Puttur; ತಂದೆ ಮಗನ ಕುಸ್ತಿ: 35 ಅಡಿಕೆ ಗಿಡ ನಾಶ!
Team Udayavani, Jan 3, 2024, 11:47 PM IST
ಪುತ್ತೂರು: ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾತಿ ವಿಚಾರದಲ್ಲಿ ತಂದೆ-ಮಗನ ನಡುವೆ ಜಂಗಿ ಕುಸ್ತಿ ಉಂಟಾಗಿ 35 ಅಡಿಕೆ ಗಿಡಗಳು ಧರೆಶಾಯಿಯಾದ ಘಟನೆ ಕುಂಬ್ರದ ಉಜಿರೋಡಿಯಲ್ಲಿ ಸಂಭವಿಸಿದೆ.
3 ವರ್ಷಗಳ ಹಿಂದೆ ಜಮೀನು ಮಾಲಕರು ಮಗನ ಜತೆ ವಾಸ್ತವ್ಯವಿದ್ದರು. ಒಟ್ಟಿಗೆ ಸಾರಣೆ ಕೆಲಸಕ್ಕೂ ಹೋಗುತ್ತಿದ್ದರು. ಪುತ್ರನಿಗೆ ತನ್ನ ವರ್ಗ ಜಾಗದ ಸ್ವಾಧೀನದಲ್ಲಿದ್ದ ಸರಕಾರಿ ಜಾಗವನ್ನು ಅಕ್ರಮ ಸಕ್ರಮದಡಿ ಅರ್ಜಿ ಹಾಕುವಂತೆ ತಿಳಿಸಿದ್ದರು. ಕಳೆದ ವರ್ಷ ಮಂಜೂರಾತಿ ಸಿಕ್ಕಿತ್ತು. ಹಕ್ಕುಪತ್ರ ಸಿಗಲು ಬಾಕಿ ಇತ್ತು.
ಜಾಗ ಮಂಜೂರಾತಿ ಬಳಿಕ ತಂದೆ-ಮಗನ ನಡುವೆ ಸಣ್ಣದಾಗಿ ಮುನಿಸು ಆರಂಭವಾಗಿದ್ದು, ವಿಕೋಪಕ್ಕೆ ತೆರಳಿ ಮಗನ ಜತೆ ಇರಲಾರೆ ಎಂದು ತಂದೆ ಪಕ್ಕದಲ್ಲಿರುವ ಮಗಳ ಮನೆಯಲ್ಲಿ ವಾಸ್ತವ್ಯದಲ್ಲಿ ತೊಡಗಿದ್ದರು. ಅಸಮಾಧಾನದ ಮುಂದುವರಿದ ಭಾಗವಾಗಿ ತಂದೆಯು ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗವನ್ನು ಮಗನಿಗೆ ನೀಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಲು ಪುತ್ತೂರಿಗೆ ತೆರಳಿದ್ದರು. ಜತೆಗೆ ಪುತ್ರಿಯೂ ಇದ್ದರು. ಹಕ್ಕು ಪತ್ರ ಮಗನಿಗೆ ನೀಡಲು ಅಧಿಕಾರಿಗಳು ಮುಂದಾದಾಗ ತಂದೆ ಆಕ್ಷೇಪ ಮಾಡಿದ್ದರಿಂದ ಅಧಿಕಾರಿಗಳು ನೀಡಲಿಲ್ಲ. ಆ ಬಳಿಕ ತಂದೆ ಮತ್ತು ಮಗ ಮನೆಗೆ ಹಿಂದಿರುಗಿದ್ದರು. ಅಷ್ಟೊತ್ತಿಗೆ ಮನೆಯ ಬಳಿ ನೆಡಲಾಗಿದ್ದ 35 ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದು ಕಂಡುಬಂತು. ಯಾರು ಕಡಿದಿದ್ದಾರೆ ಎಂಬುದು ಗೊತ್ತಾಗಿಲ್ಲ, ಮಗನೇ ಕಡಿದರಬಹುದು ಎಂದು ತಂದೆ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.