ಆಧಾರ್‌ ಕಾರ್ಡ್‌ ನೋಂದಣಿಗೆ ಸ್ಪಂದಿಸಿದ ಅಂಚೆ ಇಲಾಖೆ

ವಿಟ್ಲ ಅಂಚೆ ಕಚೇರಿಯಲ್ಲಿ ಆರಂಭ; ಶಾಲೆ, ಗ್ರಾ.ಪಂ.ಗಳಲ್ಲೂ ನೋಂದಣಿಗೆ ಚಾಲನೆ

Team Udayavani, Dec 10, 2019, 10:45 PM IST

sw-34

ವಿಟ್ಲ: ಆಧಾರ್‌ ಕಾರ್ಡ್‌ ನೋಂದಣಿಗೆ ವಿಟ್ಲ ಪರಿಸರದಲ್ಲಿ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ “ಉದಯವಾಣಿ’ ಸುದಿನದಲ್ಲಿ ಸತತವಾಗಿ ಪ್ರಕಟವಾದ ವರದಿಗೆ ಅಂಚೆ ಇಲಾಖೆಯ ಪುತ್ತೂರು ವಿಭಾಗ ಸ್ಪಂದಿಸಿದೆ. ವಿಟ್ಲದ ಅಂಚೆ ಕಚೇರಿಯಲ್ಲಿ ನೋಂದಣಿ ಕಾರ್ಯ ನಡೆಯುತ್ತಿದ್ದಂತೆ, ಇನ್ನೊಂದು ತಂಡವು ಶಾಲೆ, ಪಂಚಾಯತ್‌ ಕಚೇರಿಗೆ ತೆರಳಿ, ಸಂಘ ಸಂಸ್ಥೆಗಳ ಸಹಕಾರಗಳೊಂದಿಗೆ ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಹಾಸಿಗೆ ಹಿಡಿದ ವ್ಯಕ್ತಿಯ ನೋಂದಣಿ
ವಿಟ್ಲ ಪೇಟೆಯಲ್ಲಿ ಓರ್ವ ವ್ಯಕ್ತಿ ಹಾಸಿಗೆ ಹಿಡಿದಿದ್ದು, ಆಧಾರ್‌ ತಿದ್ದುಪಡಿ ಆಗಬೇಕಿತ್ತು. ಅಂಚೆ ಇಲಾಖೆಯ ತಂಡ ಅವರ ಮನೆಗೆ ತೆರಳಿ ಈ ಕಾರ್ಯ ಪೂರೈಸಿದೆ. ಅಂಗವಿಕಲ ವ್ಯಕ್ತಿಯೋರ್ವರ ನೋಂದಣಿಯನ್ನೂ ಮಾಡಿಸಿದೆ. ಓರ್ವ ಮಹಿಳೆಗೆ 7 ಬಾರಿ ಓಡಾಡಿಯೂ ಆಧಾರ್‌ ಕಾರ್ಡ್‌ ಸಿಗಲಿಲ್ಲ ಎಂಬ ಬಗ್ಗೆ ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಆ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿ ಅವರ ಸಮಸ್ಯೆಯೂ ಪರಿಹಾರವಾಗಲಿದೆ.

ಬಂಟ್ವಾಳ ತಾಲೂಕು ಧ್ವನಿ ಮತ್ತು ಬೆಳಕು ಸಂಯೋಜಕರ ಒಕ್ಕೂಟ ಹಾಗೂ ಅಂಚೆ ಇಲಾಖೆಯ ಪುತ್ತೂರು ವಿಭಾಗ ವತಿಯಿಂದ ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಆಧಾರ್‌ ಶಿಬಿರ ನಡೆಯಿತು. ಇದರಲ್ಲಿ 400 ವಿದ್ಯಾರ್ಥಿಗಳು ನೋಂದಾಯಿಸಿಕೊಂಡರು. ವಿಟ್ಲ ನಗರ ಬಿಜೆಪಿ ಮತ್ತು ಅಂಚೆ ಇಲಾಖೆಯ ಸಹಯೋಗದೊಂದಿಗೆ 4 ದಿನಗಳ ಕಾಲ ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಹಾಗೂ ಹೊಸ ಆಧಾರ್‌ ಕಾರ್ಡ್‌ ನೋಂದಣಿ ಪ್ರಕ್ರಿಯೆ ನಡೆಸಲಾಗಿದ್ದು, ಒಟ್ಟು 782 ಫಲಾನುಭಾವಿಗಳು ಮತ್ತು ಕೇಪು ಗ್ರಾ.ಪಂ.ನಲ್ಲಿ 200ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು. ತೋರಣಕಟ್ಟೆಯಲ್ಲಿ, ಪುಣಚದಲ್ಲಿ ಇದೇ ರೀತಿ ನೂರಾರು ಮಂದಿ ಪ್ರಯೋಜನ ಪಡೆದಿದ್ದಾರೆ.

