ಎಳೆ ಅಡಿಕೆ ಪತನ ವಿಪರೀತ: ಔಷಧ ಸಿಂಪಡನೆಗೂ ಸಿಗದ ನಿಯಂತ್ರಣ; ಹವಾಮಾನ ವೈಪರೀತ್ಯ ಕಾರಣ?
ಕರಾವಳಿಯ ಕೃಷಿಕರಿಗೆ ಹೊಸ ಸಂಕಷ್ಟ
Team Udayavani, Jul 17, 2023, 7:19 AM IST
ಸುಳ್ಯ: ಈ ಬಾರಿಯ ಹವಾಮಾನದ ಏರುಪೇರು ಅಡಿಕೆ ಬೆಳೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಅಧಿಕ ಪ್ರಮಾಣದಲ್ಲಿ ನಳ್ಳಿ (ಎಳೆ ಅಡಿಕೆ) ಉದುರುತ್ತಿರುವುದು ಕಂಡುಬರುತ್ತಿದೆ.
ಮಳೆಗಾಲದಲ್ಲಿ ಅಡಿಕೆ ಬೆಳೆಗೆ ರೋಗ ಬಾಧೆ ಸಾಮಾನ್ಯ ವಾಗಿದ್ದರೂ ಈ ಹಿಂದೆ ನಿಯಂ ತ್ರಣಕ್ಕೆ ಸಿಗುತ್ತಿತ್ತು. ಆದರೆ ಕೆಲವು ವರ್ಷ ಗಳಿಂದ ಕಂಡುಬರುತ್ತಿರುವ ವಿವಿಧ ರೀತಿಯ ರೋಗಗಳು ಅಡಿಕೆ ಯನ್ನೇ ಅವ ಲಂಬಿ ಸಿರುವ ಕೃಷಿಕ ರನ್ನು ಆತಂಕ ಹಾಗೂ ನಷ್ಟಕ್ಕೆ ದೂಡಿವೆ. ಕೊಳೆರೋಗ, ಎಲೆಹಳದಿ ರೋಗ, ಎಲೆಚುಕ್ಕಿ ರೋಗ, ಕೆಂಪು ನುಸಿ ಬಾಧೆ, ಹಿಂಗಾರ ಒಣಗುವುದು ಮತ್ತಿತರ ಕಾಯಿಲೆಗಳು ಒಂದರ ಹಿಂದೆ ಒಂದರಂತೆ ಬಾಧಿಸಿ ಕೃಷಿಕರು ಹೈರಾಣಾಗಿದ್ದಾರೆ. ಅವುಗಳಿಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಮಳೆ-ಬಿಸಿಲಿನ ವಾತಾವರಣ
ಕರಾವಳಿ, ಮಲೆನಾಡು ಪ್ರದೇಶ ಗಳಲ್ಲಿ ಈ ಬಾರಿ ಬೇಸಗೆಯಲ್ಲಿ ನೀರಿನ ಕೊರತೆ ಕಾಡಿತ್ತು, ಜನವರಿಯಿಂದ ಜೂನ್ ವರೆಗೂ ಮಳೆ ಇರಲಿಲ್ಲ. ಹೀಗಾಗಿ ಕೊಳವೆಬಾವಿ, ಕೆರೆ ನೀರಿನ ಬಳಕೆ ಹೆಚ್ಚಾಗಿತ್ತು. ಹಲವು ಕೊಳವೆ ಬಾವಿಗಳ ನೀರಿನ ಮಟ್ಟ ಇಳಿಕೆಯಾಗಿತ್ತು. ವಾತಾವರಣದ ಉಷ್ಣತೆ ವಿಪರೀತ ಏರಿಕೆಯಾಗಿತ್ತು. ಪರಿಣಾಮವಾಗಿ ಹಲವು ತೋಟಗಳು ಒಣಗಿದವು. ಜೂನ್‌ನಲ್ಲಿ ಮಳೆ ವಿಳಂಬವಾಯಿತು. ಜುಲೈಯಲ್ಲೂ ಸಮರ್ಪಕವಾಗಿ ಸುರಿದಿಲ್ಲ. ಮಳೆ ಬಿಡುವು ನೀಡಿದ ಸಮಯದಲ್ಲಿ ಬಿಸಿಲಿನ ವಾತಾವರಣ ಇರುವುದರಿಂದ ಮಳೆ ಬಿಟ್ಟ ತತ್‌ಕ್ಷಣವೇ ಸೆಕೆಯ ಅನುಭವ ಆಗುತ್ತಿದ್ದು, ಅದು ಅಡಿಕೆ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಎಳೆ ಅಡಿಕೆ ಉದುರಲು ಇದುವೇ ಕಾರಣ ಇರಬಹುದು ಎನ್ನುವುದು ಸುಳ್ಯದ ಅಡಿಕೆ ಕೃಷಿಕ ಗಿರೀಶ್ ಎ. ಅವರ ಅಭಿಪ್ರಾಯ.
