ನಮ್ಮ ಹೋರಾಟ ರೈತರ ಪರ: ಶ್ರೀನಿವಾಸ ನಿಡಿಂಜಿ
Team Udayavani, Dec 27, 2017, 5:13 PM IST
ಬೆಳ್ಳಾರೆ: ನಮ್ಮ ಹೋರಾಟ ರೈತರ ಪರವಾಗಿ ಇರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ನಿಡಿಂಜಿ ಹೇಳಿದರು. ಅವರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ರೈತ ಘಟಕದ ಆಶ್ರಯದಲ್ಲಿ ಅರಂತೋಡು ಗ್ರಾಮ ಮತ್ತು ತೊಡಿಕಾನ ಗ್ರಾಮ ರೈತ ಘಟಕ ರಚನೆ ಕುರಿತು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ನಾವೆಲ್ಲರೂ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು. ರೈತ ಧ್ವಜದಡಿ ಬಂದಾಗ ನಮ್ಮ ಹೋರಾಟ ರೈತ ಪರ
ಚಿಂತನೆ ಹೊಂದಿರಬೇಕು. ನಮ್ಮ ಭಾಗದಲ್ಲಿ ಅಡಿಕೆಗೆ ಹಳದಿ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೂಲಿ ಕಾರ್ಮಿಕರ ದಿನ ಗೂಲಿ ಜಾಸ್ತಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ರೈತ ಪರ ಹೋರಾಟದಲ್ಲಿ ರೈತ ಮಹಿಳೆಯರು ಮುಂದೆ ಬರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ, ರೈತ ಹೊನ್ನಪ್ಪ ಮಾಸ್ತರ್ ಅಡ್ತಲೆ ಮಾತನಾಡಿ, ಅಡಿಕೆಯ ಹಳದಿ ರೋಗಕ್ಕೆ ಔಷಧಿ
ಸಂಶೋಧಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಕೇಳಿದರೆ ಸಿಬಂದಿ ಕೊರತೆ ಎನ್ನುತ್ತಾರೆ. ಸರಕಾರ ಕೋವಿ ಪರವಾನಿಗೆ ನವೀಕರಣಕ್ಕೆ 1,500 ರೂ. ಶುಲ್ಕ ವಿಧಿಸಿ ರೈತರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ದೂರಿದರು.
ನೂತನ ಅಧ್ಯಕ್ಷ ಪರ್ನೋಜಿ ತೀರ್ಥ ರಾಮ ಮಾತನಾಡಿದರು. ಭತ್ತದ ಬೇಸಾಯಗಾರರಾದ ದೇರಾಜೆ ಹೂವಯ್ಯ ಗೌಡ ಹಾಗೂ ಅಬ್ದುಲ್ ಲತೀಫ್ ಮೊಟ್ಟೆಂಗಾರು ಅವರನ್ನು ಸಮ್ಮಾನಿಸಲಾಯಿತು. ರೈತರಿಗೆ ಹಸಿರು ಶಾಲು ನೀಡಿ, ಪ್ರಮಾಣವಚನ ಬೋಧಿಸಲಾಯಿತು. ಅಗಲಿದ ರೈತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಉಪಾಧ್ಯಕ್ಷ ತಾರಾನಾಥ ಗೌಡ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಬೆಳ್ತಂಗಡಿ ತಾ| ಅಧ್ಯಕ್ಷ ಸುಧಾಕರ ಜೈನ್, ಬಂಟ್ವಾಳ ತಾ| ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಸಂಪಾಜೆ ವಲಯ ಅಧ್ಯಕ್ಷ ಆನಂದ ಗೌಡ, ಜಾಲ್ಸೂರು ವಲಯ ಅಧ್ಯಕ್ಷ ಪುರುಷೋತ್ತಮ ನಂಗಾರು, ಕುಸುಮಾಧರ ಗೌಡ, ರೋಹನ್ ಪೀಟರ್, ತಾ| ಸಂಚಾಲಕ ದಿವಾಕರ ಪೈ ಉಪಸ್ಥಿತರಿದ್ದರು. ಮೋಹನ್ ಅಡ್ತಲೆ ವಂದಿಸಿದರು. ಜಯರಾಮ ಮಾಸ್ತರ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಮರ್ಕಂಜ ರೈತ ಗೀತೆ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.