ಅಲ್ಲಲ್ಲಿ ಶಿಬಿರ
ಡಿ. 11ರಂದು ವಿಟ್ಲ ಸಮೀಪದ ಕಂಬಳಬೆಟ್ಟು ಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶಿಬಿರ ಆಯೋಜಿಸಲಾಗಿದೆ. ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿ ಡಿ. 12 ಮತ್ತು 13ರಂದು ಟಾಪ್‌ ಆಂಡ್‌ ಟಾಪ್‌ ಚಾರಿಟೆಬಲ್‌ ಟ್ರಸ್ಟಿನ ಸಹಕಾರದೊಂದಿಗೆ, ಡಿ. 13, 14ರಂದು ಬೆಳ್ತಂಗಡಿ ಇಂಡಿಯನ್‌ ಸೀನಿಯರ್‌ ಚೇಂಬರ್‌, ಡಿ. 19-20ರಂದು ಇರಾ ಗ್ರಾ.ಪಂ., ಡಿ. 17- 18ರಂದು ಇರ್ವತ್ತೂರು ಶಾರ ದೋತ್ಸವ ಸಮಿತಿಯೊಂದಿಗೆ ಹಾಗೂ ಡಿ. 23-24ರಂದು ಕೆದಂಬಾಡಿ ಗ್ರಾ.ಪಂ., ಡಿ. 26-27ರಂದು ಕಾಣಿಯೂರು ಸಹಿತ ಹಲವೆಡೆ ಮತ್ತಷ್ಟು ಶಿಬಿರಗಳನ್ನು ಅಂಚೆ ಇಲಾಖೆ ಆಯೋಜಿಸಿದೆ. ಮತ್ತಷ್ಟು ಸಂಸ್ಥೆಗಳು ಶಿಬಿರ ಬಯಸಿದ್ದು, ಜನವರಿ ತಿಂಗಳಲ್ಲಿ ನಿಗದಿಪಡಿಸಬೇಕಾಗಿದೆ.

ವಿಟ್ಲ ನಾಡಕಚೇರಿಯಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ನಾಗರಿಕರು ಭಾರೀ ಶ್ರಮ ಪಡಬೇಕಾಗಿಲ್ಲ. ಆದರೂ ಸರದಿ ಸಾಲಲ್ಲಿ ನಿಲ್ಲಬೇಕು. ಪ್ರತಿದಿನಕ್ಕೆ 30ರಿಂದ 40ರಂತೆ ಜನವರಿ ತಿಂಗಳ ಕೊನೆಯ ತನಕ ಟೋಕನ್‌ ನೀಡಲಾಗಿದೆ.

ಗ್ರಾ.ಪಂ.ನಲ್ಲಿ ಬೇಕು
ಈ ಹಿಂದೆ ಎಲ್ಲ ಗ್ರಾ.ಪಂ.ಗಳಲ್ಲೂ ಆಧಾರ್‌ ಕಾರ್ಡ್‌ ನೋಂದಣಿ ಮಾಡುವ ವ್ಯವಸ್ಥೆಯಿತ್ತು. ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಅದಕ್ಕೆ ಕಾರಣವೇನೆಂದು ಗೊತ್ತಿಲ್ಲ. ವಿಟ್ಲ ಪಟ್ಟಣ ಪಂಚಾಯತ್‌ ಮತ್ತು ಎಲ್ಲ ಗ್ರಾ.ಪಂ. ಅಧ್ಯಕ್ಷರು ಆಧಾರ್‌ ನೋಂದಣಿ ಕಾರ್ಡ್‌ ನೋಂದಣಿ ವ್ಯವಸ್ಥೆಯನ್ನು ಮುಂದುವರಿಸಬೇಕೆಂದು ಆಗ್ರಹಿಸುತ್ತಾರೆ.

