ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್; ಮಾ. 24: ಉಚಿತ ಸಾಮೂಹಿಕ ವಿವಾಹ
Team Udayavani, Mar 20, 2024, 10:15 AM IST
ಪುಂಜಾಲಕಟ್ಟೆ: ಸಾಮಾ ಜಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಮುಖೀ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಾ. 24 ರಂದು ಬಂಗ್ಲೆ ಮೈದಾನದಲ್ಲಿ ಜರಗಲಿದೆ.
ಮುಂಬಯಿ ಉದ್ಯಮಿ ಕಕ್ಯ ಪದವು ನಾರಾಯಣ ಶೆಟ್ಟಿ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವಧೂ- ವರರ ದಿಬ್ಬಣ ಮೆರವಣಿಗೆ, 11.21ರ ಶುಭ ಮುಹೂರ್ತದಲ್ಲಿ 6 ಜೋಡಿಗೆ ಸಾಮೂಹಿಕ ವಿವಾಹ ನಡೆಯಲಿದೆ.
ಬಳಿಕ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡುವುದಾಗಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪತ್ರಿಕಾಗೋಷ್ಠಿಯಲ್ಲಿತಿ ಳಿಸಿದರು.
ಹೊಸದಿಲ್ಲಿಯ ಅನಾರೋಕ್ ಸಂಸ್ಥೆಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೆ.ಪಿ. ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡುವರು. ಉಡುಪಿ ಜಿಲ್ಲೆ ಹೆಚ್ಚುವರಿ ನ್ಯಾಯಾಧೀಶ ದಿನೇಶ ಹೆಗ್ಡೆ ಮತ್ತು ಶಾಸಕ ಹರೀಶ್ ಪೂಂಜ ಮಂಗಳ ಸೂತ್ರ ವಿತರಿಸುವರು. ಉದ್ಯಮಿ ಅಬ್ದುಲ್ ಕುಂಞಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.
ಬೆಳಗ್ಗೆ ಕುಣಿತ ಭಜನೆ ಸ್ಪರ್ಧೆ, ಮಧ್ಯಾಹ್ನ ಸಾರ್ವಜನಿಕರಿಗೆ ವಿವಾಹ ಭೋಜನ ಏರ್ಪಡಿಸಲಾಗಿದ್ದು, ಮಧ್ಯಾಹ್ನ ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರದರ್ಶನವಿದೆ. ರಾತ್ರಿ ಡ್ಯಾನ್ಸ್ ಪರ್ಬ ನಡೆಯಲಿದೆ. ಸಾಮೂಹಿಕ ವಿವಾಹಕ್ಕೆ ಮುನ್ನ ಮಾ. 23 ರಂದು ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದರು.
ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪದಾಧಿಕಾರಿಗಳಾದ ಜಯರಾಜ್ ಅತ್ತಾಜೆ, ರಾಜೇಶ್ ಪಿ. ಬಂಗೇರ, ರತ್ನಾಕರ ಪಿ.ಎಂ., ಮಾಧವ ಬಂಗೇರ ಉಪಸ್ಥಿತರಿದ್ದರು.
ಸ್ವಸ್ತಿ ಸಿರಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ
ಸಂತೋಷ್ ಕುಮಾ ರ್ ಜೆ.ಪಿ. (ಉದ್ಯಮ), ಸಂತೋಷ್ ಕುಮಾರ್ ತುಂಬೆ (ಶಿಕ್ಷಣ), ಅನ್ವೇಷ್ ಆರ್. ಶೆಟ್ಟಿ (ಯಕ್ಷಗಾನ), ಸದಾನಂದ ಅಮೀನ್ ಮಲ್ಪೆ (ಉದ್ಯಮ), ರಾಜು ಮಣಿಹಳ್ಳ (ದೈವ ನರ್ತನ), ಹಂಝ ಬಸ್ತಿ ಕೋಡಿ (ಸಮಾಜ ಸೇವೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಮನೋಜ್ ಕನಪಾಡಿ (ಕಲೆ), ಭಾಸ್ಕರ ರಾವ್ ಬಿ.ಸಿ.ರೋಡ್(ಸಂಗೀತ), ಹೇಮಚಂದ್ರ ಸಿದ್ದಕಟ್ಟೆ (ಸಂಘಟನೆ), ಸಂದೀಪ್ ಸಾಲ್ಯಾನ್ (ಪತ್ರಕರ್ತ), ಚಂದ್ರಪ್ಪ ಮದ್ದಡ್ಕ (ಶಿಕ್ಷಣ) ಅವರು ಪ್ರಶಸ್ತಿ ಪುರಸ್ಕೃತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.