ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ
Team Udayavani, Mar 21, 2021, 8:00 AM IST
ಬೆಳ್ತಂಗಡಿ: ಹತ್ತಾರು ಮಂದಿ ನಿತ್ಯ ಅವಲಂಬಿಸುವ ಗ್ರಾಮ ಪಂಚಾಯತ್ ರಸ್ತೆಯನ್ನು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಹಾರೆ, ಪಿಕ್ಕಾಸು ಹಿಡಿದು ಮೂರು ತಿಂಗಳುಗಳ ಅವಧಿಯಲ್ಲಿ ದುರಸ್ತಿ ಮಾಡಿದ ಹೆಗ್ಗಳಿಕೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕೋಡಿ ನಾಣ್ಯಪ್ಪ ಗೌಡರದು.
ನಾಗರಿಕ ಸಮಾಜ ಬದಲಾಗುತ್ತಿದೆ; ಪ್ರತಿಫಲಾಪೇಕ್ಷೆಯಿಲ್ಲದೆ ಒಡಹುಟ್ಟಿದವರೂ ಕಷ್ಟಕ್ಕೆ ಆಗದ ಕಾಲವಿದು. ಈ ನಡುವೆ ನಾಣ್ಯಪ್ಪ ಗೌಡರ ಪರೋಪಕಾರ ಬುದ್ಧಿ ಮಾದರಿಯಾಗಿದೆ.
ಮಚ್ಚಿನ ಗ್ರಾಮದ ಕೋಡಿ ನಿವಾಸಿ ನಾಣ್ಯಪ್ಪ ಗೌಡರಿಗೆ 74 ವರ್ಷ. ಇಬ್ಬರು ಪುತ್ರರಿದ್ದಾರೆ, ಪತ್ನಿ ಈ ಹಿಂದೆಯೇ ನಿಧನ ಹೊಂದಿದ್ದಾರೆ.
ಗ್ರಾಮದ ಜನರು ಸಾಗುವ ಗ್ರಾ.ಪಂ. ಕಚ್ಚಾ ರಸ್ತೆ ತೀರಾ ಹದಗೆಟ್ಟಿರುವುದು ನಾಣ್ಯಪ್ಪ ಗೌಡರನ್ನು ಸುಮ್ಮನಿರಲು ಬಿಡಲಿಲ್ಲ.
ರಸ್ತೆ ದುರಸ್ತಿ, ಬಿದಿರು ಮೆಳೆ ತೆರವು: ಮಚ್ಚಿನ ಗ್ರಾಮದ ವಾರ್ಡ್ ನಂ. 5ರ ನೇರೊಳ್‌ಪಲ್ಕೆ-ಕುಕ್ಕಿಲ, ಮಾಯಿಲೋಡಿಗೆ ಸಾಗುವ ಸುಮಾರು 1 ಕಿ.ಮೀ. ಮಣ್ಣಿನ ರಸ್ತೆ ಹಾಳಾಗಿತ್ತು. ಗೌಡರು ಆರಂಭದ ಒಂದು ತಿಂಗಳು ರಸ್ತೆಗೆ ವಾಲಿಕೊಂಡಿದ್ದ ಬಿದಿರು ಮೆಳೆಗಳನ್ನು ಸವರಿದರು. ಕಚ್ಚಾ ರಸ್ತೆಯಾದ್ದರಿಂದ ಮಳೆ ನೀರು ಹರಿಯಲು ಅಡ್ಡಲಾಗಿ ಟ್ರೆಂಚ್ ನಿರ್ಮಿಸಿದರು. ರಸ್ತೆಯನ್ನೂ ಸಮತಟ್ಟುಗೊಳಿಸಿದರು. ಮೋರಿ ಸಮೀಪ ಬಿರುಕು ಬಿಟ್ಟಲ್ಲಿಗೆ ತಾವೇ ಕಲ್ಲುಗಳನ್ನು ಆಯ್ದು ತಂದು ತುಂಬಿ ಸಮತಟ್ಟು ಮಾಡಿದ್ದಾರೆ.
ಗ್ರಾ.ಪಂ.ಗೆ ಲಕ್ಷ ರೂ. ಉಳಿತಾಯ: ಗೌಡರು 3 ತಿಂಗಳ ಈ ಕೆಲಸಗಳನ್ನು ತಾವೊಬ್ಬರೇ ನಡೆಸಿದ್ದಾರೆ. ಇದೇ ಕೆಲಸ ಗ್ರಾ.ಪಂ.ನಿಂದ ಕಾರ್ಮಿಕರನ್ನು ನಿಯೋಜಿಸಿ ಮಾಡುವುದಿದ್ದರೆ ಅಂದಾಜು 1 ಲಕ್ಷ ರೂ. ವೆಚ್ಚ ತಗಲುತ್ತದೆ.
ಗ್ರಾ.ಪಂ. ಅಭಿನಂದನೆ: ನಾಣ್ಯಪ್ಪ ಗೌಡರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗ್ರಾ.ಪಂ. ಒಂದು ತಿಂಗಳ ಗೌರವಧನ ನೀಡಲು ಮುಂದಾಗಿದೆ.
ಫಲಾಪೇಕ್ಷೆಯಿಲ್ಲದೆ ಗ್ರಾ.ಪಂ. ರಸ್ತೆ ಅಭಿವೃದ್ಧಿ ಮತ್ತು ಸ್ವತ್ಛತೆಯಲ್ಲಿ ನಾಣ್ಯಪ್ಪ ಗೌಡರ ಸೇವೆ ಶ್ಲಾಘನೀಯ. ಮಚ್ಚಿನ ಗ್ರಾ.ಪಂ.ನ ಸ್ವಂತ ನಿಧಿಯಡಿ ಮುಂದಿನ ದಿನಗಳಲ್ಲಿ 5 ಸಾವಿರ ರೂ. ಸಹಾಯ ಧನಕ್ಕೆ ನರೇಗಾದಡಿ ಅವಕಾಶ ಕಲ್ಪಿಸಿಕೊಡ ಲಾಗುವುದು. –ಗೌರಿಶಂಕರ್, –ಮಚ್ಚಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
–ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.