ಎರಡು ತಂಡಗಳಿಂದ ನೋಂದಣಿ ಕಾರ್ಯ
ನಾವು ಆಧಾರ್‌ ಕಾರ್ಡ್‌ ನೋಂದಣಿ ಶಿಬಿರವನ್ನು ಪಾಣೆಮಂಗಳೂರು, ಬಂಟ್ವಾಳ ಮೊದಲಾದೆಡೆ ಆರಂಭಿಸಿದ್ದೆವು. ಆದರೆ ವಿಟ್ಲದಲ್ಲಿ ನಾಗರಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ, ಹೆಚ್ಚು ಶಿಬಿರಗಳನ್ನು ಆಯೋಜಿಸಲಾರಂಭಿಸಿದೆವು. ಅದಕ್ಕೆ ಆಯಾಯ ಊರಿನವರ ಸ್ಪಂದನವೂ ಸಿಕ್ಕಿದೆ. ಅಂಚೆ ಇಲಾಖೆಯಿಂದ ನಾಗರಿಕರಿಗೆ ಎಲ್ಲ ರೀತಿಯ ಸೇವೆಯನ್ನೂ ಒದಗಿಸುತ್ತೇವೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ. ಈ ತಿಂಗಳು ವಿಟ್ಲದ ಸುತ್ತಮುತ್ತ ಮತ್ತು ಪುತ್ತೂರು, ಬೆಳ್ತಂಗಡಿಗಳಲ್ಲಿ ಅನೇಕ ಶಿಬಿರಗಳು ನಿಗದಿಯಾಗಿವೆ. ಪುತ್ತೂರು ಅಂಚೆ ಇಲಾಖೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಾರ್ಕಳ ತಾಲೂಕುಗಳನ್ನು ಒಳಗೊಂಡಿದೆ. ಇಲ್ಲೆಲ್ಲ ಇಲಾಖೆಯ ಎರಡು ತಂಡಗಳು ಆಧಾರ್‌ ನೋಂದಣಿ ಕಾರ್ಯವನ್ನೇ ಮಾಡುತ್ತಿವೆ.
– ಜೋಸೆಫ್‌ ರಾಡ್ರಿಗಸ್‌, ಸಹಾಯಕ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ

 ದಿನಕ್ಕೆ 30ರಿಂದ 40 ಟೋಕನ್‌
ದಿನಕ್ಕೆ 30ರಿಂದ 40ರಂತೆ ಜನವರಿ ತಿಂಗಳ ಕೊನೆಯ ತನಕ ಟೋಕನ್‌ ನೀಡಿರುವುದರಿಂದ ಅವರಿಗೆ ಸಮರ್ಪಕವಾಗಿ ನೋಂದಾಯಿಸಲು ಸಾಧ್ಯವಾಗುತ್ತಿದೆ. ವಿದ್ಯುತ್‌ ಕಡಿತ, ಸರ್ವರ್‌ ಸಮಸ್ಯೆ ಇದ್ದಾಗ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ.
– ರವಿಶಂಕರ್‌, ಡೆಪ್ಯುಟಿ ತಹಶೀಲ್ದಾರ್‌, ವಿಟ್ಲ ನಾಡಕಚೇರಿ

ಟಾಪ್ ನ್ಯೂಸ್

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

puttige

Udupi;ಗೀತಾರ್ಥ ಚಿಂತನೆ 147:ಪ್ರತ್ಯಕ್ಷ ಪ್ರಮಾಣ ಮಾತ್ರದಿಂದಲೇ ಜಗದ್ವ್ಯವಹಾರ ಅಸಾಧ್ಯ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.