ಆಸಿಯಾ-ಇಬ್ರಾಹಿಂ ಕಟ್ಟೆಕ್ಕಾರ್ ವಿವಾಹ ಪ್ರಕರಣ: ಸಂಧಾನ ವಿಫಲ; ಧರಣಿ ಕುಳಿತ ಆಸಿಯಾ
Team Udayavani, Dec 9, 2020, 9:59 PM IST
ಸುಳ್ಯ: ಕಳೆದ ಕೆಲ ತಿಂಗಳಿನಿಂದ ಉಂಟಾಗರುವ ಆಸಿಯಾ-ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ವಿವಾಹ ಪ್ರಕರಣದ ಗೊಂದಲದ ಬಗ್ಗೆ ಡಿ.9 ರಂದು ನಡೆದ ಸಂಧಾನಕಾರರ ಸಭೆಯಲ್ಲಿ ಅಂತಿಮ ನಿರ್ಣಯ ಸಾಧ್ಯವಾಗದೆ ಆಸಿಯಾ ಗಾಂಧಿನಗರದ ಕಟ್ಟೆಕ್ಕಾರ್ ಫೂಟ್ ವೇರ್ ಮಳಿಗೆಯಲ್ಲಿ ಧರಣಿ ಕುಳಿತಿರುವ ಘಟನೆ ನಡೆದಿದೆ.
ಆಸಿಯಾ – ಖಲೀಲ್ ಕಟ್ಟೆಕ್ಕಾರ್ ಪ್ರಕರಣವನ್ನು ಶಮನಗೊಳಿಸಲು ಜಿಲ್ಲಾ ಮುಸ್ಲಿಂ ಒಕ್ಕೂಟ , ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿ ನೇತೃತ್ವದಲ್ಲಿ ಡಿ.1 ರಂದು ಸಭೆ ಸೇರಿತು. ಖಲೀಲ್ ಅವರ ತಂದೆ ಅಬ್ದುಲ್ಲರೂ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ ಸಭೆಯನ್ನು ನಡೆಸಿ ಡಿ. 9 ರಂದು ಖಲೀಲ್ ಅವರನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ತಿಳಿಸಲಾಗಿತ್ತು.ಆದರೆ ಸಭೆಗೆ ಖಲೀಲ್ ಬಾರದ ಕಾರಣ ಅಂತಿಮ ತೀರ್ಮಾನ ಕೈಗೊಳ್ಳುಲು ಸಾಧ್ಯವಾಗಲಿಲ್ಲ. ಖಲೀಲ್ ಬರುವ ತನಕ ಆಸಿಯಾರನ್ನು ಅಬ್ದುಲ್ಲ ಅವರು ಅವರ ಮನೆಗೆ ಕರೆದುಕೊಂಡು ಹೋಗಬೇಕೆಂದು ಜಮಾಯತ್ ಕಮಿಟಿ ಹೇಳಿದುದನ್ನು ಅಬ್ದುಲ್ಲ ಅವರು ಒಪ್ಪಲಿಲ್ಲ ಎನ್ನಲಾಗಿದೆ.
ಸಂಜೆ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಂಗಳೂರು ಮಾಜಿ ಮೇರ್ಯ ಕೆ.ಅಶ್ರಫ್ ಸೇರಿದಂತೆ ಮುಖಂಡರು ಮತ್ತು ಆಸಿಯಾ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ಇಂದಿನ ಸಭೆಯ ಘಟನೆಗಳನ್ನು ವಿವರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಸಮಿತಿ ವತಿಯಿಂದ ಈ ಘಟನೆಯನ್ನು ಸುಖಾಂತ್ಯಗೊಳಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಅನಾಹುತಗಳು ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಮ್ಮ ವತಿಯಿಂದ ಹೇಳಿಕೆಯನ್ನು ನೀಡಿ, ಆಸಿಯರನ್ನು ಸುಳ್ಯ ಗಾಂಧಿನಗರದ ಕಟ್ಟೆರ್ಕಾ ಫೂಟ್ ವೇರ್ ಮಳಿಗೆಯಲ್ಲಿ ಬಿಟ್ಟು ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.