ಬಿಜೆಪಿ ಕಾರ್ಯಕರ್ತರಿಂದ ಧರಣಿ
Team Udayavani, Aug 25, 2018, 1:22 PM IST
ಬಂಟ್ವಾಳ : ತಾ.ಪಂ. ಇಲಾಖೆಯ ನಿವೃತ್ತ ವಾಹನ ಚಾಲಕನ ಬದಲಿ ಚಾಲಕನಿಗೆ ಅಧಿಕಾರ ಹಸ್ತಾಂತರಿಸದ ತಾ.ಪಂ. ವ್ಯವಸ್ಥೆಯ ವಿರುದ್ಧ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮತ್ತು ಕಾರ್ಯಕರ್ತರು ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರಲ್ಲಿದೆ, ಜಿ.ಪಂ. ಸಿಎಸ್ ಬಂಟ್ವಾಳಕ್ಕೆ ಬಂದು ಪ್ರಕರಣ ಇತ್ಯರ್ಥ ಮಾಡುವಂತೆ ಆಗ್ರಹಿಸಿದರು.
ಶಾಸಕರ ಅಧಿಕಾರಕ್ಕೆ ಚ್ಯುತಿ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದಾಗ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ಥಳಕ್ಕೆ ಆಗಮಿಸಿದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪಕ್ಷ ನಾಯಕರಾದ ಕೆ. ಹರಿಕೃಷ್ಣ ಬಂಟಾಳ, ಎ. ಗೋವಿಂದ ಪ್ರಭು, ಜಿ. ಆನಂದ, ಪುರುಷ ಎನ್. ಸಾಲಾನ್ ಸಹಿತ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಧರಣಿಯಲ್ಲಿ ಉಪಸ್ಥಿತರಿದ್ದರು.
ಶಾಸಕರ ಪತ್ರದಂತೆ ಜಿ.ಪಂ.ನಿಂದ ನಿಯೋಜಿತ ವಾಹನ ಚಾಲಕನ ಬದಲು ಮಾಜಿ ಸಚಿವರ ಪತ್ರದಂತೆ ನಿವೃತ್ತ ವಾಹನ ಚಾಲಕನನ್ನು ಕರ್ತವ್ಯಕ್ಕೆ ನಿಯೋಜಿಸಿದ್ದು ಹೇಗೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರಲ್ಲಿ ಪ್ರಶ್ನಿಸಿದಾಗ, ಅದೆಲ್ಲವೂ ಜಿ.ಪಂ. ಸಿಎಸ್ ಅವರಿಂದ ಬಂದಿರುವ ಆದೇಶ ಎಂದು ತಿಳಿಸಿದರು. ಅದಕ್ಕೆ ಒಪ್ಪದ ಕಾರ್ಯಕರ್ತರು, ನಿವೃತ್ತರನ್ನು ನಿಯೋಜಿಸುವಾಗ ಹೊಸದಾಗಿ ಬಂದವರಿಗೆ ಯಾವುದಾದರು ಒಂದು ವ್ಯವಸ್ಥೆ ಆಗಬೇಕಲ್ಲ ಎಂದು ತಿಳಿಸಿದರು. ಸಂಜೆ ತನಕ ಧರಣಿ ಮುಂದುವರಿದಿತ್ತು. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.