ಶಿಥಿಲಾವಸ್ಥೆಯಲ್ಲಿ ಪುತ್ತೂರು ಬಿಇಒ ಕಚೇರಿ ಕಟ್ಟಡ; ಶೀಘ್ರ ಸ್ಥಳಾಂತರಕ್ಕೆ ನಿರ್ಧಾರ
Team Udayavani, Nov 26, 2020, 5:42 AM IST
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿರುವ ಬ್ರಿಟಿಷ್ ಕಾಲದ ಕಟ್ಟಡ ಈಗ ಶಿಥಿಲಗೊಂಡು ಅಪಾಯ ಅಂಚಿನಲ್ಲಿದೆ. ಈ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಕಷ್ಟ ಎಂಬ ಸ್ಥಿತಿ ಇದ್ದು, ಶೀಘ್ರ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು, ಮಾಡಿನ ಹೆಂಚು ಒಡೆದಿದೆ. ಮಳೆಗಾಲದಲ್ಲಂತೂ ಕಾರ್ಯ ನಿರ್ವಹಣೆ ಪಾಡು ಹೇಳ ತೀರದು.
ಕಟ್ಟಡದ ಇತಿಹಾಸ
ಬ್ರಿಟಿಷ್ ಕಾಲದಲ್ಲಿ ಈ ಕಟ್ಟಡವೂ ಸೇರಿ ಹಳೆ ತಾಲೂಕು ಕಚೇರಿ ಕಟ್ಟಡ (ಹಿಂದಿನ ಜೈಲು ಕಟ್ಟಡ), ಕೋರ್ಟ್ ಕಟ್ಟಡ, ಉಪ ನೋಂದಣಾಧಿಕಾರಿ ಕಟ್ಟಡ, ಸಹಾಯಕ ಆಯುಕ್ತರ ಕಚೇರಿ ಕಟ್ಟಡಗಳು ಸೇರಿವೆ. ಎ.ಸಿ. ಕಟ್ಟಡವನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ವರ್ಷಗಳ ಹಿಂದೆ ಕೆಡವಲಾಗಿತ್ತು. ಉಪ ನೋಂದಣಾಧಿಕಾರಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸಿದ ಬಳಿಕ ಆ ಕಟ್ಟಡವನ್ನೂ ಕೆಡವಿ, ಆ ಜಾಗವನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಮಹಿಳಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. 1938ರಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಪ್ರಸ್ತುತ ಬಿಇಒ ಕಚೇರಿ ಇದೆ.
ಬಿಇಒ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದು ಶಾಸಕ ಸಂಜೀವ ಮಠಂದೂರು ಅವರ ಗಮನಕ್ಕೂ ಬಂದಿದೆ. ಅವರು ಸದ್ಯಕ್ಕೆ ಕಚೇರಿಯನ್ನು ಸ್ಥಳಾಂ ತರಿಸಲು ಸೂಚಿಸಿದ್ದಾರೆ. ತಾ.ಪಂ. ಕಟ್ಟಡ ಇಲ್ಲವೇ ಗುರುಭವನಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ಎರಡೂ ಕಡೆ ಕೆಲವು ಮೂಲ ಸೌಕರ್ಯ ಕಲ್ಪಿಸಬೇಕಾಗಿದ್ದು, ನಮ್ಮ ಇಲಾಖೆಯಲ್ಲಿ ಸದ್ಯ ಅನುದಾನ ಲಭ್ಯವಿಲ್ಲ ಎಂದು ಬಿಇಒ ಲೋಕೇಶ್ ಹೇಳಿದ್ದಾರೆ.
ಹೊಸ ಕಟ್ಟಡ ಯೋಜನೆ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಮೊದಲು ಯೋಜನೆ ತಯಾರಿಸ ಲಾಗಿದ್ದು, ಇದು ಹಳೆಯದಾದ ಕಾರಣ ಹೊಸದಾಗಿ ನಕಾಶೆ ತಯಾರಿಸಲು ಶಾಸಕ ಸಂಜೀವ ಮಠಂದೂರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ. ಅದರಂತೆ ಇಲಾಖೆ ವತಿಯಿಂದ ಬಿಇಒ ಕಚೇರಿಯಿಂದ ಮಾಹಿತಿ ಪಡೆಯಲಾಗಿದ್ದು, ಶೀಘ್ರ ಹೊಸ ಯೋಜನೆ ರೂಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ. ರಾಜಾರಾಂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.