“ಶಾಂತಿ, ಸೌಹಾರ್ದ ವಿಚಾರಕ್ಕೆ ಸ್ಪರ್ಧೆ’
Team Udayavani, Apr 9, 2019, 6:00 AM IST
ದ.ಕ. ಲೋಕಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಅವರು ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸೋಮವಾರ ಪುತ್ತೂರು ನಗರದಲ್ಲಿ ಮೆರವಣಿಗೆಯ ಮೂಲಕ ಮತಯಾಚನೆ ನಡೆಸಿದರು.
ನಗರ: ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಯ ವಿಚಾರದೊಂದಿಗೆ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಈ ಬಾರಿ ಸ್ಪರ್ಧೆ ನಡೆಸುತ್ತಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದರು. ಸೋಮವಾರ ಪುತ್ತೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 16 ಕಡೆಗಳಲ್ಲಿ ಹಾಗೂ ರಾಜ್ಯದ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ದ.ಕ. ಕ್ಷೇತ್ರದಲ್ಲಿ 28 ವರ್ಷಗಳಿಂದ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ದಿಂದ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ದ.ಕ. ಜಿಲ್ಲೆ ಎಂದರೆ ಮಂಗಳೂರು ಮಾತ್ರ ಎಂದು ಪರಿಗಣಿಸಿರುವ ಇಲ್ಲಿನ ಸಂಸದರು, ಶಾಸಕರು ಗ್ರಾಮಾಂತರಕ್ಕೆ ಏನೂ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮೂಲ ಸೌಕರ್ಯ ಸಮರ್ಪಕ ವಾಗಿ ಒದಗಿಸಲು ಸಾಧ್ಯವಾಗಿಲ್ಲ ಎಂದರು.
ನಕಲಿ ಜಾತ್ಯತೀತವಾದ
ಕಾಂಗ್ರೆಸ್ ಪಕ್ಷದವರು ಹೇಳಿಕೊಳ್ಳಲು ಮಾತ್ರ ಜಾತ್ಯತೀತವಾದಿಗಳು. ಅವರ ನಕಲಿ ಜಾತ್ಯತೀತವಾದ ಜನತೆಗೆ ಅಗತ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಕೆಲಸ ಮಾಡುವ ಅಭ್ಯರ್ಥಿ ಜಿಲ್ಲೆಗೆ ಬೇಕು ಎನ್ನುವ ಕಾರಣಕ್ಕೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಇಲ್ಯಾಸ್ ಹೇಳಿದರು.
ತ್ರಿಕೋನ ಸ್ಪರ್ಧೆ
ಜಿಲ್ಲೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಯಿದೆ. ಎಸ್‌ಡಿಪಿಗೆ ಬಿಜೆಪಿ ಪಕ್ಷವು ಸೈದ್ಧಾಂತಿಕ ಪ್ರತಿಸ್ಪರ್ಧಿಯಾದರೆ ಕಾಂಗ್ರೆಸ್‌ನಲ್ಲಿ ನಕಲಿ ಜಾತ್ಯತೀತವಾದದ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿದ್ದಾರೆ. ಚುನಾ ವಣೆ ಬಂದಾಗ ಗೋಪೂಜೆ ಮಾಡುವುದು, ಅದನ್ನು ವೀಡಿಯೋ ಮಾಡುವ ನಕಲಿ ಜಾತ್ಯತೀತತೆಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಇಲ್ಯಾಸ್ ಹೇಳಿದರು.
ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾ ಕಾರ್ಯ ದರ್ಶಿ ಇಕ್ಬಾಲ್ ಬೆಳ್ಳಾರೆ, ಮುಖಂಡರಾದ ಅಬ್ದುಲ್ ಹಮೀದ್, ಸಿದ್ದೀಕ್ ಪತ್ರಿಕಾಗೋಷ್ಠಿಯಲ್ಲಿದ್ದರು.ನಗರ ಎ. 8: ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಯ ವಿಚಾರದೊಂದಿಗೆ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಈ ಬಾರಿ ಸ್ಪರ್ಧೆ ನಡೆಸುತ್ತಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದರು.
ಸೋಮವಾರ ಪುತ್ತೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 16 ಕಡೆಗಳಲ್ಲಿ ಹಾಗೂ ರಾಜ್ಯದ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ನಡೆಸುತ್ತಿದ್ದೇವೆ ಎಂದು ಹೇಳಿದರು. ದ.ಕ. ಕ್ಷೇತ್ರದಲ್ಲಿ 28 ವರ್ಷಗಳಿಂದ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ದಿಂದ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ದ.ಕ. ಜಿಲ್ಲೆ ಎಂದರೆ ಮಂಗಳೂರು ಮಾತ್ರ ಎಂದು ಪರಿಗಣಿಸಿರುವ ಇಲ್ಲಿನ ಸಂಸದರು, ಶಾಸಕರು ಗ್ರಾಮಾಂತರಕ್ಕೆ ಏನೂ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮೂಲ ಸೌಕರ್ಯ ಸಮರ್ಪಕ ವಾಗಿ ಒದಗಿಸಲು ಸಾಧ್ಯವಾಗಿಲ್ಲ ಎಂದರು.
ನಕಲಿ ಜಾತ್ಯತೀತವಾದ
ಕಾಂಗ್ರೆಸ್ ಪಕ್ಷದವರು ಹೇಳಿಕೊಳ್ಳಲು ಮಾತ್ರ ಜಾತ್ಯತೀತವಾದಿಗಳು. ಅವರ ನಕಲಿ ಜಾತ್ಯತೀತವಾದ ಜನತೆಗೆ ಅಗತ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಕೆಲಸ ಮಾಡುವ ಅಭ್ಯರ್ಥಿ ಜಿಲ್ಲೆಗೆ ಬೇಕು ಎನ್ನುವ ಕಾರಣಕ್ಕೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಇಲ್ಯಾಸ್ ಹೇಳಿದರು.
ತ್ರಿಕೋನ ಸ್ಪರ್ಧೆ
ಜಿಲ್ಲೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಯಿದೆ. ಎಸ್‌ಡಿಪಿಗೆ ಬಿಜೆಪಿ ಪಕ್ಷವು ಸೈದ್ಧಾಂತಿಕ ಪ್ರತಿಸ್ಪರ್ಧಿಯಾದರೆ ಕಾಂಗ್ರೆಸ್‌ನಲ್ಲಿ ನಕಲಿ ಜಾತ್ಯತೀತವಾದದ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿದ್ದಾರೆ. ಚುನಾ ವಣೆ ಬಂದಾಗ ಗೋಪೂಜೆ ಮಾಡು ವುದು, ಅದನ್ನು ವೀಡಿಯೋ ಮಾಡುವ ನಕಲಿ ಜಾತ್ಯತೀತತೆಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಇಲ್ಯಾಸ್ ಹೇಳಿದರು. ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾ ಕಾರ್ಯ ದರ್ಶಿ ಇಕ್ಬಾಲ್ ಬೆಳ್ಳಾರೆ, ಮುಖಂಡರಾದ ಅಬ್ದುಲ್ ಹಮೀದ್, ಸಿದ್ದೀಕ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.