ಶುದ್ಧ ನೀರಿನ ಘಟಕ ಅಪೂರ್ಣ: ಪೋಲಾಗುತ್ತಿದೆ ಜೀವಜಲ


Team Udayavani, May 29, 2019, 6:00 AM IST

e-21

ಗುತ್ತಿಗಾರು: ಬರದಿಂದ ಜಿಲ್ಲೆಯೇ ಕಂಗೆಟ್ಟಿರುವಾಗ ದಾಹ ತೀರಿಸಲು ನಿರ್ಮಿಸಲಾದ ಶುದ್ಧ ನೀರಿನ ಘಟಕವೇ ಜೀವಜಲ ಪೋಲಾಗಲು ಕಾರಣವಾಗುತ್ತಿದೆ! ರಾಷ್ಟ್ರೀಯ ಗ್ರಾಮೀಣ ಗುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ವತಿಯಿಂದ ದೇವಚಳ್ಳ ಗ್ರಾ.ಪಂ. ಆವರಣದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕದಲ್ಲಿ 1 ಲೀಟರ್‌ ಶುದ್ಧ ನೀರು ಪಡೆಯಬೇಕೆಂದರೆ 6 ಲೀಟರ್‌ ನೀರು ಪೋಲಾಗುತ್ತಿದೆ. ದೇವಚಳ್ಳ ಪರಿಸರದಲ್ಲಿ ನೀರಿಗೆ ಹಾಹಾಕಾರ ಇರುವಾಗ ಇಂಥದೊಂದು ಕಳಪೆ ಕಾಮಗಾರಿ ಪಂಚಾಯತ್‌ಗೆ ತಲೆನೋವಾಗಿ ಪರಿಣಮಿಸಿದೆ.

ತಾಲೂಕಿನ ನಾನಾ ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಆದರೆ ದೇವಚಳ್ಳ ಗ್ರಾ.ಪಂ. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಮುತುವರ್ಜಿಯಿಂದ ನೀರಿನ ಘಟಕ 2 ರೂ.ಗೆ 20 ಲೀಟರ್‌ ನೀರು ಪೂರೈಸುವ ಕಾರ್ಯ ಮಾಡಿದೆ. ಕಾಮಗಾರಿ ಅಪೂರ್ಣವಾಗಿರುವ ಕಾರಣ 1 ಲೀಟರ್‌ ನೀರನ್ನು ಶುದ್ಧೀಕರಿಸಲು 6 ಲೀ. ನೀರನ್ನು ಘಟಕಕ್ಕೆ ಪೂರೈಸಬೇಕಾಗುತ್ತದೆ. ತಾಂತ್ರಿಕ ದೋಷದಿಂದಾದ ಈ ಅಚಾತುರ್ಯ ನಡೆಯುತ್ತಿದೆ. ಅಷ್ಟಕ್ಕಷ್ಟೇ ಇರುವ ನೀರು ಈ ರೀತಿ ಪೋಲಾದರೆ ಘಟಕಕ್ಕೆ ನೀರು ಪೂರೈಸುವುದು ಹೇಗೆ? ಎನ್ನುವ ಪ್ರಶ್ನೆ ಸಿಬಂದಿಯದು.

ಪೋಲಾಗಲು ಕಾರಣವೇನು?
ನೀರು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುವ ನೀರಿನಲ್ಲಿ ಹೆಚ್ಚು ಉಪ್ಪಿನಂಶ ಜಾಸ್ತಿ ಇದ್ದರೆ ಪೋಲಾಗುವ ನೀರಿನ ಪ್ರಮಾಣವೂ ಹೆಚ್ಚಾಗಿರುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಶುದ್ಧ ನೀರನ್ನು ಪಡೆಯುವಾಗ ಈ ರೀತಿ ನೀರು ಪೋಲಾಗುವ ಸಾಧ್ಯತೆಗಳಿದೆ. ಸುಳ್ಯ ತಾಲೂಕಿನಲ್ಲಿ ಲಭ್ಯವಿರುವ ನೀರಿನಲ್ಲಿ ಉಪ್ಪಿನಂಶ ಹೆಚ್ಚಾಗಿರುವ ಸಾಧ್ಯತೆ ಕಡಿಮೆ ಇದ್ದು, ನೀರು ಪೋಲಾಗಲು ಸಮಸ್ಯಾತ್ಮಕ ಅಥವಾ ಅಪೂರ್ಣ ತಾಂತ್ರಿಕ ರಚನೆಯೇ ಕಾರಣವಾಗಿರುವ ಸಾಧ್ಯತೆ ಇದೆ.

ಅಪೂರ್ಣ ಕಟ್ಟಡ
ಘಟಕಕ್ಕೆ ನಿರ್ಮಿಸಲಾದ ಕಟ್ಟಡವೂ ಅಪೂರ್ಣವಾಗಿದೆ. ನೆಲಕ್ಕೆ ಹಾಸಿರುವ ಟೈಲ್ಸ್‌ ಎದ್ದು ಹೋಗಿವೆ. ಕಟ್ಟಡದ ಬಹುತೇಕ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಫ್ರೀ ಶಾಕ್‌ ಟ್ರೀಟ್‌ಮೆಂಟ್‌!
ಅಪೂರ್ಣಗೊಂಡ ಶುದ್ಧ ನೀರಿನ ಘಟಕದಲ್ಲಿ ವಿದ್ಯುತ್‌ ಪ್ರವಹಿಸುತ್ತಿದ್ದು, ಮಳೆ ಸುರಿದಾಗ ನೀರು ಪಡೆದುಕೊಳ್ಳಲು ಹೋದರೆ ಶಾಕ್‌ ತಗಲುತ್ತದೆ. ಘಟಕದ ಒಳಗೆ ಮಳೆ ನೀರು ಹರಿಯುವುದರಿಂದ ಈ ರೀತಿಯಾಗಿ ಆಗುತ್ತದೆ ಎನ್ನುತ್ತಾರೆ ದೇವಚಳ್ಳ ಗ್ರಾ.ಪಂ ಅಧ್ಯಕ್ಷ ಡಿವಾಕರ ಮುಂಡೋಡಿ.

 ಪೋಲಾಗದಂತೆ ನೋಡುತ್ತೇವೆ
ಪ್ರವಾಸಿಗರು ಹಾಗೂ ಊರವರು ನೀರು ಪಡೆದುಕೊಳ್ಳುವುದರಿಂದ ನೀರು ಪೋಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಪೂರ್ಣಗೊಂಡ ಕಾಮಗಾರಿಯನ್ನು ಆದಷ್ಟು ಬೇಗ ಇಲಾಖೆ ಸರಿಪಡಿಸಬೇಕು.
 - ದಿವಾಕರ ಮುಂಡೋಡಿ, ಅಧ್ಯಕ್ಷರು, ದೇವಚಳ್ಳ ಗ್ರಾ.ಪಂ.

– ಕೃಷ್ಣಪ್ರಸಾದ್‌ ಕೋಲ್ಚಾರ್‌

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.