ಪುತ್ತೂರು, ಸುಳ್ಯ, ಕಡಬ: ಅಧಿಕಾರಿಗಳ ಗ್ರಾಮ ವಾಸ್ತವ್ಯ


Team Udayavani, Mar 21, 2021, 3:25 AM IST

ಪುತ್ತೂರು, ಸುಳ್ಯ, ಕಡಬ: ಅಧಿಕಾರಿಗಳ ಗ್ರಾಮ ವಾಸ್ತವ್ಯ

ಬಜತ್ತೂರು :

ಉಪ್ಪಿನಂಗಡಿ: ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಮೂಲಕ ಅಧಿಕಾರಿಗಳೇ ಜನರ ಬಳಿ ಹೋಗಿ ಸಮಸ್ಯೆ ಪರಿಹರಿಸುತ್ತಿದ್ದು ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪುತ್ತೂರು ತಹಶೀಲ್ದಾರ್‌ ಟಿ. ರಮೇಶ್‌ ಬಾಬು ತಿಳಿಸಿದರು.

ಬಜತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ಶನಿವಾರ ಬಜತ್ತೂರು ಗ್ರಾಮಸ್ಥರಿಗಾಗಿ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯವರಿಗೆ ಹೋಗಲಾಗದ ಗ್ರಾಮಗಳಿಗೆ ಅವರ ಬದಲಾಗಿ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ತಂಡ ತೆರಳಿ ಅಲ್ಲಿನ ಗ್ರಾಮಸ್ಥರ ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಮಸ್ಯೆಗಳನ್ನು ಆಲಿಸಲಿದೆ. ಆರ್‌ ಟಿ ಸಿ ಯಲ್ಲಿ ಮೃತ ವ್ಯಕ್ತಿಗಳ ಹೆಸರನ್ನು ತೆಗೆಯಲು ಮರಣ ದೃಢೀಕರಣ ಪತ್ರಗಳ ಸಮಸ್ಯೆ ಇರುವ ಪ್ರಕರಣಗಳನ್ನು ಸ್ಥಳೀಯ ಕಂದಾಯ ಅಧಿಕಾರಿಗಳ ಮಹಜರಿನ ಮೂಲಕ ಸರಿಪಡಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಯಾರ ಆರ್‌ಟಿಸಿಯಲ್ಲಿ ಗತಿಸಿದ ಹಿರಿಯರ ಹೆಸರಿದೆಯೋ ಅಂತಹ ದಾಖಲೆಗಳನ್ನು ಸರಿಪಡಿಸಲು ಮುಂದಾಗಬಹುದೆಂದು ವಿವರಿಸಿದರು.

ಬಜತ್ತೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಅವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಮುಕುಂದ ಬಜತ್ತೂರು ಮಾತನಾಡಿ, ತಾಲೂಕು ಕೇಂದ್ರದಿಂದ ದೂರವಿದ್ದು, ಕುಗ್ರಾಮ ಎನಿಸಿಕೊಂಡಿರುವ ಗ್ರಾಮ ಗಳ ಜನರ ಸಮಸ್ಯೆ ಪರಿಹಾರಕ್ಕೆ ಗ್ರಾಮ ವಾಸ್ತವ್ಯವೆನ್ನುವುದು ಉತ್ತಮ ಕಾರ್ಯ ಕ್ರಮವಾಗಿದೆ ಎಂದರು.

