Vitla ಸಂಪರ್ಕದ ರಾಜ್ಯ, ಅಂತಾರಾಜ್ಯ ರಸ್ತೆಗಳಲ್ಲೆಲ್ಲ ಹೊಂಡ

ಹೆಸರಿಗಷ್ಟೇ ದೊಡ್ಡ ಹೆಸರಿನ ರಸ್ತೆ; ಚರಂಡಿ ಸರಿ ಇಲ್ಲದೆ ಮಳೆ ನೀರು ನುಗ್ಗಿ ರಸ್ತೆಯಲ್ಲಿ ಕೆಸರು ಮಣ್ಣು

Team Udayavani, Oct 22, 2024, 2:41 PM IST

2(2)

ಕಲ್ಲಡ್ಕ-ಕಾಂಞಂಗಾಡ್‌ ರಾಜ್ಯ ಹೆದ್ದಾರಿಯ ಅಪ್ಪೇರಿಪಾದೆ ಬಳಿ ರಸ್ತೆಯ ಹೊಂಡಗಳು(1), ಕಲ್ಲಡ್ಕ-ಕಾಂಞಂಗಾಡ್‌ ರಾಜ್ಯ ಹೆದ್ದಾರಿಯ ಕಾಶಿಮಠ ಬಳಿ ನೂತನ ರಸ್ತೆಯಲ್ಲಿ ಹೊಂಡಗಳು(2), ಕಡಂಬು ಬಳಿ ರಸ್ತೆಯಲ್ಲಿ ಹೊಂಡಗಳು(3).

ವಿಟ್ಲ: ವಿಟ್ಲ ಮೂಲಕ ಅಂತಾರಾಜ್ಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗುತ್ತವೆ. ಅಂತಾರಾಜ್ಯ ಹೆದ್ದಾರಿ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ, ರಾಜ್ಯ ಹೆದ್ದಾರಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುತ್ತದೆ. ಈ ಹೆದ್ದಾರಿಗಳ ಸ್ಥಿತಿ ಹದಗೆಟ್ಟಿದೆ. ಹೆದ್ದಾರಿಯಲ್ಲಿ ಹೊಂಡಗಳಿಂದಾಗಿ ವಾಹನ ಸವಾರರು, ಮಾಲಕರು, ಚಾಲಕರು ಕಂಗಾಲಾಗಿದ್ದಾರೆ.

ಒಕ್ಕೆತ್ತೂರಿನಿಂದ ಕಾಶಿಮಠ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 5 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಗೊಳ್ಳಲಾಗಿತ್ತು. ಆದರೆ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಕರ್ಣಾಟಕ ಬ್ಯಾಂಕಿನ ವಿಟ್ಲ ಶಾಖೆಯ ಮುಂಭಾಗದಲ್ಲಿ ಸುಮಾರು 150 ಮೀಟರ್‌ ಉದ್ದದ ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿಯೂ ಇಲ್ಲ. ಇಲ್ಲಿ ನಿತ್ಯವೂ ಸಂಚಾರ ಕಷ್ಟವಾಗಿದೆ. ಹೊಂಡ ಗುಂಡಿಗಳ ಪರಿಣಾಮ ವಾಹನಗಳ ಸಾಲೂ ಆಗಾಗ ಬೆಳೆಯುತ್ತದೆ. ಮಳೆ ಜೋರಾದಾಗ ಕೃತಕ ಪ್ರವಾಹವೂ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಹೆದ್ದಾರಿ ಅಭಿವೃದ್ಧಿಯಾಗಿ ಕೇವಲ ನಾಲ್ಕು ತಿಂಗಳಲ್ಲೇ ಕಾಶಿಮಠ ಪ್ರದೇಶದಲ್ಲಿ ಹೊಂಡ ಬಿದ್ದಿದೆ. ಕೆಲವು ಕಡೆ ರಸ್ತೆ ಬಿರಿಯುತ್ತಿದೆ.

ಕಲ್ಲಡ್ಕ-ಕಾಂಞಂಗಾಡ್‌ ರಾಜ್ಯ ಹೆದ್ದಾರಿಯ ವಿಟ್ಲ ಪೇಟೆಯ ಬಳಿ ರಸ್ತೆಯ ಹೊಂಡಗಳು

ಕಾಶಿಮಠದಿಂದ ಉಕ್ಕುಡ ವರೆಗೆ ರಸ್ತೆ ತೀರಾ ಹದಗೆಟ್ಟಿದೆ. ವಿಟ್ಲ ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ಕೂಡಾ ಡಾಮರು ರಸ್ತೆ ಮಾಯವಾಗಿ ಮಣ್ಣಿನ ರಸ್ತೆಯಂತೆ, ಕೆಸರುಗುಂಡಿಯಂತಾಗಿದೆ.
ವಿಟ್ಲ ಕಬಕ ರಸ್ತೆ ಅಭಿವೃದ್ಧಿಯಾಗಿದ್ದರೂ ಕಬಕದಿಂದ ವಿಟ್ಲ ಆಗಮಿಸುವ ರಸ್ತೆಯಲ್ಲಿ ಹೊಂಡಗಳು ದೊಡ್ಡದಾಗುತ್ತಿದ್ದು ಅಯೋಮಯ ಸ್ಥಿತಿ ಉಂಟಾಗಿದೆ. ಈ ರಸ್ತೆಗಳು ರಾಜ್ಯ, ಅಂತಾರಾಜ್ಯ ಹೆದ್ದಾರಿಯೆಂದು ಕರೆಯಲಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿಲ್ಲ.

-ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: ಡಿಸಿ

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: DC

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

Video: ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ…

Video: ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ…

Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!

Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1)

Bantwala: ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ

6

Vitla: ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

mng-Rain

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

2

Puttur: ಐನ್ನೂರು ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲೀಗ ನಲ್ವತ್ತೇ ವಿದ್ಯಾರ್ಥಿಗಳು

1(1)

Bantwal: ಹೇಗಿದ್ದ ಕಲ್ಲಡ್ಕ ಈಗ ಹೇಗಾಗಿ ಹೋಗಿದೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

7(1)

Gangolli ಬಂದರಿಗೆ ಮರೀಚಿಕೆಯಾದ ಅಭಿವೃದ್ಧಿ

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.