ಪ್ರತೀ ಜೂನ್‌ನಲ್ಲಿ ಬೋಡೋì ಸಿಂಪಡಣೆಯ ಬಳಿಕ ನಳ್ಳಿ ಉದುರುವಿಕೆ ಸಮಸ್ಯೆ ಕಡಿಮೆ ಯಾಗುತ್ತಿತ್ತು. ಈ ಬಾರಿ ಎರಡು ಬಾರಿ ಸಿಂಪಡಣೆ ಆದ ಹೆಚ್ಚಿನ ತೋಟಗಳಲ್ಲೂ ನಳ್ಳಿ ಉದುರುವಿಕೆ ನಿಂತಿಲ್ಲ. ಇದೇ ವೇಳೆ ಅಡಿಕೆ ಮರದ ಸೋಗೆಗಳು ಒಣಗಿದಂತೆ ಕಾಣುತ್ತಿವೆ.
ಸುಳ್ಯ, ಬಂಟ್ವಾಳ, ಪುತ್ತೂರು ತಾಲೂಕುಗಳ ಸಹಿತ ದ.ಕ. ಜಿಲ್ಲೆಯ ಹಲವೆಡೆ ಎಳೆ ಅಡಿಕೆ ಉದುರುವಿಕೆ ಪತ್ತೆಯಾಗಿದೆ. ಮಳೆ ಕಡಿಮೆಯಾದಾಗ ಎಳೆ ಅಡಿಕೆಯ ರಸವನ್ನು ಕೀಟ ಹೀರುತ್ತಿ ರುವುದರಿಂದ ಹೀಗಾಗುತ್ತಿದೆ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧೆಡೆ ಎಳೆ ಅಡಿಕೆ ಉದುರುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಹವಾಮಾನ ವೈಪರೀತ್ಯ, ಕೀಟ ಬಾಧೆ ಹಾಗೂ ಆಯಾ ಪ್ರದೇಶದ ವಾತಾ ವರಣ ಕಾರಣ. ಬಹುತೇಕ ಕಡೆ ನಿಯಂ ತ್ರಣಕ್ಕೆ ಬರುತ್ತಿದೆ. ಎಳೆ ಅಡಿಕೆ ಯಾವ ಕಾರಣದಿಂದ ಉದುರು ತ್ತದೆ ಎಂಬುದನ್ನು ಪತ್ತೆ ಹಚ್ಚಿ ಔಷಧ ಸಿಂಪಡಿ ಸುವುದು ಸೂಕ್ತ. ಈ ಪ್ರಕ ರಣ ಕಂಡು ಬಂದಲ್ಲಿಗೆ ತೆರಳಿ ಪರಿಶೀಲನೆ ನಡೆಸ ಲಾಗುತ್ತಿದೆ.
– ವಿನಾಯಕ ಹೆಗ್ಡೆ , ವಿಜ್ಞಾನಿ, ಸಿ.ಪಿ.ಸಿ.ಆರ್.ಐ., ಕಾಸರಗೋಡು
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.