ಬಜತ್ತೂರು ವಿಎ ಕಚೇರಿ ವಳಾಲ್‌ ಜಂಕ್ಷನ್‌ನಿಂದ ತುಂಬಾ ದೂರವಿದ್ದು, ಅದನ್ನು ಗ್ರಾ.ಪಂ. ಕಚೇರಿ ಇರುವ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು. ಬಜತ್ತೂರು ಗ್ರಾಮವು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಟ್ಟಿದ್ದು, ಅದನ್ನು ಗ್ರಾಮಕ್ಕೆ ಹತ್ತಿರವಿರುವ ಉಪ್ಪಿನಂಗಡಿ ವ್ಯಾಪ್ತಿಗೆ ಒಳಪಡಿಸಬೇಕು, ಕಲ್ಲು ಗಣಿಗಾರಿಕೆ, ಡಾಮರು ಮಿಶ್ರಣ ಘಟಕಕ್ಕೆ ಸಂಬಂಧಿಸಿ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು. ಮನೆ ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ವುಂಟಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದ ರಕ್ಷಣೆ ಒದಗಿಸಿ ಎಂಬೆಲ್ಲ ಬೇಡಿಕೆಗಳು ವ್ಯಕ್ತವಾದವು.

ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ, ಕೃಷಿ ಅಧಿಕಾರಿ ತಿರುಪತಿ ಎನ್‌. ಭರಮಣ್ಣನವರ್‌, ಎಡಿಎಲ್‌ಆರ್‌ ರಮಾದೇವಿ, ಪಶುವೈದ್ಯಾಧಿಕಾರಿ ಪುನೀತ್‌ ಎಸ್‌.ಕೆ., ಶಿಕ್ಷಣ ಸಂಯೋಜಕ ಹರಿಪ್ರಸಾದ್‌ ಎಂ., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‌ ಕುಮಾರ್‌ ವಿ., ಶೋಭಾ ಎನ್‌.ಎಸ್‌., ಬಜತ್ತೂರು ಗ್ರಾ.ಪಂ. ಪಿಡಿಒ ಪ್ರವೀಣ್‌ ಕುಮಾರ್‌ ಉಪಸ್ಥಿತರಿದ್ದರು.

ಪ್ರಮುಖರಾದ ರಾಧಾ, ಧನಂಜಯ, ಸಂತೋಷ್‌ ಕುಮಾರ್‌, ಗಂಗಾಧರ, ಅಹಮದ್‌ ಭಾವಾ, ಮೋನಪ್ಪ ಗೌಡ, ವಸಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ವಿಜಯವಿಕ್ರಮ್‌ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಕರಣಿಕರಾದ ರಮಾನಂದ ಚಕ್ಕಡಿ, ಗೋಪಿಲಾಲ್‌ ಸುನಿಲ್‌, ಗ್ರಾಮ ಸಹಾಯಕ ಯತೀಶ್‌, ದಿವಾಕರ ಸಹಕರಿಸಿದರು.

 ತಡವಾಗಿ ಬಂದ ತಹಶೀಲ್ದಾರ್‌ : 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿದ್ದರೂ ತಹಶೀಲ್ದಾರ್‌ ಅವರು ಬರುವಾಗ ಸಮಯ 11.15 ಆಗಿತ್ತು. ನಿಗದಿತ ಸಮಯಕ್ಕೆ ಗ್ರಾಮಸ್ಥರು ಆಗಮಿಸಿದ್ದು, ಹೆಚ್ಚಿನ ಇಲಾಖೆಗಳ ಅಧಿಕಾರಿಗಳೂ ಆಗಮಿಸಿದ್ದರು.

ಕೊಲ್ಲಮೊಗ್ರು :

ಸುಬ್ರಹ್ಮಣ್ಯ: ಗ್ರಾಮ ವಾಸ್ತವ್ಯವು ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳ ಬಗ್ಗೆ ಅರಿಯಲು ಅಧಿಕಾರಿಗಳು ಜನರ ಬಳಿ ಬರುವ ಶ್ರೇಷ್ಠ ಪರಿಕಲ್ಪನೆಯಾಗಿದೆ. ಈ ಮೂಲಕ ಜನತೆ ತಮ್ಮ ಸಂಕಷ್ಟಗಳನ್ನು ನಿವಾರಿಸಿಕೊಳ್ಳಲು ವಿನೂತನ ಅವಕಾಶ ದೊರಕುತ್ತದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದರು.

