ಪುತ್ತೂರು ನಗರ: 200ಕ್ಕೂ ಅಧಿಕ ಅನಧಿಕೃತ ಅಂಗಡಿಗಳು
ಉದ್ಯಮ ಪರವಾನಿಗೆ ರಹಿತ ಅಂಗಡಿಗಳಿಗೆ ಬೀಗ ಹಾಕಲು ಸಿದ್ಧತೆ
Team Udayavani, Jul 22, 2022, 10:38 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪತ್ರವನ್ನೇ ಪಡೆಯದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದ್ದು ಅಂತಹ ಅಂಗಡಿಗಳಿಗೆ ನಗರಸಭೆ ಬೀಗ ಜಡಿಯಲು ಮುಂದಾಗಿದೆ.
ಉದ್ದಿಮೆ ನಡೆಸುವ ಅಂಗಡಿ ಮಾಲಕರು ಅಧಿನಿಯಮದ ಪ್ರಕಾರ ಪರವಾನಿಗೆ ಪತ್ರ ಪಡೆದೆ ವ್ಯವಹಾರ ಮಾಡಬೇಕು. ಉದ್ಯಮ ಪರವಾನಿಗೆ ಪತ್ರ ಇಲ್ಲದಿದ್ದರೆ ಅದನ್ನು ಅನಧಿಕೃತ ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕೃತ, ಅನಧಿಕೃತ ಅಂಗಡಿ ಪತ್ತೆ ಕಾರ್ಯ ನಡೆಸಲಾಗಿದೆ.
ಅನಧಿಕೃತ ಅಂಗಡಿ ಗುರುತು
ಪರವಾನಿಗೆ ಪಡೆದ ಕಟ್ಟಡದಲ್ಲಿ ವ್ಯವಹಾರ ಆರಂಭಿಸುವ ಮೊದಲ ಅಂಗಡಿ ಮಾಲಕ ನಗರಸಭೆಗೆ ಅರ್ಜಿ ಸಲ್ಲಿಸಿ (ಆನ್‌ಲೈನ್) ಉದ್ಯಮ ಪರವಾನಿಗೆ ಪಡೆಯಬೇಕು. ಪ್ರತೀ ವರ್ಷ ಪರವಾನಿಗೆ ಪತ್ರವನ್ನು ನವೀಕರಿಸಬೇಕು. ಆದರೆ ಪುತ್ತೂರು ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪಡೆದು ಕೊಳ್ಳದೆ ವ್ಯಾಪಾರ ವ್ಯವಹಾರ ನಡೆಸುತ್ತಿದೆ. ಇದು ಕಾನೂನು ಬಾಹಿರವಾಗಿದ್ದು ಈ ಹಿನ್ನೆಲೆಯಲ್ಲಿ ಪೌರಾ ಯುಕ್ತರ ನೇತೃತ್ವದ ಅಧಿಕಾರಿಗಳ ತಂಡವು ಅಂತಹ ಅಂಗಡಿಗಳನ್ನು ಗುರುತು ಮಾಡಿದೆ.
ಬೀಗ ಜಡಿಯುವಿಕೆ
ಪ್ರತೀ ಹತ್ತು ವಾರ್ಡ್‌ಗಳಿಗೆ ಒಂದು ತಂಡದಂತೆ ಒಟ್ಟು ಮೂರು ತಂಡ ರಚಿಸಲಾಗಿದೆ. ಈ ತಂಡವು ವಾರ್ಡ್ ವಾರು ಸಮೀಕ್ಷೆ ನಡೆಸುತ್ತಿದ್ದು ಉದ್ಯಮ ಪರವಾನಿಗೆ ರಹಿತವಾಗಿ ವ್ಯವಹಾರ ನಡೆಸುವ ಅಂಗಡಿಗೆ ನೋಟಿಸ್ ನೀಡಿದೆ. ನೋಟಿಸ್ ಸ್ವೀಕರಿಸಿದ ಮೂರು ದಿನದೊಳಗೆ ಉದ್ಯಮ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಿ ಪರವಾನಿಗೆ ಪತ್ರ ಪಡೆಯಬೇಕು. ತಪ್ಪಿದಲ್ಲಿ ಎಚ್ಚರಿಕೆ ನೀಡಿದ ಮೂರು ದಿನದಲ್ಲಿ ಅಂಗಡಿಗೆ ಬೀಗ ಜಡಿಯಲು ನಗರಸಭೆ ನಿರ್ಧರಿಸಿದೆ.
