ಪುತ್ತೂರು: 33ರಲ್ಲಿ 29 ಗ್ರಾಮಾಡಳಿತ ಕಚೇರಿಗೆ ಸ್ವಂತ ಕಟ್ಟಡ ಇಲ್ಲ
Team Udayavani, Oct 2, 2024, 10:08 AM IST
ಪುತ್ತೂರು: ಸಾರ್ವಜನಿಕ ಉದ್ದೇಶ ಗಳಿಗೆ, ವಿವಿಧ ಇಲಾಖೆಗಳ ಕಟ್ಟಡಗಳಿಗೆ ನಿವೇಶನ ಹಂಚುವ ಗ್ರಾಮಾಡಳಿತಧಿಕಾರಿಗಳಿಗೆ ತಾವು ಕರ್ತವ್ಯ ನಿರ್ವಹಿಸುವ ಗ್ರಾಮದಲ್ಲಿ ಕಚೇರಿಗೆ ಸ್ವಂತ ಜಾಗವೂ ಇಲ್ಲ, ಕಟ್ಟಡವೂ ಇಲ್ಲ, ಸಿಬಂದಿಯೂ ಇಲ್ಲದ ಸ್ಥಿತಿ ಈಗ ನಿರ್ಮಾಣವಾಗಿದೆ.
ಇದು ಪುತ್ತೂರು ತಾಲೂಕಿನ ಶೇ.95 ರಷ್ಟು ಗ್ರಾಮಾಡಳಿತಧಿಕಾರಿಗಳ ಸ್ಥಿತಿ. ಗ್ರಾಮದ ಕಂದಾಯ ವಿಭಾಗದ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಗ್ರಾಮಾಡಳಿತ ಅಧಿಕಾರಿ ಗಳು ಹತ್ತಾರು ಮೂಲ ಸೌಕರ್ಯಗಳ ಕೊರತೆಯ ಜತೆಗೆ ದಿನಂಪ್ರತಿ ಕರ್ತವ್ಯ ನಿರ್ವ
ಹಣೆಗೂ ಪರದಾಡಬೇಕಾದ ಸ್ಥಿತಿ ಇದೆ ಅನ್ನು ವುದನ್ನು ತೆರೆದಿಡುತ್ತಿದೆ ರಿಯಾಲಿಟಿ ಚೆಕ್.
14 ಗ್ರಾಮಗಳಲ್ಲಿ ಪೂರ್ಣಕಾಲಿಕ ವಿಎ ಇಲ್ಲ
ತಾಲೂಕಿನ 14 ಗ್ರಾಮಗಳಲ್ಲಿ ಪೂರ್ಣಕಾಲಿಕ ಗ್ರಾಮಾಡಳಿತ ಅಧಿಕಾರಿಗಳೇ ಇಲ್ಲ. ಪುತ್ತೂರು ಹೋಬಳಿಯ 22 ರಲ್ಲಿ 10,
ಉಪ್ಪಿನಂಗಡಿ ಹೋಬಳಿಯ 11 ರಲ್ಲಿ 5 ಮಾತ್ರ ಭರ್ತಿ ಆಗಿದೆ. ಮಂಜೂರಾತಿ ಹುದ್ದೆಗಳ ಪೈಕಿ ಗ್ರಾಮಾಡಳಿತ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ಭೂಮಿ ಶಾಖೆ-2, ತಾಲೂಕು ಕಚೇರಿ-2, ಸಹಾಯಕ ಆಯುಕ್ತರ ಕಚೇರಿ-1, ಜಿಲ್ಲಾಧಿಕಾರಿ ಕಚೇರಿ-1, ಕಡಬ, ಬೆಳ್ತಂಗಡಿ ತಾಲೂಕು ಕಚೇರಿಗಳಿಗೆ ತಲಾ 1 ರಂತೆ ನಿಯೋಜಿಸಲಾಗಿದೆ. ಒಟ್ಟು 33 ರಲ್ಲಿ 14 ಹುದ್ದೆ ಖಾಲಿ ಇದ್ದು ಲಭ್ಯ ಇರುವ ಗ್ರಾಮಾಡಳಿತಧಿಕಾರಿಗಳಿಗೆ ಹೆಚ್ಚುವರಿಯಾಗಿ ಇತರ ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ.
