Theft Case ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್ ಕಳ್ಳತನ
Team Udayavani, Jul 24, 2024, 11:26 PM IST
ವಿಟ್ಲ: ಪುಣಚ ಗುರ್ಮೆಯ ಮನೆಯಂಗಳದಲ್ಲಿ ವಿದ್ಯುತ್ ಪಂಪ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್‌ಗಳು ಕಳವಾಗಿದೆ.
ಗುರ್ಮೆ ನಿವಾಸಿ ಗಣೇಶ್ ಗೌಡ ಅವರು ವಿದ್ಯುತ್ ಉಪಕರಣಗಳ ದುರಸ್ತಿ ಕಾರ್ಯವನ್ನು ನಡೆಸುತ್ತಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳತನವಾಗಿದೆ. ಜು. 21ರ ರಾತ್ರಿ ಕಳ್ಳತನ ನಡೆದಿದ್ದು, ಜು. 22ರ ಬೆಳಗ್ಗೆ ಕಾಣೆಯಾಗಿರುವುದು ಗೊತ್ತಾಗಿದೆ. ಮನೆಯ ಆವರಣದಲ್ಲಿರುವ ಗೇಟಿಗೆ ಬೀಗ ಹಾಕಿದ್ದು, ಆವರಣ ಗೋಡೆಯನ್ನು ಹಾರಿ ಒಳ ನುಸುಳಿರುವ ಸಾಧ್ಯತೆಯಿದೆ.
ಪಂಚಾಯತ್‌ಗೆ ಸೇರಿದ 7.5 ಎಚ್.ಪಿ. ಪಂಪ್, ಗ್ರಾಹಕರಿಂದ ದುರಸ್ತಿಗಾಗಿ ಬಂದ 5 ಎಚ್.ಪಿ. 10 ಸ್ಟೇಜ್, 5 ಎಚ್.ಪಿ. 8 ಸ್ಟೇಜ್, 5 ಎಚ್.ಪಿ. 10 ಸ್ಟೇಜ್, 3 ಎಚ್‌ಪಿ ತಲಾ ಒಂದು ಪಂಪ್, 1.5 ಎಚ್.ಪಿ. ನಾಲ್ಕು ಪಂಪ್, ತೆರೆದ ಬಾವಿಯ ಮೂರು ಪಂಪ್, ಹಾಳಾದ 4 ಮೋಟಾರು ಕಳವಾಗಿದೆ. ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.