Railway Stations; ಪ್ಲಾಟ್‌ ಫಾರ್ಮ್ ಎತ್ತರಿಸುವ ಕಾಮಗಾರಿ ಆರಂಭ

ಐದು ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಅಭಿವೃದ್ಧಿ

Team Udayavani, Jan 15, 2024, 12:22 AM IST

Railway Stations; ಪ್ಲಾಟ್‌ ಫಾರ್ಮ್ ಎತ್ತರಿಸುವ ಕಾಮಗಾರಿ ಆರಂಭ

ಸುಳ್ಯ: ಬೆಂಗಳೂರು- ಮಂಗಳೂರು ನಡುವಿನ ರೈಲ್ವೇ ಮಾರ್ಗದಲ್ಲಿ ಮೀಟರ್‌ಗೆàಜ್‌ ಬದಲು ಬ್ರಾಡ್‌ಗೆàಜ್‌ಗೆ ಹಳಿ ಪರಿವರ್ತನೆಯಾದ ಬಳಿಕ ಗ್ರಾಮೀಣ ಭಾಗದ ಕೆಲವು ರೈಲ್ವೇ ನಿಲ್ದಾಣಗಳಲ್ಲಿ ಪ್ಲಾರ್ಟ್‌ಫಾರ್ಮ್ ಹಳಿಗೆ ಸಮನಾಂತರವಾಗಿ ರೈಲು ಏರಲು ಹಾಗೂ ಹತ್ತಲು ಉಂಟಾಗಿದ್ದ ಸಮಸ್ಯೆಗೆ ಶೀಘ್ರ ಮುಕ್ತಿ ಸಿಗಲಿದೆ.

ದ.ಕ. ಜಿಲ್ಲೆಯ ಕೆಲವು ಗ್ರಾಮೀಣ ಭಾಗದ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಎತ್ತರಿಸುವ ಕಾಮಗಾರಿ ಆರಂಭಗೊಂಡಿದ್ದು ಶೀಘ್ರ ಅಂತಿಮಗೊಂಡು ಪ್ರಯಾಣಿಕರಿಗೆ ವರದಾನವಾಗಲಿದೆ.

ಐದು ನಿಲ್ದಾಣಗಳಲ್ಲಿ ಅಭಿವೃದ್ಧಿ
ಜಿಲ್ಲೆಯ ಐದು ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್ ಎತ್ತರಿಸಲಾಗುತ್ತದೆ. ಕಡಬ ತಾಲೂಕಿನ ಕಡಬ ಸಮೀಪದ ಕೋಡಿಂಬಾಳ, ಬಜಕೆರೆ, ಎಡಮಂಗಲ, ಕಾಣಿಯೂರು, ನರಿಮೊಗರು ರೈಲು ನಿಲ್ದಾಣಗಳ ಪ್ಲಾಟ್‌ ಫಾರ್ಮ್ ಅನ್ನು ಎತ್ತರಿಸುವ ಕಾಮಗಾರಿ ಆರಂಭಗೊಂಡಿದೆ. ಸುಮಾರು 250 ಮೀಟರ್‌ ಉದ್ದ ಹಾಗೂ ನಿಯಮಿತ ಎತ್ತರಕ್ಕೆ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಕೆಲಸ ನಡೆಯಲಿದೆ. ಜತೆಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆನ್ನೂ ಕಲ್ಪಿಸಲಾಗುತ್ತದೆ. ಜತೆಗೆ ಅಗತ್ಯ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಒಟ್ಟು 4.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೂನ್‌ ತಿಂಗಳ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಮಸ್ಯೆಯಾಗಿತ್ತು
ಮೀಟರ್‌ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ರೈಲ್ವೇ ಹಳಿ ಪರಿವರ್ತನೆ ಯಾದ ಬಳಿಕ ಹಳಿ ಎತ್ತರವಾಗಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗೆ ಸಮವಾಗಿತ್ತು. ಆದರೆ ರೈಲ್ವೇ ಇಲಾಖೆ ಪ್ಲಾಟ್‌ಫಾರ್ಮ್ ಏರಿಸುವ ಕೆಲಸ ನಡೆಸದೇ ಪ್ರಯಾಣಿಕರು ರೈಲು ಹತ್ತಲು ಹಾಗೂ ಇಳಿಯಲು ಸಮಸ್ಯೆಯಾಗಿತಲ್ಲದೇ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಈ ಸಮಸ್ಯೆ ಬಗೆಹರಿಸುವಂತೆ ಹಲವು ವರ್ಷಗಳಿಂದ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಸ್ಥಳೀಯರಿಗೆ ಪ್ರಯೋಜನವಾಗಲಿ
ಮಂಗಳೂರು-ಬೆಂಗಳೂರು ನಡುವೆ ನಿತ್ಯ ಹಲವಾರು ರೈಲುಗಳು ಓಡಾಟ ನಡೆಸುತ್ತಿದ್ದರೂ ಸ್ಥಳೀಯರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನಿಲುಗಡೆ ನೀಡಲಾಗುತ್ತಿಲ್ಲ. ಮಂಗಳೂರು -ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಲೋಕಲ್‌ ರೈಲು ಸಂಚರಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ರೈಲು ನಿಲ್ದಾಣ ಅಭಿವೃದ್ಧಿಯ ಜತೆಗೆ ಜನತೆಯ ಬೇಡಿಕೆಗಳಿಗೂ ಸ್ಪಂದನೆ ಸಿಕ್ಕಿದಲ್ಲಿ ರೈಲು ಸೇವೆ ಸ್ಥಳೀಯರಿಗೂ ಪ್ರಯೋಜನ ವಾಗಲಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ.

ಟಾಪ್ ನ್ಯೂಸ್

01

BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

kollur12

Holiday Trip: ಹಬ್ಬ, ವಾರಾಂತ್ಯ ರಜೆ: ಪ್ರವಾಸಿ ತಾಣಗಳಲ್ಲಿ ದಟ್ಟಣೆ

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

CM-siddu

Tax Injustice: 5 ವರ್ಷದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ಅನ್ಯಾಯ: ಸಿಎಂ

Rahul

Congress Government: ಒಳ ಮೀಸಲಿಗಾಗಿ ಎಡಗೈ ಬಣ ರಾಹುಲ್‌ ಗಾಂಧಿಗೆ ಮೊರೆ

1-kkkk

Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್‌ರಾಜ್‌ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Job scam Case: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Job scam Case: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Nidle: ಕಾಡುಕೋಣ ಹತ್ಯೆ; ಶಂಕಿತ ಆರೋಪಿಗಳು ಪರಾರಿ

Nidle: ಕಾಡುಕೋಣ ಹತ್ಯೆ; ಶಂಕಿತ ಆರೋಪಿಗಳು ಪರಾರಿ

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Belthangady: ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

Belthangady: ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

01

BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

kollur12

Holiday Trip: ಹಬ್ಬ, ವಾರಾಂತ್ಯ ರಜೆ: ಪ್ರವಾಸಿ ತಾಣಗಳಲ್ಲಿ ದಟ್ಟಣೆ

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

CM-siddu

Tax Injustice: 5 ವರ್ಷದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ಅನ್ಯಾಯ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.