![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 24, 2023, 12:04 AM IST
ಪುಂಜಾಲಕಟ್ಟೆ: ಸರಕಾರದಿಂದ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಮಂಗಳೂರಿನ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಅನಿಲ್ ಲೋಬೋ ಅವರಿಗೆ ಎಂಸಿಸಿ ಬ್ಯಾಂಕ್ ಅಭಿಮಾನಿ ಬಳಗ ಬಂಟ್ವಾಳದ ವತಿಯಿಂದ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಡಿ. 22ರಂದು ಸಂಜೆ ನಡೆಯಿತು.
ಫರ್ಲಾ ವೆಲಂಕಣಿ ಚರ್ಚ್‌ನ ಧರ್ಮಗುರು ವಂ| ಜೋನ್ ಪ್ರಕಾಶ್ ಪಿರೇರಾ ಅವರು ಕಾರ್ಯಕ್ರಮ ಉದ್ಘಾಟಿಸಿ ಅನಿಲ್ ಲೋಬೋ ಅವರನ್ನು ಸಮ್ಮಾನಿಸಿದರು. ಇತರರ ಒಳಿತಿಗಾಗಿ ಮಾಡುವ ಕಾರ್ಯ ಅಭಿನಂದನೀಯ ಎಂದ ಅವರು ಅನಿಲ್ ಲೋಬೋ ಅವರು 112 ವರ್ಷಗಳ ಇತಿಹಾಸದ ಬ್ಯಾಂಕ್ ಅನ್ನು ಇಂದು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅವರು ಅಭಿನಂದನ ಭಾಷಣ ಮಾಡಿ ಅನಿಲ್ ಲೋಬೋ ಅವರು ಎಂಸಿಸಿ ಬ್ಯಾಂಕ್ ವಿಶ್ವಾಸಾರ್ಹ ಬ್ಯಾಂಕ್ ಆಗಿ ಅಭಿವೃದ್ಧಿ ಪಡಿಸಲು ಅವಿರತ ಶ್ರಮಿಸಿದ್ದಾರೆ ಎಂದರು.
ಅನಿಲ್ ಲೋಬೊ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಹಕರೇ ದೇವರು ಎಂದು ಭಾವಿಸಿದಾಗ ಬ್ಯಾಂಕ್ ಬೆಳೆಯುತ್ತದೆ. ಪ್ರೋತ್ಸಾಹ ಇದ್ದಾಗ ಮಾತ್ರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬೆಳೆಯಲು ಸಾಧ್ಯವಿದೆ ಎಂದರು.
ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಪ್ರವೀಣ್ ಬಿ. ನಾಯಕ್ ಅವರು ಮಾತನಾಡಿದರು.
ಬಿ. ಮೂಡ ಸರಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜಾ, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷೆ ಫ್ಲೆàವಿ ಡಿ’ಸೋಜಾ ಅವರು ಶುಭ ಹಾರೈಸಿದರು. ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕ ವಿನ್ಸೆಂಟ್ ಲಸ್ರಾದೋ ಉಪಸ್ಥಿತರಿದ್ದರು.
ಸಂದೀಪ್ ಮಿನೇಜಸ್ ಸ್ವಾಗತಿಸಿ, ವಾಲ್ಟರ್ ನೊರೋನ್ಹ ವಂದಿಸಿದರು. ಸುನೀಲ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.