ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್ ನೀಡದೆ ನಿಂದಿಸಿದ ಮಾಲಕನ ವಿರುದ್ಧ ಕೇಸ್ ದಾಖಲು
Team Udayavani, May 8, 2021, 5:27 PM IST
ಸಾಂದರ್ಭಿಕ ಚಿತ್ರ
ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್‌ನ್ನು ನೀಡದೆ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಘಟನೆಯ ಕುರಿತು ಪುತ್ತೂರಿನ ವೈದ್ಯೆ ಚೇತನಾ ಎಂಬವರು ನೀಡಿದ್ದಾರೆ. ದೂರಿನಂತೆ ಸುಳ್ಯದ ಗುತ್ತಿಗಾರು ನಿವಾಸಿಯಾಗಿರುವ, ಬನ್ನೂರಿನಲ್ಲಿರುವ ‘ಡೆಲಿವರಿ ಕೊರಿಯರ್ ಸಂಸ್ಥೆ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ವೈದ್ಯೆಯೊಬ್ಬರಿಗೆ ಅವರ ಸ್ನೇಹಿತರಿಂದ ಪಾರ್ಸೆಲ್ ಒಂದು ಬರುವುದಿತ್ತು. ಪಾರ್ಸೆಲ್‌ನ ಮೊತ್ತವನ್ನು ಮೊದಲೇ ಪಾವತಿಸಲಾಗಿತ್ತು. ಎಪ್ರಿಲ್ 19ರೊಳಗೆ ಆ ಪಾರ್ಸೆಲ್ ವಾರಸುದಾರರಾದ ವೈದ್ಯೆಯನ್ನು ತಲುಪಬೇಕಿತ್ತು. ಆದರೆ ತಲುಪದೇ ಇದ್ದಾಗ, ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ‘ಡೆಲಿವರ್ಡ್ ಟು ಕಸ್ಟಮರ್’ ಎಂದು ವೈದ್ಯೆಯವರ ಸಹಿಯನ್ನು ಹಾಕಿ ಅದಾಗಲೇ ಕೊರಿಯರ್ ಪಾರ್ಸೆಲ್‌ನ್ನು ಸ್ವೀಕರಿಸಿರುವ ವಿಚಾರ ತಿಳಿದು ಬಂದಿತ್ತು.
ಇದನ್ನೂ ಓದಿ :ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ
ಈ ಬಗ್ಗೆ ವಿಚಾರಿಸಲೆಂದು ವಾರಿಸುದಾರರಾದ ವೈದ್ಯರು ಎಪ್ರಿಲ್ 19ರಂದು ಬನ್ನೂರಿನಲ್ಲಿರುವ ಡೆಲಿವರಿ ಸಂಸ್ಥೆಯ ಫ್ರಾಂಚೈಸಿಗೆ ತೆರಳಿ ಪ್ರಶ್ನಿಸಿದ್ದರು. ಈ ಸಂದರ್ಭ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಾರ್ಸೆಲ್‌ನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಾರಿಸುದಾರರು ದೂರು ನೀಡಿದ್ದರು. ದೂರು ಸ್ವೀಕರಿಸಿದ ಪುತ್ತೂರು ನಗರ ಠಾಣಾ ಪೊಲೀಸರು ರಾಜ ಮಾವಿನಕಟ್ಟೆ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 506ರನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
Bantwal: ಬೀದಿ ಬದಿ ವ್ಯಾಪಾರ ಸ್ಥಳಾಂತರ
Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಛಲವಾದಿ ನಾರಾಯಣಸ್ವಾಮಿ ಕುಟುಂಬ ಭೇಟಿ
Uppinangady:ಪ್ರಿ ವೆಡ್ಡಿಂಗ್ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ
Sullia: ಬಿದ್ದು ಸಿಕ್ಕಿದ್ದ ಚಿನ್ನದ ಸರವನ್ನು ಹಿಂದಿರುಗಿಸಿದ ಬಸ್ ಮಾಲಕರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.