ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸೌಧ ನಿರ್ಮಾಣದ ಕೂಗು
Team Udayavani, Aug 15, 2019, 5:00 AM IST
ಬ್ರಿಟೀಷರು ಕಂದಾಯ ಸಂಗ್ರಹಿಸುತ್ತಿದ್ದ ಕಟ್ಟಡ.
ಬೆಳ್ಳಾರೆ: ಅಮರ ಕ್ರಾಂತಿಯ ಕಹಳೆ ಊದಿದ್ದ ಬೆಳ್ಳಾರೆಯ ಬಂಗ್ಲೆಗುಡ್ಡೆ ಈಗಲೂ ಇತಿಹಾಸವಾಗಿಯೇ ಉಳಿದಿದೆ. ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತ ನಿರ್ಮಿಸಿದ ಕಂದಕಗಳ ಕುರುಹು ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಇವೆಯಾದರೂ ಇದನ್ನು ಉಳಿಸುವ, ಸ್ವಾತಂತ್ರ್ಯದ ಐತಿಹಾಸಿಕ ದಿನಗಳನ್ನು ನೆನಪಿಸುವ ಯಾವ ಪ್ರಯತ್ನವೂ ಇದುವರೆಗೆ ನಡೆದಿಲ್ಲ. ಬಂಗ್ಲೆಗುಡ್ಡೆಯಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಯ ಕಚೇರಿಯನ್ನೇ ಸ್ಥಳಾಂತರಿಸಿದ ಬಳಿಕ ಬೆಳ್ಳಾರೆಯ ಐತಿಹಾಸಿಕ ಸ್ಥಳವೊಂದು ಇತಿಹಾಸದ ಪುಟ ಸೇರಿದೆ. ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಮಾರಕ ನಿರ್ಮಾಣವಾಗಬೇಕೆಂಬ ಕೂಗು ಈಗ ಕೇಳಿಬಂದಿದೆ.
ಬ್ರಿಟಿಷರ ಖಜಾನೆಯಾಗಿತ್ತು
ಬೆಳ್ಳಾರೆ ಕೋಟೆಯಲ್ಲಿ 1804ರಲ್ಲಿ ಒಂದು ಖಜಾನೆ ಕಚೇರಿ ಆರಂಭವಾಯಿತು. ಬೆಳ್ಳಾರೆ ಪೇಟೆಯ ಸುಳ್ಯ, ಅಮರ ಪಂಜ ಮತ್ತು ಬೆಳ್ಳಾರೆ ಮಾಗಣೆಗಳ ರಾಜಧಾನಿಯಾಗಿತ್ತು. ಈಗಲೂ ಬೆಳ್ಳಾರೆ ಗುಡ್ಡದ ಸುತ್ತ 16ನೇ ಶತಮಾನದಲ್ಲಿ ಇಕ್ಕೇರಿಯ ರಾಜಾ ವೆಂಕಟಪ್ಪ ನಾಯ್ಕ ನಿರ್ಮಿಸಿದ ಮಣ್ಣಿನ ಕೋಟೆಯ ಅವಶೇಷಗಳಿವೆ.
ಅಮರ ಸುಳ್ಯದ ರೈತರು 1837ರಲ್ಲಿ ಬ್ರಿಟಿಷರ ವಿರುದ್ಧ ಸಂಘಟಿತರಾಗಿ ಕೊಡಗು-ಕೆನರಾ ರೈತ ಬಂಡಾಯಕ್ಕೆ ಕಾರಣರಾಗಿದ್ದರು. ಅವರು ಮೊದಲು ವಶಪಡಿಸಿಕೊಂಡದ್ದು ಬೆಳ್ಳಾರೆ ಕೋಟೆಯಲ್ಲಿದ್ದ ಖಜಾನೆಯನ್ನು. 1837ರ ಮಾ. 30ರಂದು ಆರಂಭಗೊಂಡ ಬಂಡಾಯ 1837ರ ಎ. 5ರಂದು ಮಂಗಳೂರಿನ ಬಾವುಟ ಗುಡ್ಡೆ ವಶಪಡಿಸಿಕೊಳ್ಳುವವರೆಗೆ ನಡೆಯಿತು.
2004ರ ಬಳಿಕ ಮತ್ತೆ ಬೆಳ್ಳಾರೆಯಲ್ಲಿ ಅಮರ ಕ್ರಾಂತಿಯನ್ನು ನೆನಪಿಸುವ ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ 1837ರ ಹುತಾತ್ಮರಿಗೆ ಇದುವರೆಗೆ ಸರಿಯಾದ ಸ್ಮಾರಕ ನಿರ್ಮಾಣವಾಗಿಲ್ಲ. ಇವರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಬೆಳ್ಳಾರೆ ಕೋಟೆಯಲ್ಲಿ ಒಂದು ಅಮರ ಸುಳ್ಯ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು. ದೇಶಭಕ್ತರ ಬಗ್ಗೆ ತಿಳಿಸುವ ಕೃತಿಗಳು ಓದುಗರಿಗೆ ಸಿಗುವಂತಾಗಲು ಗ್ರಂಥಾಲಯ ನಿರ್ಮಾಣವಾಗಬೇಕೆಂದು ಬೆಳ್ಳಾರೆ ಮತ್ತು ಸುಳ್ಯದ ಜನ ಬಯಸುತ್ತಿದ್ದಾರೆ. ಈ ಬಗ್ಗೆ ಸುಳ್ಯ ಶಾಸಕ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವ ಪ್ರಯತ್ನ ನಡೆಯುತ್ತಿದೆ. ಬೆಳ್ಳಾರೆಯಲ್ಲಿ ಆ. 25ರಂದು ಬೃಹತ್ ಸಭೆಯೊಂದನ್ನು ನಡೆಸಿ ಮುಂದಿನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ 13 ದಿನಗಳ ಬಳಿಕ ತಲಶ್ಯೇರಿ ಮತ್ತು ಮುಂಬಯಿಯಿಂದ ಆಗಮಿಸಿದ ಬ್ರಿಟೀಷರ ಬೃಹತ್ ಸೇನೆಯೆದುರು ರೈತ ದಂಡು ಸೋತಿತು. ಬ್ರಿಟಿಷರು ದಂಗೆಯ ನಾಯಕರನ್ನು ಸೆರೆ ಹಿಡಿದು ಸಾರ್ವಜನಿಕ ವಾಗಿ ಗಲ್ಲಿಗೇರಿಸಿ ಹೆಣಗಳನ್ನು ಕಾಗೆ- ಹದ್ದುಗಳಿಗೆ ಆಹಾರವಾಗಲು ಬಿಟ್ಟಿದ್ದರು.
