ಪುತ್ತೂರು: 10 ಶಾಲೆಗಳಿಗೆ ಹೈ ಟೆನ್ಶ ನ್ ತಂತಿ ಟೆನ್ಶನ್| ಸ್ಥಳಾಂತರಕ್ಕೆ ಪೋಷಕರ ಆಗ್ರಹ
Team Udayavani, May 24, 2024, 2:49 PM IST
ಪುತ್ತೂರು: ಹಾಲಿ ವರ್ಷದ ಶೈಕ್ಷಣಿಕ ತರಗತಿಗಳು ಶೀಘ್ರ ಆರಂಭವಾಗಲಿದ್ದು, ಪುತ್ತೂರು -ಕಡಬ ಶೈಕ್ಷಣಿಕ ವ್ಯಾಪ್ತಿಯ 10 ಶಾಲೆಗಳಿಗೆ ಹೈ-ಟೆನ್ಶನ್ ತಂತಿಯ ಟೆನ್ಶನ್ ಕಾಡತೊಡಗಿದೆ.
ಕೊಠಡಿ ಶಿಥಿಲತೆ, ಅಪಾಯಕಾರಿ ಮರಗಳಿರುವ ಸಮಸ್ಯೆಗಳ ಮಧ್ಯೆ ಶಾಲಾ ಆವರಣದಲ್ಲಿ ಹಾದು ಹೋಗಿರುವ ಹೈ- ಟೆನ್ಶನ್ ವಿದ್ಯುತ್ ತಂತಿಯ ಅಪಾಯದ ಕುರಿತು ಶಿಕ್ಷಣ ಇಲಾಖೆ ಕೂಡಲೆ ಮೆಸ್ಕಾಂ ಗಮನಕ್ಕೆ ತರಬೇಕಿದೆ. ಜತೆಗೆ ಮೆಸ್ಕಾಂ ಸಹ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಈ ವರ್ಷವನ್ನೂ ವಿದ್ಯಾರ್ಥಿಗಳು ಆತಂಕದಿಂದಲೇ ಕಳೆಯುವಂತಾಗಲಿದೆ.
ಹೈ ಟೆನ್ಶನ್‌ನದ್ದೆ ತಲೆ ಬಿಸಿ
ಒಟ್ಟು 10 ಶಾಲೆಗಳ ಆವರಣದಲ್ಲಿ ಹೈ ಟೆನ್ಶನ್ ತಂತಿ ಹಾದು ಹೋಗಿದೆ. ಶಾಲಾ ಮಕ್ಕಳು ಸಂಚರಿಸುವ ಸ್ಥಳ ಇದಾಗಿದೆ. ತಂತಿ ಸ್ಥಳಾಂತರಿಸದಿದ್ದರೆ ಅಪಾಯ ಸಂಭವಿಸಿದರೆ ಎಂಬ ಆತಂಕ ವಿದ್ಯಾರ್ಥಿಗಳ ಪೋಷಕರದ್ದು. ವಾಳ್ಯ, ಕುಟ್ರಾಪ್ಪಾಡಿ ಶಾಲೆಯ ಕಟ್ಟಡ ದಿಂದ 10 ಮೀ., ಬಲ್ಯ ಶಾಲೆಯಿಂದ 20 ಮೀ., ಮುಕ್ವೆ ಶಾಲೆಯಲ್ಲಿ 40 ಮೀ. ದೂರ ದಲ್ಲಿ ಹೈ ಟೆನ್ಶನ್ ತಂತಿ ಹಾದು ಹೋಗಿದ್ದರೆ, ಉಳಿದ ಹಲವು ಶಾಲೆಗಳಲ್ಲಿ 50 ಮೀ. ವ್ಯಾಪ್ತಿಯೊಳಗೆ ಹಾದು ಹೋಗಿದೆ.