3 ಸ್ವಂತ ಉಳಿದವು ತಾತ್ಕಾಲಿಕ
ತಾಲೂಕಿನಲ್ಲಿ ಒಟ್ಟು 33 ಗ್ರಾಮ ಆಡಳಿತ ಅಧಿಕಾರಿಗಳ ವ್ಯಾಪ್ತಿ ಇದ್ದು ಇದರಲ್ಲಿ 29 ಗ್ರಾಮಗಳಲ್ಲಿ ಗ್ರಾ.ಪಂ. ಕಟ್ಟಡ, 1 ಕಡೆಗಳಲ್ಲಿ ಖಾಸಗಿ ಕಟ್ಟಡ, 3 ಕಡೆಗಳಲ್ಲಿ ಸ್ವಂತ ಕಟ್ಟಡ ಇದೆ. ಅಂದರೆ 33 ರಲ್ಲಿ 3 ಗ್ರಾಮಗಳಲ್ಲಿ ಮಾತ್ರ ಗ್ರಾಮಾಡಳಿತ ಅಧಿಕಾರಿಗಳಿಗೆ ಸ್ವಂತ ಕಚೇರಿ ಇದ್ದು ಉಳಿದೆಡೆ ಬೇರೆ ಇಲಾಖೆಗಳ ಅಥವಾ ಖಾಸಗಿ ಕಟ್ಟಡವನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.
ಶೌಚಾಲಯವೂ ಇಲ್ಲ ಸೋರುವ ಕಟ್ಟಡ..!
33 ಗ್ರಾಮಾಡಳಿತದ ಪೈಕಿ 8 ಗ್ರಾಮಾಡಳಿತ ಕಚೇರಿಗಳ ಸ್ಥಿತಿ ತೀರಾ ಶೋಚನೀಯ ಎಂದು ಗುರುತಿಸಲಾಗಿದೆ. ಅಂದರೆ ಶೌಚಾಲಯದ ಕೊರತೆ, ಮಳೆಗಾಲದಲ್ಲಿ ಸೋರುವಿಕೆ, ಶಿಥಿಲ ಕಟ್ಟಡ. ಕೆಮ್ಮಿಂಜೆ ಗ್ರಾಮಾಡಳಿತದ ಕಚೇರಿ ಕಟ್ಟಡದಲ್ಲಿ ಶೌಚಾಯ ಇಲ್ಲ, ನೀರಿನ ವ್ಯವಸ್ಥೆಯು ಇಲ್ಲ, ಆರ್ಯಾಪು ಕಚೇರಿ ಕಟ್ಟಡ ಪ್ರತೀ ಮಳೆಗಾಲದಲ್ಲಿ ಸೋರುತ್ತಿದೆ. ಮಳೆಗಾಲದಲ್ಲಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಬೇಸಗೆ ಸಮೀಪಿಸಿದರೂ ದುರಸ್ತಿ ಇನ್ನೂ ಆಗಿಲ್ಲ.
ಇಲ್ಲೂ ಶೌಚಾಲಯದ ಸಮಸ್ಯೆ ಇದೆ. 34ನೇ ನೆಕ್ಕಿಲಾಡಿಯಲ್ಲಿ ಗ್ರಾ.ಪಂ.ಸಭಾಂಗಣದ ಒಂದು ಮೂಲೆಯೇ ಗ್ರಾಮಾಡಳಿತದ
ಕಚೇರಿ. ಕಬಕ, ಕೊಡಿಪ್ಪಾಡಿಯಲ್ಲಿಯು ಮೂಲ ಸೌಕರ್ಯದ ಕೊರತೆ ಇದೆ. ಇನ್ನು ಕುರಿಯದಲ್ಲಿ ಹಳೆ ಅಂಗನವಾಡಿ ಕಟ್ಟಡವನ್ನು ನೀಡಲಾಗಿದ್ದು ಅದರಲ್ಲಿ ಶೌಚಾಲಯ ಇಲ್ಲ. ಬಾಗಿಲು, ಮಾಡು ಶಿಥಿಲವಾಗಿದೆ. ಪಟ್ನೂರು ವಿಎ ಕಚೇರಿಯ ಸ್ಥಿತಿಯು ಇಂತಹುದೆ.