ವಿ.ಎ. ಕಚೇರಿ ಸ್ಥಳಾಂತರ
ಬೆಳ್ಳಾರೆಯ ಕೋಟೆಯು ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. ಇದನ್ನು ನೆನಪಿಸುವ ಕಟ್ಟಡ ಈಗಲೂ ಇಲ್ಲಿದೆ. ಬಂಗ್ಲೆಗುಡ್ಡೆಯ ಈ ಕಟ್ಟಡದ ಮೇಲೆ ಅಂದರೆ ಬ್ರಟಿಷರ ಟ್ರೆಜರಿ ಮೇಲೆ ಅಮರ ಸುಳ್ಯ ರೈತರ ದಾಳಿಯಾಗಿತ್ತು. ಈ ಕಟ್ಟಡದಲ್ಲಿ ಕಳೆದ ಕೆಲವು ತಿಂಗಳವರೆಗೂ ಬೆಳ್ಳಾರೆೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿ.ಎ. ಕಚೇರಿ ಕಾರ್ಯಾಚರಿಸುತ್ತಿತ್ತು.
ಈ ಕಚೇರಿಗೆ ಕಾಲಿಟ್ಟಾಗಲೆಲ್ಲಾ ಇಲ್ಲಿನ ನಿವಾಸಿಗಳಿಗೆ ಅಮರ ಕ್ರಾಂತಿಯ ನೆನಪಾಗುತ್ತಿತ್ತು. ಆದರೆ ಶಿಥಿಲಾವಸ್ಥೆಯಲ್ಲಿದ್ದ ವಿ.ಎ. ಕಚೇರಿಯನ್ನು ಈಗ ಸ್ಥಳಾಂತರಿಸಲಾಗಿದೆ. ಇದರಿಂದ ಬಂಗ್ಲೆಗುಡ್ಡೆಯ ಅಮರ ಕ್ರಾಂತಿಯ ಇತಿಹಾಸದ ನೆನಪು ಮತ್ತೆ ಕ್ಷೀಣಿಸಿದಂತಾಗಿದೆ.
ಸ್ಮಾರಕ ರಚನೆಯ ಪ್ರತಿಜ್ಞೆ
ಭಾರತದ ಸುವರ್ಣ ಸ್ವಾತಂತ್ರ್ಯೋತ್ಸವದ ಸಂದರ್ಭ ಸುಳ್ಯದಲ್ಲಿನ ಎಸ್. ದೇವಿಪ್ರಸಾದ ಸಂಪಾಜೆ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಅಮರ ಕ್ರಾಂತಿ ಉತ್ಸವ ಸಮಿತಿ, ಸಮರ ಸುಳ್ಯ ಬಂಡಾಯದ ನೈಜಕತೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ಆರಂಭಿಸಿ ಅಮರ ಸುಳ್ಯದ ಕ್ರಾಂತಿವೀರರು ಎನ್ನುವ ಡಾ| ಬಿ. ಪ್ರಭಾಕರ ಶಿಶಿಲ ಅವರ ಬೀದಿ ನಾಟಕವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬೆಳ್ಳಾರೆಯಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ತಲುಪಿ ಅಲ್ಲಿ ಕೊಡಗು ಅರಸನ ವಿಜಯ ಧ್ವಜ ಹಾರಿಸಿದ್ದರು.
2004ರಲ್ಲಿ ಬೆಳ್ಳಾರೆಯಲ್ಲೂ ಐತಿಹಾಸಿಕ ಕೋಟೆ ಸಮಿತಿ ಬೃಹತ್ ಸಮಾವೇಶ ಮಾಡಿ ಬೆಳ್ಳಾರೆ ಕೋಟೆ ಪ್ರದೇಶದಲ್ಲಿ ಶಾಶ್ವತ ಸ್ಮಾರಕ ಮಾಡುವ ಪ್ರತಿಜ್ಞೆ ಮಾಡಿದ್ದರು.
– ಡಾ| ಪ್ರಭಾಕರ ಶಿಶಿಲ, ಹಿರಿಯ ವಿದ್ವಾಂಸ
ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
BBK11: ಕೋಪದಿಂದ ಅರ್ಧದಲ್ಲೇ ಬಿಗ್ ಬಾಸ್ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Kannada Movie: ನಿರಂಜನ್ ಶೆಟ್ಟಿಯ ʼ31 ಡೇಸ್ʼ ಚಿತ್ರ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.