ಕೊಲ್ಲಮೊಗ್ರುವಿನ ಮಯೂರ ಕಲಾ ಮಂದಿರದಲ್ಲಿ ಶನಿವಾರ ನಡೆದ   ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೂಕ್ತ ಕ್ರಮ :

ಕಲ್ಮಕಾರು  ಭಾಗದಲ್ಲಿನ ಜನತೆಯ ಸಂಕಷ್ಟ ನಿವಾರಣೆಗೆ ಸೂಕ್ತ  ಕ್ರಮ ವಹಿಸ ಲಾಗುವುದು. ಅರಣ್ಯ ಮತ್ತು ಕಂದಾಯ  ಇಲಾಖೆ ಜಂಟಿ ಸರ್ವೇ ಮಾಡುವ ಮೂಲಕ ಈ ಪ್ರದೇಶದ ಜನತೆಯ ಸಮಸ್ಯೆ ನಿವಾರಿಸಬೇಕು. ಇಲಾಖೆಗಳಲ್ಲಿ ಇದೀಗ ನೌಕರರ ಕೊರತೆ ಇದ್ದು ಅದನ್ನು ಶೀಘ್ರ ನಿವಾರಿಸಲಾಗುವುದು. ಆದರೆ ಪ್ರಸ್ತುತ ಇಲಾಖಾ ಅಧಿಕಾರಿಗಳು ಮತ್ತು ಸಿಬಂದಿ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾದರೆ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ನೆರವೇರಲು ಸಾಧ್ಯವಿದೆ ಎಂದರು.

ಈ ಪರಿಕಲ್ಪನೆ ಮೂಲಕ ಗ್ರಾಮೀಣ ಜನತೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಲ್ಲಿ ಹೇಳಲು ಅವಕಾಶ ಒದಗುತ್ತದೆ. ಅಲ್ಲದೆ ಜನರ ಸಮಸ್ಯೆ ನಿವಾರಣೆಯಾಗಿ ಅವರ ಆಶೋತ್ತರಕ್ಕೆ ಗ್ರಾಮ ವಾಸ್ತವ್ಯ ಯೋಜನೆ ಕೈಗನ್ನಡಿ ಯಾಗಿದೆ ಎಂದರು.

ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌, ಪ್ರೊಬೆಶನರಿ ಆಯುಕ್ತರಾದ ಸರ್ವಶ್ರೀ, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಭವಾನಿ ಶಂಕರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್‌ ಅನಿತಾಲಕ್ಷ್ಮೀ ಸ್ವಾಗತಿಸಿದರು. ವೆಂಕಟ್ರಮಣ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು.

ಕೃಷಿ ಪ್ರಶಸ್ತಿ ಪ್ರದಾನ :

ಕೃಷಿ ಇಲಾಖೆಯ ಆತ್ಮ ಯೋಜನೆ ಯಡಿಯಲ್ಲಿ ಕೊಡಮಾಡುವ ತಾಲೂಕು ಕೃಷಿ ಪ್ರಶಸ್ತಿಗೆ ಆಯ್ಕೆಯಾದ ತಾಲೂಕಿನ 7 ಮಂದಿ ಕೃಷಿಕರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೈನುಗಾರಿಕೆಯಲ್ಲಿ ವಿಶ್ವನಾಥ ಪೈ, ತೋಟಗಾರಿಕಾ ಕ್ಷೇತ್ರದಲ್ಲಿ ಕೆ.ಟಿ.ಭಾಗೀಶ್‌, ಸಮಗ್ರ ಕೃಷಿಯಲ್ಲಿ ಕೊಲ್ಲಮೊಗ್ರುವಿನ ಜಯಪ್ರಕಾಶ್‌ ಕಟ್ಟ, ಸಾವಯವ ಕೃಷಿಯಲ್ಲಿ ಆಲೆಟ್ಟಿಯ ಕೃಷ್ಣಪ್ರಸಾದ್‌ ಕೆ., ಸಮಗ್ರ ಕೃಷಿಯಲ್ಲಿ ಕಲ್ಮಡ್ಕದ ಕೃಷ್ಣಪ್ಪ ಪಾಲಾರ್‌, ತೋಟಗಾರಿಕಾ ವಿಭಾಗದಲ್ಲಿ  ಗುತ್ತಿಗಾರಿನ ರಾಕೇಶ್‌ ಎಂ.ಸಿ., ಜೇನು ಕೃಷಿಯಲ್ಲಿ ಏನೆಕಲ್ಲಿನ ಮುರಳೀಧರ ಜಿ.ಟಿ. ಪ್ರಶಸ್ತಿ ಸ್ವೀಕರಿಸಿದರು.

