ಪೈಲಾರು ಶಾಲೆಗೆ ಈ ವರ್ಷ ಶತ ಸಂಭ್ರಮ
ಪ್ರಾಕೃತಿಕ ಸೊಬಗಿನ ಬಂಟಮಲೆ ತಪ್ಪಲಿನ ಊರು
Team Udayavani, Nov 30, 2019, 5:35 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1919 ಶಾಲೆ ಆರಂಭ
1ರಿಂದ 7ನೇ ತರಗತಿ ವರೆಗೆ 37 ವಿದ್ಯಾರ್ಥಿಗಳು
ಸುಳ್ಯ: ಕೃಷಿ ಪ್ರಧಾನ ನೆಲೆ, ಅಪೂರ್ವ ಪ್ರಾಕೃತಿಕ ಸೊಬಗಿನ ಬಂಟಮಲೆ ತಪ್ಪಲಿನಲ್ಲಿರುವ ಪಠೇಲರ ಕಾಲದ ಪೈಲಾರು ಸ.ಹಿ.ಪ್ರಾ. ಶಾಲೆಗೆ ಈ ಬಾರಿ 100 ವರ್ಷದ ಸಂಭ್ರಮ.
ಶತ ವರ್ಷಗಳ ಹಿಂದೆ ಪ್ರಾರಂಭಗೊಂಡ ಗ್ರಾಮ್ಯ ಪ್ರದೇಶದ ಶಾಲೆ ಈ ಬಾರಿ ಅರ್ಥಪೂರ್ಣ ಶತಮಾನೋತ್ಸವ ಆಚರಣೆಯ ಸಡಗರಕ್ಕೆ ಅಣಿಗೊಳ್ಳುತ್ತಿದೆ.
ಕಂಜರ್ಪಣೆ ಬಳಿ ಆರಂಭ
ಊರಿನ ಹಿರಿಯರ ಪ್ರಯತ್ನದ ಫಲವಾಗಿ 1919ರಲ್ಲಿ ಪೈಲಾರಿನ ಕಂಜರ್ಪಣೆ ಬಳಿ ಶಾಲೆ ಪ್ರಾರಂಭಗೊಂಡಿತು. ಅನಂತರ ಅಲ್ಲಿಂದ ಈಗಿನ ಪೈಲಾರು ಮೇಲಿನ ಬಸ್ ತಂಗುದಾಣ ಇರುವ ಪ್ರದೇಶದ ಬಳಿ ನಿರ್ಮಾಣವಾಯಿತು. ಈಗಲೂ ಈ ಪ್ರದೇಶವನ್ನು ಹಳೆ ಶಾಲೆ ಎಂದೇ ಕರೆಯುತ್ತಾರೆ..
ಪೈಲಾರಿಗೆ ಸ್ಥಳಾಂತರ
ಹಳೆ ಶಾಲೆ ಇದ್ದ ಪ್ರದೇಶದಿಂದ ಶಾಲೆಯನ್ನು ಪೈಲಾರು ಬಳಿ ಸಮತಟ್ಟಾದ ಜಾಗಕ್ಕೆ ಸ್ಥಳಾಂತರಿಸಲಾಯಿತು. 1930ರಲ್ಲಿ ದಿ| ಪಠೇಲ್ ಕೃಷ್ಣಪ್ಪ ಗೌಡ ಅವರ ಮುಂದಾಳತ್ವದಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಸುಮಾರು 30ರಿಂದ 35 ವರ್ಷಗಳ ಕಾಲ ಇದೇ ಕಟ್ಟಡ ಶಾಲೆಗೆ ಆಧಾರವಾಗಿತ್ತು. ಕಾಲಕ್ರಮೇಣ ಕಟ್ಟಡ ಶಿಥಿಲಗೊಂಡು ಕುಸಿಯಿತು. ಬಳಿಕ ದಿ| ಕುಶಾಲಪ್ಪ ಗೌಡ ಕೋಡು¤ಗುಳಿ ಮತ್ತು ದಿ| ಚಿನ್ನಪ್ಪ ಗೌಡ ಕೋಡು¤ಗಳಿ ಅವರ ನೇತೃತ್ವದಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಆರಂಭದಲ್ಲಿ ದಿ| ಪುಟ್ಟಣ್ಣ ಗೌಡ ಮಡಪ್ಪಾಡಿ ಅವರು ಈ ಕಟ್ಟಡದ ನಿರ್ಮಾಣ ಉಸ್ತುವಾರಿ ವಹಿಸಿದ್ದರು. ಕೆಲವು ಹಂತಗಳ ಕಾಮಗಾರಿ ಬಳಿಕ ನಿರ್ಮಾಣ ಜವಾಬ್ದಾರಿಯನ್ನು ಊರಿನ ಕೆಲ ಕುಟುಂಬಗಳು ವಹಿಸಿಕೊಂಡವು. ಆ ಕೊಠಡಿಗಳಲ್ಲಿ ಈಗಲೂ ತರಗತಿಗಳು ನಡೆಯುತ್ತಿವೆ. ಜಿಲ್ಲಾ ಬೋರ್ಡ್‌ಗೆ ಒಳಪಟ್ಟು ಕಿರಿಯ ಪ್ರಾಥಮಿಕ ತರಗತಿ ಹೊಂದಿದ್ದ ಈ ಶಾಲೆ 1969-70ರಲ್ಲಿ ಹಿ.ಪ್ರಾ.ಶಾಲೆ ಆಗಿ ಮೇಲ್ದರ್ಜೆಗೇರಿತು.