ಮಳೆ, ಸಿಡಿಲಿಗೆ ಆತಂಕ
ಜೂನ್ ತಿಂಗಳು ಸಹಜವಾಗಿ ಮಳೆಗಾಲದ ಸಮಯ. ಈ ವೇಳೆ ಮಿಂಚು, ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತದೆ. ವಿದ್ಯುತ್ ತಂತಿ ಹಾದು ಹೋಗಿರುವ ಸ್ಥಳಗಳಲ್ಲಿ ಸಿಡಿಲಿನ ಆಘಾತದ ಆತಂಕ ಹೆಚ್ಚು. ಪ್ರಾಥಮಿಕ ಶಾಲಾ ಮಕ್ಕಳಿಗೆ ಅಪಾಯದ ಬಗ್ಗೆ ತಿಳಿವಳಿಕೆ ಕಡಿಮೆ ಇರುವ ಕಾರಣ ವಿದ್ಯುತ್ ತಂತಿ ಕೆಳಭಾಗದಲ್ಲಿ ಓಡಾಡುವಾಗ ಅಪಾಯ ಸಂಭವಿಸಿದರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆಡಳಿತಕ್ಕೆ ವರದಿ ಸಲ್ಲಿಕೆ
ಆಯಾ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಲಾವಾರು ನೀಡಲಾದ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಜಿ.ಪಂ.ಗೆ ಸಲ್ಲಿಸಿವೆ. ಇದರಲ್ಲಿ ಶಾಲಾ ಆವರಣದಲ್ಲಿ ಹಾದು ಹೋಗಿರುವ ಹೈ-ಟೆನ್ಶನ್ ತಂತಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಈಗಾಗಲೇ ಅರಿಯಡ್ಕ ಶಾಲಾ ಆವರಣದಲ್ಲಿನ ವಿದ್ಯುತ್ ತಂತಿ ಸ್ಥಳಾಂತರದ ಬಗ್ಗೆ ಮೆಸ್ಕಾಂ ಗಮನಕ್ಕೆ ತರಲಾಗಿದೆ. ನಿಡ³ಳ್ಳಿ ಶಾಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಅನುದಾನದ ಕೊರತೆ ಇದೆ. ಗಂಡಿಬಾಗಿಲು ಶಾಲಾ ವಠಾರದಲ್ಲಿ ಮಕ್ಕಳು ಹೋಗದಂತೆ ಎಚ್ಚರಿಸಲಾಗಿದೆ. ಕಳಾರ ಶಾಲಾ ವಠಾರದ ವಿದ್ಯುತ್ ತಂತಿಯ ಬಗ್ಗೆ ಮೆಸ್ಕಾಂ ಪರಿಶೀಲನೆ ನಡೆಸಿದೆ ಎಂದು ಆಯಾ ಶಾಲೆಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ. ಜಿ.ಪಂ.ಈ ಅಂಶವನ್ನು ಮೆಸ್ಕಾಂ ಗಮನಕ್ಕೆ ತಂದು ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಆವರಣದಲ್ಲಿ ತಂತಿ ಹಾದು ಹೋಗಿರುವ ಶಾಲೆಗಳು
1. ಸ.ಹಿ.ಪ್ರಾ.ಶಾಲೆ ಅರಿಯಡ್ಕ
2. ಸ.ಹಿ.ಪ್ರಾ.ಶಾಲೆ ಮುಂಡೂರು-1
3. ಸ.ಉ.ಹಿ.ಪ್ರಾ.ಶಾಲೆ ಗಂಡಿಬಾಗಿಲು,
4. ಸ.ಉ.ಹಿ.ಪ್ರಾ.ಶಾಲೆ ನೇರ್ಲ
5. ಸ.ಹಿ.ಪ್ರಾ.ಶಾಲೆ ಕಳಾರ
6. ಸ.ಹಿ.ಪ್ರಾ.ಶಾಲೆ ಬಲ್ಯ
7. ಸ.ಹಿ.ಪ್ರಾ.ಶಾಲೆ ಕುಂಜೂರು ಪಂಜ
8. ಸ.ಹಿ.ಪ್ರಾ.ಶಾಲೆ ಮುಕ್ವೆ
9. ಸ.ಕಿ.ಪ್ರಾ ಶಾಲೆ ವಾಳ್ಯ
10. ಸ.ಹಿ.ಪ್ರಾ ಶಾಲೆ, ಕುಟ್ರಾಪ್ಪಾಡಿ
ಸರಕಾರಿ ಶಾಲೆಗಳ ಆವರಣದಲ್ಲಿ ಹೈ-ಟೆನ್ಶ್ ನ್ ತಂತಿ ಹಾದು ಹೋಗಿದ್ದರೆ ಮೆಸ್ಕಾಂ ಗಮನಕ್ಕೆ ತರಬೇಕು. ಇಲಾಖೆ ಅದರ ಸ್ಥಳಾಂತರಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲಿದೆ. ಖಾಸಗಿ ಶಾಲೆಗಳ ಆವರಣವಾಗಿದ್ದರೆ ಖಾಸಗಿಯಾಗಿ ಅವರೇ ಮಾಡಿಸಿಕೊಳ್ಳಬೇಕು. ಕೆಲ ವರ್ಷಗಳ ಹಿಂದೆ ಹಲವು ಶಾಲೆಗಳ ಆವರಣದಲ್ಲಿನ ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದೇವೆ.
ರಾಮಚಂದ್ರ ಎ.,
ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ಪುತ್ತೂರು
ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಶಾಲೆಗಳ ಪಟ್ಟಿ ಮಾಡಿ ಮೆಸ್ಕಾಂಗೆ ಕಳುಹಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತೀ ಶಾಲೆಗಳ ಮೇಲೆ ನಿಗಾ ಇರಿಸಲಾಗಿದೆ.
ಲೋಕೇಶ್ ಎಸ್.ಆರ್.,
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
*ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.