ಪುಣ್ಚಪ್ಪಾಡಿ: ನಿವೇಶನದ ಜಾಗದ ಸರ್ವೇ
Team Udayavani, Sep 8, 2018, 2:40 PM IST
ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರ ಮಂಗಲದಲ್ಲಿ ನಿವೇಶನಕ್ಕಾಗಿ ಕಾದಿರಿಸಿದ ಜಾಗದ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ಗಡಿ ಗುರುತು ಮಾಡಿಕೊಡುವ ನಿಟ್ಟಿನಲ್ಲಿ ಶುಕ್ರವಾರ ಸರ್ವೇಯರ್ ಸ್ಥಳಕ್ಕೆ ಭೇಟಿ ನೀಡಿದರು.
ಕಡಬ ಕಂದಾಯ ಇಲಾಖೆಯ ಸರ್ವೇಯರ್ ಶಿವಣ್ಣ ಹಾಗೂ ಅವರ ತಂಡ ಸರ್ವೇ ಕಾರ್ಯ ನಡೆಸಿ, ಗಡಿ ಗುರುತು ಮಾಡಿದರು. ಸವಣೂರು ಗ್ರಾಮ ಪಂಚಾಯತ್ ಈ ಸ್ಥಳವನ್ನು ನಿವೇಶನಕ್ಕಾಗಿ ಕಾದಿರಿಸಿದ್ದರೂ, ಕೆಲವೊಂದು ತಾಂತ್ರಿಕ ಕಾರಣ, ಅಧಿಕಾರಿಗಳ ಸ್ಪಂದನೆ ದೊರೆಯದ ಕಾರಣ ಪಲಾನುಭವಿಗಳಿಗೆ ನಿವೇಶನದ ಗಡಿಗುರುತು ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕುರಿತು ಉದಯವಾಣಿ ಸುದಿನ ಜೂ. 25ರಂದು ಸಚಿತ್ರ ವರದಿ ಪ್ರಕಟಿಸಿತ್ತು.
ಇಲ್ಲಿ ಮನೆ ಹೊಂದಿರುವ ಪಲಾನುಭವಿಗಳು ನಿವೇಶನದ ಗಡಿಗುರುತು ಮಾಡಿಸುವ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರೂಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದೆ ಕಂಗಾಲಾಗಿದ್ದರು. ಸಮಸ್ಯೆಯನ್ನು ಮನಗಂಡ ಸವಣೂರು ಗ್ರಾಮ ಪಂಚಾಯತ್ ಫಲಾನುಭವಿಗಳಿಗೆ ನಿವೇಶನ ಒದಗಿಸಿಕೊಡುವ ನಿಟ್ಟಿನಲ್ಲಿ ಸತತ ಪ್ರಯತ್ನಪಟ್ಟಿದ್ದು, ಇದೀಗ ಸರ್ವೇಯರ್ ಗಡಿಗುರುತು ಮಾಡಿರುವುದು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಹಕಾರಿಯಾಗಲಿದೆ.
ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ., ಪಿಡಿಓ ನಾರಾಯಣ ಬಟ್ಟೋಡಿ, ಸದಸ್ಯೆ ವೇದಾವತಿ, ಮಾಜಿ ಸದಸ್ಯ ನಾಗರಾಜ್, ಸಿಬಂದಿ ಪ್ರಮೋದ್ ಕುಮಾರ್ ರೈ, ಗ್ರಾಮಕರಣಿಕ ಸುನೀಲ್, ಗ್ರಾಮ ಸಹಾಯಕ ಶೀನಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.