Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ
Team Udayavani, Sep 22, 2024, 1:06 PM IST
ಬಂಟ್ವಾಳ: ಮಳೆಗಾಲದ ಸಂದರ್ಭ ಮನೆಗಳು ಅಪಾಯ ಸ್ಥಿತಿಯ ಲ್ಲಿದ್ದರೆ ಕಂದಾಯ ಇಲಾಖೆಯವರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡುತ್ತಾರೆ. ಆದರೆ ಪಾಣೆಮಂಗಳೂರು ಗ್ರಾಮ ಆಡಳಿತ ಅಧಿಕಾರಿಯವರ ಕಚೇ ರಿಯ ಸ್ಥಿತಿ ನೋಡಿದರೆ ಮುರುಕಲು ಮನೆಗಿಂತಲೂ ಕಡೆಯಾಗಿದ್ದು, ಅಲ್ಲಿನ ಸಿಬಂದಿ ವರ್ಷವಿಡೀ ಅದೇ ಕಚೇರಿಯಲ್ಲಿ ಕಾರ್ಯಾಚರಿಸಬೇಕಿದೆ. ಸಾರ್ವಜನಿಕರಿಗೆ ಕೆಲಸವಾಗಬೇಕಿದ್ದರೆ ಅದೇ ಅಪಾಯಕಾರಿ ಕಟ್ಟಡಕ್ಕೆ ತೆರಳಬೇಕಿದೆ.
ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯಲ್ಲಿ ರುವ ಈ ಕಟ್ಟಡದಲ್ಲಿ ಅಡಿಪಾಯದಿಂದ ಮೇಲ್ಛಾವಣಿವರೆಗೂ ಎಲ್ಲವೂ ಶಿಥಿಲಾವಸ್ಥೆ ಯಲ್ಲಿದೆ. ಇಂತಹ ಅಪಾಯಕಾರಿ ಕಟ್ಟಡದಲ್ಲಿ ಗ್ರಾಮ ಆಡಳಿತ ಕಚೇರಿ ಕಾರ್ಯಾಚರಿಸುವುದು ಸರಿಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಟ್ಟಡದ ಬಾಗಿಲು, ಕಿಟಕಿಗಳು ಮುರುಕಲು ಸ್ಥಿತಿಯಲ್ಲಿದ್ದು, ಬಾಗಿ ಲನ್ನು ಜೋರಾಗಿ ದೂಡಿದರೆ ಮುರಿದು ಬೀಳುವ ಸ್ಥಿತಿಯಲ್ಲಿದೆ.
ಈ ಹಳೆಯ ಕಟ್ಟಡದಲ್ಲಿ ಹಿಂದೆ ಪಾಣೆ ಮಂಗಳೂರು ಕಂದಾಯ ನಿರೀಕ್ಷಕರ ಕಚೇರಿ ಕಾರ್ಯಾಚರಿಸುತ್ತಿದ್ದು, ತಾಲೂಕು ಆಡಳಿತ ಸೌಧ ನಿರ್ಮಾಣದ ಬಳಿಕ ಅದು ಬಿ.ಸಿ.ರೋಡಿಗೆ ಸ್ಥಳಾಂತರಗೊಂಡಿತ್ತು. ಪ್ರಸ್ತುತ ಗ್ರಾಮ ಆಡಳಿತ ಕಚೇರಿ ಕಾರ್ಯಾ ಚರಿಸುತ್ತಿದ್ದು, ಕಚೇರಿಯ ದಾಖಲೆಗಳು ಕೂಡ ಅದೇ ಹಳೆ ಕಟ್ಟಡಲ್ಲಿದೆ.
ಬಾಡಿಗೆ ಕಟ್ಟಡಕ್ಕೆ ಹುಡುಕಾಟ
ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆಯ ಲ್ಲಿರುವುದರಿಂದ ಕಳೆದ ಮಳೆಗಾಲದಲ್ಲಿ ಗ್ರಾಮ ಆಡಳಿತ ಕಚೇರಿಗೆ ಬಾಡಿಗೆ ಕಟ್ಟಡ ಹುಡುಕಲಾಗಿದ್ದು, ಆದರೆ ಅವರಿಗೆ ಸೂಕ್ತ ಕಚೇರಿ ಸಿಕ್ಕಿರಲಿಲ್ಲ. ಈಗಲೂ ಕಚೇರಿ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಣೆಮಂಗಳೂರು ಗ್ರಾಮ ಆಡಳಿತ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.
ಪುರಸಭೆಯ ಕಟ್ಟಡ
ಈ ಕಟ್ಟಡವು ಬಂಟ್ವಾಳ ಪುರಸಭಾ ಅಧೀನದಲ್ಲಿದ್ದು, ಹಿಂದೊಮ್ಮೆ ಕಟ್ಟಡವನ್ನು ದುರಸ್ತಿ ಪಡಿಸಬೇಕು ಎಂಬ ಪ್ರಸ್ತಾವ ಬಂದಾಗ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕಟ್ಟಡ ಈಗಲೂ ಹಾಗೇ ಇದ್ದು, ದುರಸ್ತಿಯೂ ಇಲ್ಲ, ತೆರವು ಕೂಡ ಇಲ್ಲ ಎಂಬ ಸ್ಥಿತಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Sullia: ಆಡುಮರಿಯನ್ನು ಅಮಾನುಷವಾಗಿ ಎಳೆದೊಯ್ದ ಬಗ್ಗೆ ದೂರು
Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ
MUST WATCH
ಹೊಸ ಸೇರ್ಪಡೆ
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.