ಹಲವರ ಜೀವ ಉಳಿಸಿದ ಆಪತ್ಭಾಂಧವ !
Team Udayavani, Jul 28, 2022, 5:55 AM IST
ಪುತ್ತೂರು: ಹಲವರ ಜೀವ ಉಳಿಸಿದ ಆಪತ್ಭಾಂಧವ ಈ ಪ್ರವೀಣ.ಪಾರ್ಥಿವ ಶರೀರದ ಯಾತ್ರೆ ಸಾಗುವಲ್ಲೆಲ್ಲ ಕೇಳಿಬಂದ ಒಂದು ಸಾಮಾನ್ಯ ಮಾತೆಂದರೆ “ಈ ಪ್ರವೀಣ ಹಲವರ ಜೀವವನ್ನು ಉಳಿಸಿದ್ದ ಆಪತ್ಭಾಂಧವ ‘ ಎಂಬುದು.
ಪ್ರವೀಣ ಅವರ ಇತಿಹಾಸವನ್ನು ನೋಡಿದರೆ ಅಪರಾಧ ಪ್ರಕರಣದ ಯಾವುದೇ ಚಹರೆ ಇರಲಿಲ್ಲ. ತಮ್ಮ ಸಮುದಾಯದ ಸಂಘಟನೆ, ಊರಿನ ಸಂಘಟನೆಗಳು ಹಾಗೂ ಬಿಜೆಪಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ಪ್ರವೀಣ್ ಎಲ್ಲರಿಗೂ ಇಷ್ಟ ವಾಗಿದ್ದುದು ಅವರ ಪರೋಪಕಾರದ ಗುಣ ದಿಂದಲೇ.
ಒಂದು ಮಿಸ್ಡ್ ಕಾಲ್‌ಕೊಟ್ಟರೆ ಸಾಕು. ಎಷ್ಟೇ ಹೊತ್ತಿರಲಿ, ಎಲ್ಲಿಂದಲೇ ಇರಲಿ. ವಾಪಸು ಕರೆ ಮಾಡಿ ಏನು ಸಮಾಚಾರ ಎಂದು ವಿಚಾರಿಸುತ್ತಿದ್ದರು. ಅಗತ್ಯವಿದ್ದರೆ ಹೋಗಿ ಸಹಾಯ ಮಾಡುತ್ತಿದ್ದರು. ಎಂಥದ್ದೇ ಕಷ್ಟವಿರಲಿ. ಅಲ್ಲಿಗೆ ಹಾಜರಾಗಿ ಸಹಾಯ ಹಸ್ತ ಚಾಚುತ್ತಿದ್ದರು. ಹಾಗೆಂದು ಸಿಕ್ಕಾಪಟ್ಟೆ ಶ್ರೀಮಂತರೇನೂ ಆಗಿರಲಿಲ್ಲ. ಆದರೆ ಹೃದಯ ಶ್ರೀಮಂತಿಕೆಯಿಂದ ಕೂಡಿತ್ತು.
ಹತ್ತಾರು ಬಾರಿ ರಕ್ತದಾನ ಮಾಡಿ ಹಲವರ ಜೀವ ಉಳಿಸಿದ್ದರು. ರಕ್ತದಾನ, ಕಷ್ಟದಲ್ಲಿ ರುವವರಿಗೆ ಸಹಾಯ ಮಾಡುವುದರಲ್ಲಿ ಹಿಂಜ ರಿದವರಲ್ಲ ಪ್ರವೀಣ್. ಹಾಗಾಗಿ ಈ ಸಾವು ಬರೀ ಪ್ರವೀಣ್ ಮನೆಗಷ್ಟೇ ಆಲ್ಲ, ನೆಟ್ಟಾರು ಪರಿಸರದ ಪ್ರತಿ ಮನೆಯಲ್ಲಿಯೂ ಪ್ರವೀಣ್ ಸಾವಿನ ಸೂತಕದ ಛಾಯೆ ಎದ್ದು ಕಾಣುತ್ತಿತ್ತು.
ಜೀವನೋತ್ಸಾಹಸದ ಚಿಲುಮೆ
ನೆಟ್ಟಾರಿನಲ್ಲಿ ಯುವಕ ಮಂಡಲದ ಕಾರ್ಯ ಕ್ರಮಗಳಲ್ಲಿ ಸದಾ ಸಕ್ರಿಯವಾಗಿದ್ದವರು ಪ್ರವೀಣ್. ಜೀವನೋತ್ಸಾಹ ಸದಾ ಪುಟಿ ಯುತ್ತಿತ್ತು. ಸರಕಾರಿ ಸವಲತ್ತುಗಳನ್ನು ಎಲ್ಲ ಜನರಿಗೂ ತಲುಪಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರು. ಶಿಬಿರಗಳನ್ನು ಆಯೋ ಜಿಸುವುದು, ಮಾಹಿತಿ ಕಾರ್ಯಕ್ರಮ ನೀಡುವುದು ಹೀಗೆ-ಹತ್ತಾರು ಚಟುವಟಿಕೆಗಳ ಮೂಲಕ ಜನರಿಗೆ ಆಪ್ತರಾಗಿದ್ದರು. ಪುತ್ತೂರಿನ ವಿಜಯ ಸಾಮ್ರಾಟ್ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು.
ಬಿಲ್ಲವ ಸಮುದಾಯದ ಸಂಘಟನೆಯ ನೇತೃತ್ವದಲ್ಲಿ ತನ್ನೂರಿನಲ್ಲಿ ಕೆಸರು ಗದ್ದೆಯಂತಹ ತುಳುನಾಡಿನ ಕ್ರೀಡಾಕೂಟ ಆಯೋಜಿಸಿದ್ದರು. ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಜನಾನುರಾಗಿಯಾಗಿದ್ದ ಪ್ರವೀಣರು ಯಾರೊಂ ದಿಗೂ ದ್ವೇಷ ಕಟ್ಟಿಕೊಂಡವರೂ ಇಲ್ಲ.
ಪರೋಪಕಾರಿಗೆ ಇಂಥ ಸಾವೇ?
ನೆಟ್ಟಾರು, ಬೆಳ್ಳಾರೆ ಪರಿಸರದ ಬಹುತೇಕರಿಗೆ ಪ್ರವೀಣ ಪರಿಚಿತರೇ. ಸದಾ ಪರೋಪಕಾರ ಮಾಡುತ್ತಾ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದ ಮನುಷ್ಯನಿಗೆ ಇಂಥ ದಾರುಣ ಸಾವೇ ಎಂಬ ಪ್ರಶ್ನೆ ಎಲ್ಲರದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.