುಧವಾರ ವರ್ತಕರ ಸಭೆ ನಡೆಸಲಾಯಿತು.
ಪುತ್ತೂರು ತಾಲೂಕಿಗೆ ಸೀಮಿತವಾಗಿ ಇಂತಹ ಪ್ರಯತ್ನಕ್ಕೆ ಎಪಿಎಂಸಿ ಮುಂದಾಗಿದೆ. ಎಪಿಎಂಸಿ ಪ್ರಾಂಗಣ ದಲ್ಲಿರುವ 50 ಖಾಸಗಿ ವರ್ತಕರಿಗೆ ಅಡಕೆ ಖರೀದಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸಲಾಯಿತು.
ಜಿಲ್ಲಾಧಿಕಾರಿ ಅನುಮತಿ ಅಗತ್ಯ
ಎಪಿಎಂಸಿಯಲ್ಲಿ ವರ್ತಕರ ವಾರ್ಡ್ ಇದೆ. ಆದರೆ ಖಾಸಗಿ ವರ್ತಕರಿಗೆ ಅಡಕೆ ಖರೀದಿಗೆ ಅವಕಾಶ ನೀಡಬೇಕಾದರೆ ಜಿಲ್ಲಾಧಿಕಾರಿಯ ಅನುಮತಿ ಅಗತ್ಯ. ಜತೆಗೆ ಪೊಲೀಸರ ಸಹಕಾರವೂ ಬೇಕಾಗಿದೆ. ಈ ಹಿನ್ನೆ°ಲೆಯಲ್ಲಿ ಉಪವಿಭಾಗಾಧಿಕಾರಿ, ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಎಪಿಎಂಸಿ ಅಧ್ಯಕ್ಷರು, ಕಾರ್ಯದರ್ಶಿ ಅವರು ಅಡಕೆ ಖರೀದಿ ವಿಚಾರದ ಕುರಿತು ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕು. ಮುಂದಿನ ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಅಡಿಕೆ ಗಾರ್ಬಲ್ ವ್ಯವಸ್ಥೆ ಸದ್ಯಕ್ಕಿಲ್ಲ
ತಾಲೂಕಿನಲ್ಲಿ ಹಲವಾರು ಅಡಕೆ ಗಾರ್ಬಲ್‌ಗಳಿವೆ. ಇಲ್ಲಿ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹಾಗಾಗಿ ಗಾರ್ಬಲ್ ವ್ಯವಸ್ಥೆಯನ್ನು ಎಪಿಎಂಸಿ ಕಾರ್ಯದರ್ಶಿ ಪರಿಶೀಲಿಸಿ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸ ಬೇಕು. ಬಳಿಕ ಗಾರ್ಬಲ್ ವ್ಯವಸ್ಥೆಯ ಆರಂಭ ಬಗ್ಗೆ ಚಿಂತಿಸ ಲಾಗುವುದು ಎಂದು ಶಾಸಕರು ತಿಳಿಸಿದರು.
ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ, ವರ್ತಕ ಮುಖಂಡರಾದ ಶಶಾಂಕ ಕೊಟೇಚ, ಭವಿನ್ ಶೇಟ್ ಕೋಡಿಂಬಾಡಿ, ಅಬೂಬಕ್ಕರ್ ಸಿದ್ದೀಕ್, ರವೀಂದ್ರನಾಥ ರೈ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.