ಏನೆಕಲ್ಲು  :

ಸುಬ್ರಹ್ಮಣ್ಯ: ಗ್ರಾಮದ ಅಭಿವೃದ್ಧಿ ಜನರ ನಿರೀಕ್ಷೆಯಂತೆ ನಡೆಯಲು ಗ್ರಾಮ ವಾಸ್ತವ್ಯ ಪೂರಕ. ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಇಲಾಖೆಗಳಿಗೆ ಸಲ್ಲಿಸಿದ ಬಳಿಕವೂ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿರಬೇಕು. ಇದರಿಂದ ಇಲಾಖಾ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಸುಬ್ರಹ್ಮಣ್ಯ ತಾಲೂಕು ಪಂಚಾಯತ್‌ ಸದಸ್ಯ ಅಶೋಕ್‌ ನೆಕ್ರಾಜೆ ಹೇಳಿದರು.

ಏನೆಕಲ್ಲು ಗ್ರಾಮದ ಬಾಳಾಡಿ ಶ್ರೀ ಆದಿಶಕ್ತಿ ಭಜನ ಮಂದಿರದ ಸಭಾಂಗಣದಲ್ಲಿ ಕಡಬ ತಾಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯ ಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇಲಾಖೆಗಳಲ್ಲಿರುವ ನ್ಯೂನತೆ, ಸಮಸ್ಯೆಗೆ ಜನರು ಅಧಿಕಾರಿಗಳೊಂದಿಗೆ ನೇರ ಮುಖಾಮುಖೀ ಆಗುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದರು.

ಏನೆಕಲ್ಲು ಭಾಗದಿಂದ ಬಿಳಿನೆಲೆ ಮೂಲಕ ಕಡಬ ಸಂಪರ್ಕಿಸಲು ಏನೆಕಲ್ಲು ಕುಮಾರಧಾರಾ ನದಿ ದಾಟಿ ಸಂಚರಿಸಲು ರಸ್ತೆ ನಿರ್ಮಿಸಿದಲ್ಲಿ ಸುಲಭವಾಗಿ ಕಡಬ ತಲುಪಬಹುದು. ಆದ್ದರಿಂದ ಇಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಗ್ರಾಮಸ್ಥರು ಬೇಡಿಕೆ ಮಾಡಿದರು. ಈ ಬಗ್ಗೆ ಮನವಿ ನೀಡಿ ಲೋಕೋಪಯೋಗಿ ಇಲಾಖೆಗೆ ವರದಿ ಮಾಡುವುದಾಗಿ ತಹಶೀಲ್ದಾರರು ಉತ್ತರಿಸಿದರು.

ಇತ್ತೀಚೆಗೆ ಏನೆಕಲ್ಲು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯೋರ್ವಳು ಉಯ್ನಾಲೆ ಹಗ್ಗದಲ್ಲಿ ಸಿಲುಕಿ ಮೃತ ಪಟ್ಟಿದ್ದು, ಬಡ ಕುಟುಂಬವಾಗಿರುವ ಅವರಿಗೆ ಸರಕಾರದಿಂದ ಪರಿಹಾರ ಒದಗಿಸುವಂತೆ ರೈತ ಸಂಘದ ರಾಧಾಕೃಷ್ಣ ಅವರು ಆಗ್ರಹಿಸಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಸೂಚಿಸಿದರು.

ವಿಧವಾ ವೇತನಕ್ಕೆ 1 ವರ್ಷದ ಹಿಂದೆ ಅರ್ಜಿ ಸಲ್ಲಿಸಿದರೂ ಇನ್ನೂ ಬಂದಿಲ್ಲ, ಅಕ್ರಮ ಸಕ್ರಮ ಅರ್ಜಿ ಶೀಘ್ರ ವಿಲೇವಾರಿ ಮಾಡುವಂತೆ, ಏನೆಕಲ್ಲಿಗೆ ಖಾಯಂ ಗ್ರಾಮಕರಣಿಕರನ್ನು ನೇಮಕ ಮಾಡುವಂತೆ, ಏನೆಕಲ್ಲಿಗೆ ರಾಷ್ಟ್ರೀಕೃತ ಬ್ಯಾಂಕ್‌ಗೆ ಆಗ್ರಹ, ಸ್ಥಳೀಯ ರಸ್ತೆಗಳ ಅಭಿವೃದ್ಧಿ, ರಸ್ತೆ ಬದಿಯ ಅಪಾಯಕಾರಿ ಮರ ತೆರವು ಮಾಡುವುದು ಸೇರಿ ಗ್ರಾಮಸ್ಥರು ಬೇಡಿಕೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಭಾಗ್ಯ ಲಕ್ಷ್ಮೀ ಬಾಂಡ್‌, ಸಂಧ್ಯಾಸುರಕ್ಷಾ ಯೋಜನೆಯ ಫ‌ಲಾನುಭವಿಗಳಿಗೆ ಬಾಂಡ್‌ ವಿತರಿಸಲಾಯಿತು. ಕಡಬ ತಹಶೀಲ್ದಾರ್‌ ಅನಂತ ಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಾಧಿಕಾರಿ ಡಾ| ತ್ರಿಮೂರ್ತಿ, ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಸೇರಿದಂತೆ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗುಂಡಡ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸವಿತಾ ಭಟ್‌, ಸದಸ್ಯರಾದ ಪುಷ್ಪಾಲತಾ, ಭವ್ಯಾ, ಜಯಂತಿ, ಶಿವರಾಮ ನೆಕ್ರಾಜೆ, ಮೋಹನ ಕೋಟಿಗೌಡನಮನೆ, ದಿಲೀಪ್‌, ಸಿಎ ಬ್ಯಾಂಕ್‌ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಕೃಷ್ಣಪ್ಪ ಗೌಡ, ಭೂಮಾಪನ ಇಲಾಖೆಯ ಚಂದ್ರಶೇಖರಮೂರ್ತಿ, ಪಶುವೈದ್ಯಾಧಿಕಾರಿ ಡಾ|ಅಜಿತ್‌, ಸಿಡಿಪಿಒ ರಶ್ಮಿ, ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ, ವಿಎ ರಂಜನ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ ಸ್ವಾಗತಿಸಿದರು. ಶಿಕ್ಷಕ ವಿಜಯಕುಮಾರ್‌ ನಿರೂಪಿಸಿದರು.

ಆರ್‌ಟಿಸಿ ಸಮಸ್ಯೆ :

94ಸಿ ಸೇರಿದಂತೆ ಇತರ ಯೋಜನೆಗಳಡಿ ಜಮೀನಿನ ಹಕ್ಕುಪತ್ರ ಪಡೆಯಲು ಅರಣ್ಯ ಪ್ರದೇಶ ಇದೆಯೆಂದು ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿದರು. ಪಂಜ ಆರ್‌ಎಫ್ಒ ಮಂಜುನಾಥ ಅವರು ಉತ್ತರಿಸಿ, ಈ ಭಾಗದಲ್ಲಿ ಈಗಾಗಲೇ ಸರಕಾರಿ ಜಾಗವನ್ನು ಗ್ರಾಮಸ್ಥರಿಗೆ ಹಂಚಲಾಗಿದೆ. ಅರಣ್ಯ ಇಲಾಖೆಯ ಭಾಗ ಅರಣ್ಯ ಇಲಾಖೆಯಲ್ಲಿದೆ ಎಂದರು. ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಯಿತು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.