ಗೂಡಂಗಡಿಗಿಲ್ಲ ಉದ್ಯಮ ಪತ್ರ
ಬೀದಿ ಬದಿ ವ್ಯಾಪಾರ ಹಾಗೂ ಗೂಡಂಗಡಿಗಳಿಗೆ ಉದ್ಯಮ ಪರವಾನಿಗೆ ಪತ್ರದ ಆವಶ್ಯಕತೆ ಇಲ್ಲ. ಪುತ್ತೂರು ನಗರದಲ್ಲಿ 75 ಗೂಡಂಗಡಿಗಳಿಗೆ ನಗರಸಭೆ ವತಿಯಿಂದ ಅನುಮತಿ ನೀಡಲಾಗಿದೆ. ಗೂಡಂಗಡಿ ತೆರೆಯುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ನಗರಸಭೆಯ ಅನುಮತಿ ಪಡೆದುಕೊಳ್ಳದೆ ಏಕಾಏಕಿ ಗೂಡಂಗಡಿ ತೆರೆದರೆ ಅದು ನಿಯಮಕ್ಕೆ ವಿರುದ್ಧ ಎಂದಾಗಿ ಅನಧಿಕೃತ ಅಂಗಡಿ ಸಾಲಿಗೆ ಸೇರುತ್ತದೆ.
1600 ಮಂದಿ ನವೀಕರಣಕ್ಕೆ ಬಾಕಿ
ಪುತ್ತೂರು ನಗರಸಭೆಯಲ್ಲಿ ಕಳೆದ ವರ್ಷ 2749 ಪರವಾನಿಗೆದಾರರ ಪೈಕಿ 154 ಮಂದಿ ನವೀಕರಣ ಮಾಡಿಲ್ಲ. ಈ ವರ್ಷ 2976 ಉದ್ಯಮ ಪರವಾನಿಗೆದಾರರಿದ್ದು 1600 ಮಂದಿ ನವೀಕರಣಕ್ಕೆ ಬಾಕಿ ಇದ್ದಾರೆ. 1424 ಮಂದಿ ಮಾತ್ರ ನವೀಕರಿಸಿದ್ದಾರೆ. ಎಪ್ರಿಲ್, ಮೇ ಒಳಗೆ ನವೀಕರಿಸದೆ ಇರುವ ಪರವಾನಿಗೆದಾರರು ಪ್ರತಿ ದಿನಕ್ಕೆ ಇಂತಿಷ್ಟು ದಂಡ ವಿಧಿಸಿ ನವೀಕರಿಸಬೇಕಿದೆ.
ನಗರದಲ್ಲಿ 150 ರಿಂದ 200 ರ ತನಕ ಅನಧಿಕೃತ ಅಂಗಡಿಗಳು ಇರುವುದನ್ನು ಗುರುತಿಸಲಾಗಿದೆ. ಆ ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ಉದ್ಯಮ ಪರವಾನಿಗೆ ಪತ್ರ ಪಡೆದುಕೊಳ್ಳದಿದ್ದರೆ ಅಂತಹ ಅಂಗಡಿಗಳಿಗೆ ನಗರಸಭೆಯ ವತಿಯಿಂದಲೇ ಬೀಗ ಜಡಿಯಲಾಗುವುದು. – ಮಧು ಎಸ್. ಮನೋಹರ್ ಪೌರಾಯುಕ್ತ, ನಗರಸಭೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.