B.C. Road ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್ 4 ಸಾವಿರ ರೂ. ಕಳೆದುಕೊಂಡ ಮಹಿಳೆ
Team Udayavani, Jan 11, 2024, 1:26 AM IST
ಬಂಟ್ವಾಳ: ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಪಿಕ್ಪಾಕೆಟ್ ಪ್ರಕರಣಗಳು ಮುಂದುವರಿದಿದ್ದು, ಬುಧವಾರ ಬೆಳಗ್ಗೆ ಮಹಿಳೆಯೋರ್ವಳ ಬ್ಯಾಗ್ನಿಂದ ಸುಮಾರು 4 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೋಳಿಯಾರು ನಿವಾಸಿ ಪ್ರೇಮ ಅವರು ಹಣ ಕಳೆದುಕೊಂಡವರು. ಅವರು ಊರಿನಿಂದ ಬಂದು ಬಿ.ಸಿ.ರೋಡಿನಲ್ಲಿ ಮಗುವಿನೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ ಹತ್ತುವ ವೇಳೆ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಒಂದೇ ದಿನ ಯುವತಿಯರಿಬ್ಬರ ಮೊಬೈಲ್ ಕದ್ದ ಘಟನೆ ನಡೆದಿತ್ತು. ಬಸ್ ನಿಲ್ದಾಣ ಪರಿಸರದಲ್ಲಿ ಸಿಸಿ ಕೆಮರಾ ಇಲ್ಲದೇ ಇರುವುದು ಘಟನೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.