ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ
ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಮಠಂದೂರು ಸೂಚನೆ
Team Udayavani, Jul 28, 2019, 5:00 AM IST
ಪುತ್ತೂರು: ಡೆಂಗ್ಯೂ, ಮಲೇ ರಿಯಾ ಸಹಿತ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ತತ್‌ಕ್ಷಣ ರೋಗಗಳ ತಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಅಗತ್ಯವಾಗಿ ಬೇಕಾದ ಉಪಕರಣಗಳ ಕುರಿತು ಗಮನಕ್ಕೆ ತರಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ವೈದ್ಯರಿಗೆ ಮತ್ತು ತಾಲೂಕು ಆರೋಗ್ಯಾಧಿಕಾರಿಯವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲೇ ಹೆಚ್ಚಿನ ಸಾಂಕ್ರಾ ಮಿಕ ರೋಗಗಳು ಪತ್ತೆಯಾಗಿವೆ. ನಿರ್ಮಾಣ ಹಂತದ ಕಟ್ಟಡಗಳು ಎಲ್ಲೆಲ್ಲಿ ಇವೆ ಎಂದು ಪಟ್ಟಿ ಮಾಡಿ. ನಗರಸಭೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಟ್ಟಡದಲ್ಲಿ ನೀರು ತುಂಬಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ವಾಸ್ತವ್ಯದ ಕಟ್ಟಡದ ಮೇಲೂ ನೀರು ನಿಲ್ಲದಂತೆ ಜಾಗೃತಿ ಮೂಡಿಸಿ ಎಂದರು.
ಸ್ಕಾ ್ಯನಿಂಗ್ ಮೆಷಿನ್‌ಗೆ ಪ್ರಸ್ತಾವನೆ
ಆಸ್ಪತ್ರೆಯಲ್ಲಿ ಸ್ಕಾ ್ಯನಿಂಗ್ ಮೆಷಿನ್ ಕೊರತೆ ಕುರಿತು ಶಾಸಕರು ವೈದ್ಯರನ್ನು ಪ್ರಶ್ನಿಸಿದರು. ಉತ್ತರಿಸಿದ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ ಅವರು, ಸ್ಕಾ ್ಯನಿಂಗ್ ಮೆಷಿನ್‌ಗೆ ರೇಡಿಯೋಲಜಿಸ್ಟ್ ಬೇಕು ಎಂದರು. ಹೊರಗುತ್ತಿಗೆ ಆಧಾರ ದಲ್ಲಿ ಆರೋಗ್ಯ ರಕ್ಷಾ ಸಮಿತಿಯಿಂದ ರೇಡಿಯೋಲಜಿಸ್ಟ್ ಅವರ ನೇಮಕಾತಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಸಲಹೆ ನೀಡಿದ ಶಾಸಕರು ಹೊಸ ಸ್ಕಾ ್ಯನಿಂಗ್ ಮೆಷಿನ್‌ಗೂ ಪ್ರಸ್ತಾವನೆ ಕಳುಹಿಸಿ ಎಂದರು. ಆಸ್ಪತ್ರೆಯಲ್ಲಿ ಕೆಲವೊಂದು ಸೌಲಭ್ಯ ಗಳಿಗೆ ಕೊರತೆ ಕಂಡುಬಂದಾಗ ಗಮನಕ್ಕೆ ತನ್ನಿ. ಅಧಿಕಾರಿಗಳ ಹಂತದಲ್ಲಿ ನಿಮಗೆ ಮೇಲಧಿಕಾರಿಗಳಲ್ಲಿ ಪ್ರಶ್ನಿಸಲು ಕಷ್ಟ ಆಗ ಬಹುದು. ಅದನ್ನು ನಾನು ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ತಾತ್ಕಾಲಿಕ ಕಟ್ಟಡ
ಮರಣೋತ್ತರ ಪರೀ ಕ್ಷೆಯ ಬಳಿಕ ಮೃತರ ಸಂಬಂಧಿಕರು ಮತ್ತು ಪೊಲೀ ಸರಿಗೆ ಕರ್ತವ್ಯಕ್ಕೆ ನಿಲ್ಲಲು ಒಂದು ಶೆಡ್‌ನ ಆವಶ್ಯಕತೆ ಇದೆ ಎಂದು ಆಸ್ಪತ್ರೆಯ ವೈದ್ಯರು ಪ್ರಸ್ತಾವಿಸಿದರು. ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಸೂಚಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಮರಣೋತ್ತರ ಪರೀಕ್ಷೆಯ ಕಟ್ಟಡ ನಿರ್ಮಾಣ ಮಾಡಬೇಕೆಂದು ಚಿಂತನೆ ನಡೆಸಿದ್ದೇನೆ ಎಂದರು.
ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ವಿದ್ಯಾ ಆರ್. ಗೌರಿ, ಕೃಷ್ಣ ನಾಯ್ಕ, ರಫೀಕ್ ದರ್ಬೆ, ರಾಜೇಶ್ ಬನ್ನೂರು, ವೈದ್ಯರಾದ ಡಾ| ಅಜೇಯ್, ಡಾ| ಜಗದೀಶ್, ಡಾ| ಸಂದೀಪ್, ಡಾ| ವಿಜಯ ಹಾಗೂ ಸಿಬಂದಿ ಉಪಸ್ಥಿತರಿದ್ದರು.
ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿ ಎಲಿಸಾ ಟೆಸ್ಟ್‌ಗಳನ್ನು ಮಾಡಬೇಕು. ಅದಕ್ಕೆ 10ರಿಂದ 15 ದಿನಗಳು ಬೇಕು. ಕಾರ್ಡ್ ಟೆಸ್ಟ್‌ನಿಂದ ಡೆಂಗ್ಯೂ ವರದಿ ಪಡೆದರೂ ಎಲಿಸಾ ಪರೀಕ್ಷೆ ಮುಖ್ಯ. ಆಸ್ಪತ್ರೆಯಲ್ಲಿ ಈಗಾಗಲೇ 7 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ರೋಗಿಯ ಪ್ಲೇಟ್ಲೆಟ್ 1 ಲಕ್ಷಕ್ಕಿಂತ ಕೆಳಗೆ ಬಂದರೆ ಡೆಂಗ್ಯೂ ಶಂಕೆ ಇರುತ್ತದೆ. ಡೆಂಗ್ಯೂವಿನಿಂದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ದಾರೆ. 15 ಮಲೇರಿಯಾ ಪ್ರಕರಣಗಳಿವೆ ಎಂದು ವೈದ್ಯರು ಶಾಸಕರಿಗೆ ಮಾಹಿತಿ ನೀಡಿದರು.
ಎಲಿಸಾ ಟೆಸ್ಟ್
ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿ ಎಲಿಸಾ ಟೆಸ್ಟ್‌ಗಳನ್ನು ಮಾಡಬೇಕು. ಅದಕ್ಕೆ 10ರಿಂದ 15 ದಿನಗಳು ಬೇಕು. ಕಾರ್ಡ್ ಟೆಸ್ಟ್‌ನಿಂದ ಡೆಂಗ್ಯೂ ವರದಿ ಪಡೆದರೂ ಎಲಿಸಾ ಪರೀಕ್ಷೆ ಮುಖ್ಯ. ಆಸ್ಪತ್ರೆಯಲ್ಲಿ ಈಗಾಗಲೇ 7 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ರೋಗಿಯ ಪ್ಲೇಟ್ಲೆಟ್ 1 ಲಕ್ಷಕ್ಕಿಂತ ಕೆಳಗೆ ಬಂದರೆ ಡೆಂಗ್ಯೂ ಶಂಕೆ ಇರುತ್ತದೆ. ಡೆಂಗ್ಯೂವಿನಿಂದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ದಾರೆ. 15 ಮಲೇರಿಯಾ ಪ್ರಕರಣಗಳಿವೆ ಎಂದು ವೈದ್ಯರು ಶಾಸಕರಿಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.