ಉಳಿದ ಗ್ರಾಮಾಡಳಿತದ ಕಟ್ಟಡಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಂಕಿ-ಅಂಶದ ಪ್ರಕಾರ ಕೆಮ್ಮಿಂಜೆ, ಆರ್ಯಾಪು, ಬಜತ್ತೂರು, 34ನೇ ನೆಕ್ಕಿಲಾಡಿ, ಪಟ್ನೂರು, ಪಡವನ್ನೂರು, ಕುರಿಯ, ಮಾಟ್ನೂರು ಗ್ರಾಮಾಡಳಿತ ಕಚೇರಿಗಳು ಸುರಕ್ಷಿತವಾಗಿಲ್ಲ. ಅಲ್ಲಿ ಮೂಲ ಸೌಕರ್ಯಗಳ ಕೊರತೆ ತೀವ್ರವಾಗಿದೆ ಎಂದು ಗುರುತಿಸಲಾಗಿದೆ.
ವಿದ್ಯುತ್ ಬಿಲ್ ವಿಎಗಳೇ ಕಟ್ಟಬೇಕು
ಒಂದೆಡೆ ಸ್ವಂತ ಕಚೇರಿ ಇಲ್ಲದಿರುವ, ಕನಿಷ್ಠ ಮೂಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಾಡಳಿತಧಿಕಾರಿಗಳು ಅಳಲು ವ್ಯಕ್ತಪಡಿಸುತ್ತಿದ್ದರೆ ಪ್ರತೀ ತಿಂಗಳ ಕಚೇರಿ ವಿದ್ಯುತ್ ಬಿಲ್ ಅನ್ನು ಗ್ರಾಮಾಡಳಿತಧಿಕಾರಿಗಳು ತಮ್ಮ ಕೈಯಿಂದಲೇ ಭರಿಸುತ್ತಿದ್ದಾರೆ. ಇದಕ್ಕೆ ಯಾವುದೇ ಅನುದಾನ ಲಭ್ಯವಾಗುತ್ತಿಲ್ಲ. ಹೀಗಾಗಿ ಇಡೀ ಗ್ರಾಮದ ಕಂದಾಯ ಆಡಳಿತ ವ್ಯವಸ್ಥೆ ಹೊಣೆ ಹೊತ್ತಿರುವ ಸರಕಾರದ ಇಲಾಖೆ ನಿರ್ಲಕ್ಷéಕ್ಕೆ ಈಡಾಗಿರುವು ಕಂಡು ಬರುತ್ತಿದೆ.
17ಆ್ಯಪ್ ಗಳ ಹೆಚ್ಚುವರಿ ಹೊರೆ
ಗ್ರಾಮ ಆಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ಕೆಲಸಕ್ಕಿಂತ ಅನ್ಯ ಇಲಾಖೆ ಕಾರ್ಯದೊತ್ತಡವೇ ಹೆಚ್ಚಾಗಿದೆ. ಹೀಗಾಗಿ
ಒಂದೆಡೆ ಸರಕಾರದ ಭಾಗವೇ ಸರಕಾರದ ವಿರುದ್ಧ ಮುಷ್ಕರ ನಿರತವಾಗಿದೆ. ವಿವಿಧ ಉದ್ದೇಶಗಳಿಗೆ 17 ಆ್ಯಪ್ ಗಳನ್ನು ಸರಕಾರ
ತಂದಿದ್ದು ಈ ಕೆಲಸದ ಹೊರೆಯನ್ನು ವಿಎಗಳಿಗೆ ಹೊರಿಸಲಾಗಿದೆ. ಸರಕಾರಿ ಜಮೀನು ಒತ್ತುವರಿ ಗುರುತಿಸುವುದು, ಬೆಳೆ ಪರಿಹಾರ, ಬಗರ್ ಹುಕಂ, ಪಿಎಂ ಕಿಸಾನ್, ಮಳೆ ಹಾನಿ, ಬಿಎಲ್‌ಒ ಮೊದಲಾದ 17 ಆ್ಯಪ್ ಗಳ ನಿರ್ವಹಣೆಯ ಹೊರೆ ಇದ್ದು ಸಿಬಂದಿ ಕೊರತೆ ಕಾರಣದಿಂದ ಇರುವ ವಿಎಗಳಿಗೆ ಕೆಲಸದ ಒತ್ತಡದ ಸೃಷ್ಟಿಯಾಗಿದೆ ಅನ್ನುತ್ತಾರೆ ವಿಎಗಳು.
*ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.