ನೂರಾರು ವಿದ್ಯಾರ್ಥಿಗಳಿಗೆ ಆಸರೆ
ಪ್ರಾರಂಭದಲ್ಲಿ ಜಿಲ್ಲಾ ಬೋರ್ಡ್‌ಗೆ ಒಳಪಟ್ಟಿದ್ದ ಈ ಶಾಲೆ ಪೈಲಾರು, ಕುಕ್ಕುಜಡ್ಕ, ಹಾಸನಡ್ಕ ಸಹಿತ ಹತ್ತಾರು ಪ್ರದೇಶಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರವಾಗಿತು. ಈಗ ಪರಿಸರದಲ್ಲಿ ಐದು ಶಾಲೆಗಳಿವೆ. ಹಾಸನಡ್ಕ, ಕುಕ್ಕುಜಡ್ಕ, ದೊಡ್ಡತೋಟ ಮೊದಲಾದೆಡೆ ಖಾಸಗಿ ಮತ್ತು ಸರಕಾರಿ ಶಾಲೆಗಳಿವೆ. ಇಲ್ಲಿ ಕಲಿತ ಹಲವಾರು ಮಂದಿ ಬೇರೆ-ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲಾ ಅಂಕಿ ಅಂಶದ ಆಧಾರದಲ್ಲಿ 1941-46ರ ತನಕ ಬಿ.ಸೋಮಣ್ಣ ಗೌಡ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿಂದ ಈ ತನಕ ಸಲ್ಲಿಸಿದ ಮುಖ್ಯಗುರು, ಶಿಕ್ಷಕರ ಹೆಸರುಗಳನ್ನು ಗೋಡೆ ಬರಹದಲ್ಲಿ ದಾಖಲಿಸಲಾಗಿದೆ. ಸೀತಾರಾಮ ಗೌಡ ಎಂ.ಬಿ. ಅವರು ಮುಖ್ಯಗುರು ಆಗಿದ್ದ ಸಂದರ್ಭ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ.
ಪ್ರಸ್ತುತ ಶಾಲೆಗೆ 1.76 ಎಕ್ರೆ ಜಾಗ ಇದ್ದು, 1ರಿಂದ 7ನೇ ತರಗತಿ ತನಕ ತರಗತಿಗಳಿವೆ. 37 ವಿದ್ಯಾರ್ಥಿಗಳಿದ್ದಾರೆ. ಪೂರ್ಣಕಾಲಿಕ ಮೂವರು ಮತ್ತು ಅತಿಥಿ ನೆಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಮಾಡಬಾಕಿಲು ಸಿಆರ್‌ಸಿ, ಮಡಪ್ಪಾಡಿ, ಕಡಪಳ ಮೊದಲಾದೆಡೆಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಕೋಲಾಟ ಸಹಿತ ವಿವಿಧ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಬಹುಮಾನ ಗಳಿಸಿದ್ದಾರೆ.
