ಪುತ್ತೂರು: ಕೋಟಿ-ಚೆನ್ನಯ ಕಂಬಳ ಸಮಾಪನ
Team Udayavani, Jan 21, 2019, 5:36 AM IST
ಪುತ್ತೂರು : ಕಂಬಳ ತುಳು ನಾಡಿನ ಹೆಮ್ಮೆ ಹಾಗೂ ಗೌರವದ ಪ್ರತೀಕ. ನಮ್ಮ ಕಂಬಳ ಎನ್ನುವ ಕಂಬಳಾಭಿಮಾನಿಗಳ ಪ್ರೀತಿಯ ಪ್ರೋತ್ಸಾಹ ಕಂಬಳವನ್ನು ನಿರಂತರ ಉಳಿಸಿಕೊಂಡು ಬೆಳೆಸುತ್ತಿದೆ ಎಂದು ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ಅವರು ಹೇಳಿದರು.
ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ 26 ನೇ ವರ್ಷದ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡು ಕರೆ ಕಂಬಳದ ಸಮಾರೋಪ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪುತ್ತೂರು ಕಂಬಳ ಅತ್ಯಂತ ಸ್ಮರಣೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಲನಚಿತ್ರ ರಂಗದ ಸುಧಾಕರ ಭಂಡಾರಿ ಅವರು ಕಂಬಳದ ಹಿನ್ನೆಲೆಯನ್ನು ನೆನಪಿಸಿ ಕೊಂಡು ಕಂಬಳ ಜತೆ ಬೆಸೆದುಕೊಂಡಿರುವ ಕಂಬಳದ ಹಾಡುಗಳನ್ನು ಹಾಡಿದರು. ಕಂಬಳದ ತೀರ್ಪುಗಾರ, ಜಿಲ್ಲಾ ಕಂಬಳ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಎನ್. ವಿಜಯಕುಮಾರ್ ಕಂಗಿನಮನೆ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಕಂಬಳ ಕೂಟಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ಸಮಯ ಪಾಲನೆಯಲ್ಲಿ ಇನ್ನಷ್ಟು ಗಮನಹರಿಸುವ ಅಗತ್ಯವಿದೆ ಎಂದರು.
ಅಣ್ಣನ ಸಹಕಾರ
ಅಧ್ಯಕ್ಷತೆ ವಹಿಸಿದ ಕಂಬಳ ಸಮಿ ತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ರಾಜ್ಯ ಆ್ಯತ್ಲೆಟಿಕ್ ಅಸೋಸಿ ಯೇಶನ್ ಅಧ್ಯಕ್ಷ, ಅಣ್ಣ ಎನ್. ಮುತ್ತಪ್ಪ ರೈ ಅವರ ಅವಿರತ ಬೆಂಬಲ, ಸಹಕಾರದಿಂದ ಪುತ್ತೂರಿನ ಕಂಬಳ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಅಭಿನಂದನೆ, ಬಹುಮಾನ ವಿತರಣೆ
ಸಮಾರಂಭದಲ್ಲಿ . ಕಂಬಳದ ತೀರ್ಪುಗಾರರು, ಮುಖ್ಯ ಸ್ವಯಂ ಸೇವಕರನ್ನು ಗೌರವಿಸಲಾಯಿತು. . ಕಂಬಳ ಕೋಣಗಳ ವಿಜೇತ ಮಾಲಕರು ಹಾಗೂ ಓಡಿಸಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಕೋಟಿ -ಚೆನ್ನಯ ಕಂಬಳ ಸಮಿತಿಯ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಅತಿಥಿ ಗಣ್ಯರಾದ ಶಿವರಾಮ ಆಳ್ವ, ಉಮೇಶ್ ನಾಡಾಜೆ, ಭೋಜರಾಜ ರೈ, ಅಶ್ವಿನ್ ರೈ, ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಕಾವ್ಯಾ ಶೆಟ್ಟಿ, ಭಾಗ್ಯೇಶ್ ರೈ, ಅಮಿತ ಚಂದ್ರಹಾಸ ಶೆಟ್ಟಿ, ಕಾವ್ಯಾ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಅಳಿಕೆಮಜಲು, ಸುಶಾಮ್ ಶೆಟ್ಟಿ, ರೋಶನ್ ರೈ ಸುಭಾಶ್ ರೈ, ಪ್ರಸನ್ನ ಕುಮಾರ್ ಶೆಟ್ಟಿ, ದಿನೇಶ್ ಪಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.