ಸರ್ವರ್ ಇಲ್ಲದೆ ಪಡಿತರ ಪಡೆಯಲು ಪರದಾಟ
ಇ-ಕೆವೈಸಿ ನೋಂದಣಿ ಪ್ರಕ್ರಿಯೆಯಿಂದ ಸಮಸ್ಯೆ: ಅಧಿಕಾರಿಗಳು
Team Udayavani, Sep 25, 2019, 5:00 AM IST
ಪುತ್ತೂರು: ಜನಸಾಮಾನ್ಯರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ನೀಡುವ ಪಡಿತರ ಸಾಮಗ್ರಿಯನ್ನು ಪಡಿತರ ಅಂಗಡಿಗಳ ಮೂಲಕ ಪಡೆದುಕೊಳ್ಳಲು ಕೆಲವು ದಿನಗಳಿಂದ ಫಲಾನುಭವಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಪಡಿತರ ಪಡೆಯಲು ನೀಡುವ ಬೆರಳಚ್ಚನ್ನು ಸ್ವೀಕರಿಸುವ ಸರ್ವರ್‌ನಲ್ಲಿ ಸಮಸ್ಯೆ ಇರುವುದು ಇದಕ್ಕೆ ಕಾರಣ.
ಹಾಲಿ ಪಡಿತರದ ಫಲಾನುಭವಿ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ, ಬೇಳೆ ಹಾಗೂ ಎಪಿಎಲ್ ಕಾರ್ಡುದಾರರಿಗೆ ಕನಿಷ್ಠ ಪಾವತಿ ದರದಲ್ಲಿ ಅಕ್ಕಿ ಮಾತ್ರ ಸಿಗುತ್ತದೆ. ಫಲಾನುಭವಿಗಳು ಪಡಿತರ ಸಾಮಗ್ರಿ ಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕಾರ್ಡ್‌ನಲ್ಲಿ ಹೆಸರಿರುವವರು ಬೆರಳಚ್ಚನ್ನು ನೀಡಬೇಕಾಗುತ್ತದೆ. ಆದರೆ ಆಹಾರ ಇಲಾಖೆಯ ಬೆರಳಚ್ಚು ನೋಂದಣಿಯ ಸರ್ವರ್ ಕೆಲವು ದಿನಗಳಿಂದ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸರ್ವರ್ ಸಮಸ್ಯೆಯ ಕಾರಣದಿಂದ ಫಲಾನುಭವಿಗಳು ಹಲವು ಬಾರಿ ಪಡಿತರ ಅಂಗಡಿಗೆ ಓಡಾಡಬೇಕಾಗಿದೆ. ಬೆಳಗ್ಗೆ ಸರ್ವರ್ ಸರಿಯಿದ್ದರೆ ಕೆಲವೇ ಕ್ಷಣಗಳಲ್ಲಿ ಸ್ಥಗಿತಗೊಳ್ಳುತ್ತದೆ. ಮತ್ತೆ ಇಡೀ ದಿನ ಕೈಕೊಡುತ್ತಿದೆ. ತಮ್ಮ ದೈನಂದಿನ ಕೆಲಸಗಳನ್ನೂ ಬಿಟ್ಟು ಪಡಿತರ ಅಂಗಡಿಗೆ ಹಲವು ಬಾರಿ ಅಲೆದಾಡಬೇಕಾದ ಅನಿವಾರ್ಯತೆಯಲ್ಲಿ ಫಲಾನುಭವಿಗಳು ಪರದಾಡುತ್ತಿದ್ದಾರೆ.
ಸಾಮಗ್ರಿ ವಿತರಣೆ ಬಾಕಿ
ಪಡಿತರ ವಿತರಣೆಯ ಸೊಸೈಟಿಗಳಲ್ಲಿ ತಿಂಗಳ 10ನೇ ತಾರೀಕಿನಿಂದ 25 ತಾರೀಕಿನವರೆಗೆ ಮಾತ್ರ ಪಡಿತರ ವಿತರಣೆ ನಡೆಯುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ಈ ಅವಧಿಯಲ್ಲಿ ಒಂದು ದಿನವೂ ಸರ್ವರ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಈ ಕಾರಣದಿಂದ ಎಲ್ಲ ಪಡಿತರ ವಿತರಣೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಸಾಮಗ್ರಿ ವಿತರಣೆ ಬಾಕಿಯಾಗಿದೆ. ಸೆ. 25 ಕಡೆಯ ದಿನವಾಗಿರುವುದರಿಂದ ಮುಂದೇನು? ಎನ್ನುವ ಆತಂಕ ಫಲಾನುಭವಿಗಳಲ್ಲಿ ಕಾಡುತ್ತಿದೆ.
ಮುಂದಿನ ತಿಂಗಳಿನಿಂದ ಸರಿಯಾಗಲಿದೆ
ನಾಲ್ಕು ದಿನಗಳಿಂದ ಇ -ಕೆವೈಸಿ ಮಾಡುವುದನ್ನು ನಿಲ್ಲಿಸಲಾಗಿದೆ. ಪ್ರತಿ ಮಂಗಳವಾರ ನಿರ್ವಹಣೆಯ ಕಾರಣದಿಂದ ಬೆಳಗ್ಗೆ 11 ಗಂಟೆಯಿಂದ 6 ಗಂಟೆಯ ತನಕ ಸರ್ವರ್ ನಿಧಾನಗತಿಯಲ್ಲಿ ಇರುತ್ತದೆ. ಮುಂದಿನ ತಿಂಗಳಿನಿಂದ ತಿಂಗಳ 1-10 ಹಾಗೂ 25 ತಾಲೂಕಿನ ಬಳಿಕ ಇ-ಕೆವೈಸಿ ಮಾಡುವಂತೆ ಸರಕಾರದಿಂದ ಸೂಚನೆ ಬಂದಿದೆ. ಈ ಕಾರಣದಿಂದ ಫಲಾನುಭವಿಗಳಿಗೆ ಬೆರಳಚ್ಚು ನೀಡಲು ಸರ್ವರ್ ಸಮಸ್ಯೆ ಉಂಟಾಗದು ಎಂದು ಆಹಾರ ಇಲಾಖೆ ಅಧಿಕಾರಿ ಸರಸ್ವತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.