ಶತಮಾನೋತ್ಸವಕ್ಕೆ ಸಿದ್ಧತೆ
ವರ್ಷಾಂತ್ಯ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪೂರ್ವಭಾವಿ ಸಭೆ ಆಯೋಜಿಸಿ ಸಮಿತಿ ರಚಿಸಿ ಸಿದ್ಧತೆಗಳು ನಡೆದಿವೆ. ಭೋಜನ ಗೃಹಕ್ಕೆ ಮೇಲ್ಛಾವಣಿ, ದಾಸ್ತಾನು ಕೊಠಡಿ, ಟ್ಯಾಂಕ್, ಗೇಟ್ ನಿರ್ಮಾಣ, ಕಂಪ್ಯೂಟರ್ ವ್ಯವಸ್ಥೆ ಹೀಗೆ ಹತ್ತಾರು ಯೋಜನೆಗಳನ್ನು ಅನುಷ್ಠಾನಿಸಲು ಉದ್ದೇಶಿಸಲಾಗಿದೆ. ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ, ತರಬೇತಿ ಸಹಿತ ಎರಡು ದಿನಗಳ ಕಾಲ ಶತಮಾನೋತ್ಸವ ಸಂಭ್ರಮ ಹಮ್ಮಿಕೊಳ್ಳುವ ಇರಾದೆ ಹೊಂದಲಾಗಿದೆ.
ಶಾಲಾ ಪ್ರಗತಿ
ವಿವಿಧ ಹಂತಗಳಲ್ಲಿ ಸರಕಾರ ಮತ್ತು ಊರವರ ಸಹಯೋಗದೊಂದಿಗೆ ಶಾಲೆ ಅಭಿವೃದ್ಧಿ ಕಂಡಿತು. ರಂಗಮಂದಿರ, ಭೋಜನ ಕೊಠಡಿ, ಬಿಸಿಯೂಟ ಕೊಠಡಿಗಳಿವೆ. ಹೂವಿನ ತೋಟ, ಬಾವಿ, ಕ್ರೀಡಾಂಗಣ ಹೀಗೆ ವಿವಿಧ ಮೂಲ ಸೌಕರ್ಯಗಳನ್ನು ಹೊಂದಿದೆ. ಬೆಂಗಳೂರಿನ ಕಿವಾನಿ ಸಂಸ್ಥೆ ಈ ವರ್ಷ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಟ್ಟಿದೆ. ಪೈಲಾರು ಮಿತ್ರವೃಂದ ಮತ್ತು ಪ್ರಂಡ್ಸ್ ಕ್ಲಬ್ ಸಂಘ ಸಂಸ್ಥೆ ಶಾಲಾಭಿವೃದ್ಧಿ ಗಣನೀಯ ಸಹಕಾರ ನೀಡಿದೆ ಎನ್ನುತ್ತಾರೆ ಶಿಕ್ಷಕರು.
ಈ ವರ್ಷ ಶಾಲೆಗೆ 100 ರ ಸಂಭ್ರಮ. ಶತಮಾನೋತ್ಸವ ಸಮಿತಿ ರಚಿಸಲಾಗಿದೆ. ಈ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಶಾಲೆಗೆ ಕೆಲ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.
-ಚಂದ್ರಾವತಿ ಎ, ಮುಖ್ಯಗುರು
ನಾನು ಇದೇ ಶಾಲೆಯಲ್ಲಿ 3ನೇ ಮತ್ತು 4ನೇ ತರಗತಿಯನ್ನು ಕಲಿತು, ಇದೇ ಶಾಲೆಯಲ್ಲಿ ಮುಖ್ಯಗುರುವಾಗಿ ಸೇವೆ ಸಲ್ಲಿಸಿದ್ದೇನೆ. ಆಗ 1ರಿಂದ 4ನೇ ತರಗತಿ ತನಕ 100ಕ್ಕೂ ಹೆಚ್ಚು ಮಕ್ಕಳು ಇಲ್ಲಿದ್ದರು. 2006ರಿಂದ 2012ರ ತನಕ ನಾನು ಮುಖ್ಯಗುರುವಾಗಿ ಇದ್ದ ಸಂದರ್ಭ ರಂಗಮಂದಿರ, ಅಕ್ಷರ ದಾಸೋಹದ ಭೋಜನ ಕೊಠಡಿ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ದಾನಿಗಳ, ಸಂಘ ಸಂಸ್ಥೆಗಳ, ಸಂಸ್ಕೃತಿ ಇಲಾಖೆ ಸಹಕಾರದಿಂದ ನಿರ್ಮಿಸಲಾಗಿತ್ತು.
-ಸೀತಾರಾಮ ಗೌಡ ಎಂ.ಬಿ. ನಿವೃತ್ತ ಮುಖ್ಯಗುರು, ಹಳೆ ವಿದ್ಯಾರ್ಥಿ
- ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.