ಚಾಲಕನ ಬದುಕು ಬದಲಿಸಿದ ಹಂದಿ ಸಾಕಣೆ
ಸ್ವಂತ ಉದ್ಯಮಕ್ಕೆ ನರೇಗಾ ಭದ್ರ ಬುನಾದಿ; ವರ್ಷಕ್ಕೆ 3 ಲಕ್ಷ ರೂ. ಆದಾಯ
Team Udayavani, Dec 8, 2021, 5:50 PM IST
ಬೆಳ್ತಂಗಡಿ: ಮಾಂಸಾಹಾರ ಖಾದ್ಯಗಳ ಬೇಡಿಕೆ ಏರಿಕೆಯಿಂದ ಸದ್ಯ ಮಾಂಸದ ಬೆಲೆ ಏರಿರುವುದಲ್ಲದೆ ಬೇಡಿಕೆಗೆ ತಕ್ಕ ಆಹಾರ ಪೂರೈಸುವುದು ಸವಾಲಾಗಿದೆ. ಅದರಲ್ಲೂ ಹಂದಿ ಮಾಂಸ ದಲ್ಲಂತೂ ಅಪರಿಮಿತವಾದ ಪ್ರೊಟೀನ್ ಇರುವುದರಿಂದ ಇತ್ತೀಚೆಗೆ ಹಂದಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಆದರೆ ಹಂದಿ ಸಾಕಣಿಕೆಗೆ ಒಲವು ತೋರುವವರ ಸಂಖ್ಯೆ ಇಳಿಕೆಯಾಗಿರುವ ನಡುವೆಯೇ ಪಿಲ್ಯ ಗ್ರಾಮದ ರವಿ ಬಂಗೇರ ಹಂದಿ ಸಾಕಾ ಣಿಕೆಯ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ.
ಟ್ರಾನ್ಸ್‌ಪೊàರ್ಟ್ ವೃತ್ತಿ ನಡೆಸುತ್ತಿದ್ದ ರವಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಂದಿ ಶೆಡ್ ನಿರ್ಮಿಸಿದ್ದಾರೆ.
ಇವರಿಗೆ ಪತ್ನಿ ಭಾರತಿ ಸಾಥ್ ನೀಡಿದ್ದರಿಂದ ಯಶಸ್ಸು ಕಂಡು ಸೊÌàದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.
ಉದ್ಯಮವೇ ಕೈ ಹಿಡಿಯಿತು
25 ವರ್ಷ ಚಾಲಕರಾಗಿ ಕಾರ್ಯ ನಿರ್ವಹಿಸಿ, ದೇಹ-ಮನಸ್ಸು ಎರಡು ದಣಿದಿತ್ತು. ಮುಂದೇನು ಎಂದು ಯೋಚಿ ಸುತ್ತಿರುವಾಗ ಆಲೋಚನೆಗೆ ಬಂದಿದ್ದು ಹಂದಿ ಸಾಕಾಣೆ. ನರೇಗಾ ಯೋಜನೆಯ ಸೊÌàದ್ಯೋಗ ಅನುದಾನವನ್ನೇ ಬಳಸಿ ಅಳದಂಗಡಿ ಗ್ರಾ.ಪಂ.ಗೆ ಅರ್ಜಿ ನೀಡಿ 22,235 ರೂ. ಕೂಲಿ ಮತ್ತು 8,408 ರೂ. ಸಾಮಗ್ರಿ ಮೊತ್ತ ಪಡೆದು ಸುಮಾರು 10ರಿಂದ 12 ಹಂದಿಗಳನ್ನು ಸಾಕುವಷ್ಟು ಪ್ರಮಾಣದ ಶೆಡ್ ನಿರ್ಮಾಣ ಮಾಡಿಕೊಂಡು ಕಾರ್ಯ ಪ್ರವೃತ್ತರಾದರು.
100 ಮರಿವರೆಗೆ ಸಾಕಣೆ
ಹಂದಿ ಸಾಕಣೆ ಉದ್ಯಮದತ್ತ ಒಲವು ತೋರಿದರೂ ಸಾಕಣಿಕೆಯ ಕುರಿತು ನಿಖರವಾದ ಮಾಹಿತಿ ರವಿಯಲ್ಲಿರಲಿಲ್ಲ. ಆರಂಭದಲ್ಲಿ ಖರೀದಿಸಿದ 12 ಮರಿಗಳಲ್ಲಿ 10 ಮರಿ ಸಾವನ್ನಪ್ಪಿದ್ದವು. ಆರಂಭದಲ್ಲೆ ದೊಡ್ಡ ಸವಾಲು ಎದುರಾಗಿತ್ತಾದರೂ ಸವಾಲನ್ನೆ ಮುಂದಡಿಯಾಗಿಸಿ, ಉಳಿದ 2 ಹಂದಿಗಳಿಂದಲೇ ಆರಂಭಿಸಿದ ಉದ್ಯಮ ಇಂದು 100 ಹಂದಿ ಮರಿ ಸಾಕಿ- ಸಲಹುವವರೆಗೆ ಮುಂದುವರಿದಿದೆ.
ಗ್ರಾಹಕರೇ ಬಂದು ಖರೀದಿ
ಮೂರು ವರ್ಷಗಳಿಂದ ಹಂದಿ ಸಾಕಣಿಕೆಯಲ್ಲಿ ತೊಡಗಿಸಿಕೊಂಡಿರುವ ರವಿ ಬಂಗೇರ ಅವರಲ್ಲಿ ಸದ್ಯ 100ರಷ್ಟು ಹಂದಿಗಳಿವೆ. ಈ ವರ್ಷ ಹಂದಿ ಮಾರಾಟ ಮಾಡಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಅಚ್ಚುಕಟ್ಟಾಗಿ ಸಾಕಣೆ ಮಾಡುತ್ತಿರುವುದರಿಂದ ಗ್ರಾಹಕರು ಸ್ವತಃ ಬಂದು ಖರೀದಿಗೆ ಮುಂದಾಗುತ್ತಿದ್ದಾರೆ.
ಆದಾಯವು ದ್ವಿಗುಣ
ಉದ್ಯೋಗ ಖಾತರಿ ಯೋಜನೆಯಡಿ ಹಂದಿ ಶೆಡ್ ನಿರ್ಮಿಸಲು ಅನುದಾನ ಸಿಗುತ್ತದೆ ಎಂದು ತಿಳಿದು 12 ಹಂದಿ ಮರಿ ಖರೀದಿಸಿ ಒಂದು ಸಣ್ಣ ಶೆಡ್ ರಚಿಸಿದೆ. ಅನೇಕ ಸವಾಲು ಎದುರಿಸಿ ಹಂದಿಗಳ ಸಂಖ್ಯೆ ಜತೆಗೆ ಆದಾಯವು ದ್ವಿಗುಣವಾಗಿದೆ.
-ರವಿ ಬಂಗೇರ, ಅಳದಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.