ಪುತ್ತೂರು: ರಸ್ತೆಗಿಳಿದ ಶೇ. 85 ಸರಕಾರಿ ಬಸ್
Team Udayavani, Sep 20, 2021, 3:00 AM IST
ಪುತ್ತೂರು: ದೀರ್ಘ ಸಮಯದಿಂದ ಕಾಡಿದ ಕೋವಿಡ್ ಸಂಕಷ್ಟದ ಬಳಿಕ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಬಸ್ ಓಡಾಟ ಸಂಖ್ಯೆ ಈಗ ಹೆಚ್ಚಳಗೊಂಡಿದ್ದು ಶೇ.85 ರಷ್ಟು ಬಸ್ ಓಡಾಟ ನಡೆಸುತ್ತಿವೆ.
ಇದೀಗ ಶಾಲಾ ಕಾಲೇಜು ಪುನಾರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರೂಟ್‌ಗಳಲ್ಲಿ ಬಸ್ ಓಡಾಟಕ್ಕೆ ಬೇಡಿಕೆ ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡು ಬರುವ ನಿರೀಕ್ಷೆ ಹೊಂದಲಾಗಿದೆ.
40 ಲಕ್ಷ ರೂ.ಆದಾಯ:
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗಕ್ಕೆ ಐದು ಘಟಕಗಳಲ್ಲಿ ಪ್ರತೀ ದಿನ 55 ಲಕ್ಷ ರೂ.ಆದಾಯ ಸಂಗ್ರಹವಾಗುತ್ತಿತ್ತು. ಕೋವಿಡ್ ಅನಂತರ ಸಂಚಾರ ವ್ಯವಸ್ಥೆ ಮೊಟಕುಗೊಂಡು ಕಳೆದ ಎರಡು ವರ್ಷಗಳಲ್ಲಿ ನಷ್ಟ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು. ತಿಂಗಳ ಅಂಕಿ-ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನೂ ಕೆಲವು ನಷ್ಟ ಅನುಭವಿಸುತ್ತವೆ. ಕೊರೊನಾ ಅನಂತರವಂತೂ ನಷ್ಟದ ಅಂತರ ಮತ್ತಷ್ಟು ಹೆಚ್ಚಾಗಿತ್ತು. ವಿಭಾಗ ವ್ಯಾಪ್ತಿಯಲ್ಲಿ 560 ಬಸ್‌ಗಳಿವೆ. ಲಾಕ್‌ಡೌನ್ ಪ್ರಾರಂಭದ ಕೆಲವು ತಿಂಗಳು ಪೂರ್ಣ ನಷ್ಟ ಉಂಟಾಗಿತ್ತು. ಬಸ್‌ನ ಪ್ರತೀ ಕಿ.ಮೀ. ಓಡಾಟಕ್ಕೆ ತಲಾ 37 ರೂ. ಖರ್ಚು ತಗಲುತ್ತದೆ. ಪ್ರಸ್ತುತ ಪ್ರತೀ ದಿನ 40 ಲಕ್ಷ ರೂ. ಮಾತ್ರ ಸಂಗ್ರಹವಾಗುತ್ತಿದೆ. ಅಂದರೆ ಕೋವಿಡ್ ವಕ್ಕರಿಸಿದಾಗಿನ ಆದಾಯಕ್ಕೆ ಹೋಲಿಸಿದರೆ ನಷ್ಟ ಕಡಿಮೆ ಇದೆ.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿ 6 ತಾಲೂಕುಗಳನ್ನು ಒಳಗೊಂಡಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಿ.ಸಿ.ರೋಡ್ ಹಾಗೂ ಮಡಿಕೇರಿ ಘಟಕಗಳಿವೆ. ಒಟ್ಟು 2,400 ಮಂದಿ ಸಿಬಂದಿ ಇದ್ದಾರೆ. ಈಗಾಗಲೇ ಶೇ.85 ರಷ್ಟು ಬಸ್ ಓಡಾಟ ನಡೆಸುತ್ತಿವೆ. ಈ ತಿಂಗಳಲ್ಲಿ ಅದು ಶೇ.90 ಕ್ಕೆ ಏರಿಕೆ ಆಗಲಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.
ಪ್ರಯಾಣಿಕರ ಸಂಖ್ಯೆ ಹೆಚ್ಚಳ:
ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ ಪ್ರಮುಖ ದೇವಾಲಯಗಳು, ಶಾಲೆ ಕಾಲೇಜುಗಳು ತೆರೆದಿವೆ. ಇದು ಕೆಎಸ್‌ಆರ್‌ಟಿಸಿಗೆ ಲಾಭವಾಗಲಿದೆ ಎಂದು ಪರಿಗಣಿಸಲಾಗಿದೆ.
ಬಿ.ಸಿ.ರೋಡ್ ಘಟಕ: 45-48 ಶೆಡ್ಯೂಲ್ಗಳ ಬಸ್ ಓಡಾಟ :
ಬಂಟ್ವಾಳ: ಹಂತ ಹಂತವಾಗಿ ಚಟುವಟಿಕೆಗಳು ಚುರುಕಾಗುತ್ತಿದ್ದಂತೆ ಬಿ.ಸಿ.ರೋಡ್ ಘಟಕದಿಂದ 45-48 ಶೆಡ್ನೂಲ್‌ಗಳ ಬಸ್ಸು ಓಡಾಟ ನಡೆಸುತ್ತಿದೆ. ಬಿ.ಸಿ.ರೋಡ್ ಘಟಕದಲ್ಲಿ 107 ಬಸ್‌ಗಳಿದ್ದು, ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುದಾದರೆ 95 ಶೆಡ್ಯೂಲ್‌ಗಳಲ್ಲಿ ಬಸ್‌ಗಳು ಓಡಬೇಕು. ಬಿ.ಸಿ.ರೋಡ್‌ನಿಂದ ಗ್ರಾಮೀಣ ರೂಟ್‌ಗಳಿಗೆ ತೆರಳುವ ಬಸ್‌ಗಳು ಇನ್ನೂ ಕೂಡ ಎಲ್ಲ ಟ್ರಿಪ್‌ಗ್ಳನ್ನು ಆರಂಭಿಸಿಲ್ಲ. ಸದ್ಯಕ್ಕೆ ಪುತ್ತೂರು-ಸ್ಟೇಟ್‌ಬ್ಯಾಂಕ್, ಸ್ಟೇಟ್‌ಬ್ಯಾಂಕ್-ವಿಟ್ಲ, ಸ್ಟೇಟ್‌ಬ್ಯಾಂಕ್-ಬಿ.ಸಿ.ರೋಡ್ ರೂಟ್‌ಗಳಲ್ಲಿ ಹೆಚ್ಚಿನ ಬಸ್ ಓಡಾಡುತ್ತಿದೆ.
ಗ್ರಾಮೀಣ ರೂಟ್‌ಗಳಲ್ಲಿ ಬಸ್‌ಗಳು ಓಡಾಟ ನಡೆಸುತ್ತಿದ್ದರೂ, ಇನ್ನು ಕೂಡ ಎಲ್ಲ ಟ್ರಿಪ್‌ಗಳು ಪುನರಾರಂಭಗೊಂಡಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ ಹೆಚ್ಚಿನ ಬಸ್‌ಗಳು ಓಡಾಡಲಿವೆ ಎಂದು ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್ ಘಟಕ ವ್ಯವಸ್ಥಾಪಕ ಶ್ರೀಶ ಭಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.